ನಶೆಯ ಗುಂಗಿನಲ್ಲಿ ಬಾಲಿವುಡ್
ಸುಶಾಂತ್ ಸಿಂಗ್‌ನ ಆತ್ಮಹತ್ಯೆಯ ಪ್ರಕರಣದಲ್ಲಿ ರಿಯಾ ಚಕ್ರರ್ತಿಯ ಹೆಸರು ಇನ್ನಷ್ಟು ಸಿಕ್ಕಾಗಿ ಗೋಜಲಾಗಿ ಕೇಳಿಬರುತ್ತಿದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ..... ಡ್ರಗ್ ಡೀಲಿಂಗ್ ಮಾಫಿಯಾ! ಈಕೆ ಸುಶಾಂತನಿಗೆ ಡ್ರಗ್ಸ್ ಒದಗಿಸುತ್ತಿದ್ದಳು ಎಂಬುದೇ ಹೊಸ ಆರೋಪ. ಬಾಲಿವುಡ್ (ಇದೀಗ ಇಂದ್ರಜಿತ್ ಲಂಕೇಶ್‌ರ ಮುಖಾಂತರ ಸ್ಯಾಂಡಲ್ ವುಡ್ ಸ್ಟಾರ್‌ಗಳೂ ಕಡಿಮೆಯೇನಲ್ಲ ಎಂದು ಮೀಡಿಯಾ ಹೇಳುತ್ತಿದೆ!) ಸ್ಟಾರ್‌ಗಳಿಗೂ ಡ್ರಗ್ಸ್ ಡೀಲಿಂಗ್‌ಗೂ ಅನಾದಿಕಾಲದ ನಂಟು. ಸೆಲೆಬ್ರಿಟಿ ಬರ್ತ್ ಡೇ ಪಾರ್ಟಿಗಳು ನಡುರಾತ್ರಿ ದಾಟುತ್ತಿದ್ದಂತೆ ರೇವ್ ಪಾರ್ಟಿಗಳಾಗುವುದು ಹೊಸದೇನಲ್ಲ. ಕಣ್ಣು ಕುಕ್ಕು ಗ್ಲಾಮರ್ ಬೆಡಗಿನ ಲೋಕದ ಮಧ್ಯೆ ಇದೇನೇನೂ ದೊಡ್ಡ ವಿಷಯವಲ್ಲ, ಸಾಮಾನ್ಯ ಜನರಿಗೆ ತಿಳಿದಾಗ ಬೆಚ್ಚಿಬೀಳುತ್ತಾರಷ್ಟೆ. ಸಿನಿಮಾವನ್ನು ಸಮಾಜದ ಕೈಗನ್ನಡಿಯಾಗಿಸುವ ಈ ಮಹಾನ್ ತಾರೆಯರು ಸಾಮಾಜಿಕ ಶಾಪವಾಗಿರುವ ನಶೆಯಲ್ಲಿ ಎಷ್ಟು ಮುಳುಗಿಹೋಗಿದ್ದಾರೆಂದರೆ ಅವರು ಮತ್ತೆ ಮಾಮೂಲಿ ಆಗುತ್ತಾರೆಯೇ ಎನಿಸುವಂತಾಗಿದೆ.
ಅರ್ಜುನನನ್ನು ನೆಪೋ ಪ್ರಾಡಕ್ಟ್ ಎನ್ನುತ್ತಿರುವವರು ಯಾರು?
ಇತ್ತೀಚೆಗೆ ಒಂದು ಅನಾಮಿಕ ಚಿತ್ರಕ್ಕೆ ಅರ್ಜುನ್ ಕಪೂರ್‌ನನ್ನು ನಾಯಕನೆಂದು ಘೋಷಿಸಲಾಯಿತು. ಚಿತ್ರೀಕರಣ ಶುರುವಾಗುವುದಿರಲಿ, ಮೀಡಿಯಾದಲ್ಲಿ ಈ ಘೋಷಣೆ ಬರುತ್ತಿದ್ದಂತೆಯೇ ಟ್ರೋಲಿಗರು ಸಕ್ರಿಯರಾದರು. ಅರ್ಜುನ್ ಕುರಿತಾಗಿ ವ್ಯಂಗ್ಯಾತ್ಮಕ ಮೀವ್ಸ್ ಪುಂಖಾನುಪುಂಖವಾಗಿ FBನಲ್ಲಿ ಹರಿದಾಡತೊಡಗಿತು. ಎಲ್ಲೆಲ್ಲೂ ಮಕ್ಕಳನ್ನು ಪೋಷಿಸಿಕೊಳ್ಳುವ ಗಾಡ್ ಫಾದರ್‌ಗಳ ಈ ಝಮಾನದಲ್ಲಿ ಅರ್ಜುನನಿಗೆ ಅವಕಾಶ ನೀಡಿದ ನಿರ್ಮಾಪಕರು ಅನಾಡಿಗಳಾಗಿರಬೇಕು ಅಥವಾ ಗಟ್ಟಿ ಗುಂಡಿಗೆಯವರು ಎಂದೂ ಟೀಕಿಸಿದರು. ಅರ್ಜುನನನ್ನು ನಂಬಿದರೆ ಚಿತ್ರ ಗೋತಾ ಎಂದು ಈಗಾಗಲೇ ಹಲವು ಸಲ ಸಾಬೀತಾಗಿದೆ. ಕೆಲವರಂತೂ ಇವನನ್ನು ನೆಪೋ ಪ್ರಾಡಕ್ಟ್ ಎಂದು ಕಟಕಿಯಾಡಿದ್ದಾರೆ. ಮಲೈಕಾ ಅರೋರಾಳ (ಇವನಿಗಿಂತಲೂ ಹಿರಿಯವಳಾದ, ಸಲ್ಮಾನ್‌ನ ಮಾಜಿ ಅತ್ತಿಗೆ, ಡೈವೋರ್ಸಿ) ಜೊತೆ ಇವನ ಅಫೇರ್ ಟ್ರೋಲಿಗರ ವ್ಯಂಗ್ಯಕ್ಕೆ ಕಾರಣವಾಗಿತ್ತು. ಈಗ ಕಳೆ ಮೇಲೆ ಮಳೆ ಎಂಬಂತೆ ಇದೂ ಸೇರಿಕೊಂಡಿತು!
ಗೃಹ ಹಿಂಸೆಗೆ ಬಲಿಯಾದ ಟಿವಿ ಸ್ಟಾರ್
ಟಿವಿ ಧಾರಾವಾಹಿ `ಕುಂಕುಂ ಭಾಗ್ಯ' ನಾಯಕಿ ನಟಿ ತೃಪ್ತಿ ಶಂಖಧರ್, ಇತ್ತೀಚೆಗೆ FBಗೆ ತನ್ನ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾಳೆ. ಅದರಲ್ಲಿ ಅವಳ ತಂದೆ ಸ್ವಂತ ಮಗಳನ್ನೇ ಹೊಡೆದೂ ಬಡಿದೂ ಸಾಯಿಸಿಬಿಡುವೆ ಎನ್ನುವ ಘೋರ ಬೆದರಿಕೆಗಳಿವೆ! ತಂದೆ ತನ್ನನ್ನು ತಾನು ತೋರಿಸಿದ ವರನನ್ನೇ ತಕ್ಷಣ ಮದುವೆಯಾಗುವೆ, ಮದುವೆಯಾಗುವೆ ಎಂದು ಶೋಷಿಸುತ್ತಿದ್ದಾರೆಂದು ಅವಲತ್ತುಕೊಂಡಿದ್ದಾಳೆ. ಇದು ಸುಳ್ಳೋ ನಿಜವೋ ಕೆಲವೇ ದಿನಗಳಲ್ಲಿ ಗೊತ್ತಾಗೇ ಆಗುತ್ತದೆ. ಇದರಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ಸುಶಿಕ್ಷಿತ, ಅನುಕೂಲಸ್ಥ ಪರಿವಾರದ ಕಲಿತು, ಸಂಪಾದಿಸುವ ಹೆಣ್ಣುಮಕ್ಕಳೂ ಸಹ ಇಂದಿನ ಕಾಲದಲ್ಲೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದು. ಈ ಘಟನೆ ಖಂಡನೀಯ, ಸಮಾಜದ ಕರಾಳ ಮುಖ ತೋರಿಸುತ್ತದೆಂಬುದೂ ನಿಜ, ಆದರೆ ಸುಶಾಂತನಿಗೆ ಸಿಕ್ಕಂತೆ ಕರುಣಾ ಪ್ರವಾಹದ ನೆಪದಿಂದ ಟಿವಿ ಚಾನೆಲ್ ಸುಧಾರಿಸುವ ಇನ್ನೊಂದು ಹುನ್ನಾರ ಆಗಬಾರದು.
ತಮ್ಮ ಬಯೋಪಿಕ್ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ!
ತಮ್ಮ ಕೆಲಸಗಳಿಗಿಂತ ಹೆಚ್ಚಾಗಿ ವಿವಾದಗಳಿಂದಾಗಿಯೇ ಖ್ಯಾತನಾಮರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸುದ್ದಿಯಲ್ಲಿರಲು ಸದಾ ಏನಾದರೂ ಮಾಡುತ್ತಲಿರುತ್ತಾರೆ. `ಸತ್ಯ, ಸರ್ಕಾರ್, ಡರ್‌ನಾ ಮನಾ ಹೈ, ಡರ್‌ನಾ ಝರೂರಿ ಹೈ' ಇತ್ಯಾದಿ ದೆವ್ವದ ಸಿನಿಮಾಗಳಿಂದಲೇ ನೆಗೆಟಿವ್ ಪಬ್ಲಿಸಿಟಿ ಗಳಿಸಿದ್ದ ಈ ಭೂಪತಿ ಇದೀಗ ತನ್ನದೇ ಆತ್ಮಕಥೆಯ ಬಯೋಪಿಕ್ ಚಿತ್ರ ತಯಾರಿಸಲು ಹೊರಟಿರುವುದು ನಿಜಕ್ಕೂ ವಿಡಂಬನೆಯೇ ಸರಿ! ಒಬ್ಬರ ಸಾಧನೆ ಗುರುತಿಸಿ ಬೇರೆಯವರು ಅವರ ಬಯೋಪಿಕ್ ಮಾಡುವುದು ಲೋಕಾರೂಢಿ, ಆದರೆ ಈತ ತನ್ನ ಬಗ್ಗೆ ತಾನೇ ಟಾಂಟಾಂ ಸಾರುತ್ತಿರುವುದು ಯಾಕೋ ಅತಿ ಎನಿಸುತ್ತದೆ ಎಂದು FBನಲ್ಲಿ ಟ್ರೋಲಿಗರು ಕೆರಳಿದ್ದಾರೆ. ಇದಕ್ಕೂ ಭಯಂಕರ ವಿಷಯ ನಿಮಗೆ ಗೊತ್ತೇ? ಈ ಕರ್ಮಕಾಂಡಕ್ಕೆ ಪಾರ್ಟ್ ಬರುತ್ತದಂತೆ....! ಈ ಮೊದಲ ಭಾಗದಲ್ಲಿ ಅಂಥ ವಿಶೇಷವೇನಿದೆ ಎಂದು ತಿಳಿಯಲು ನೀವು ತುಸು ಕಾಯಲೇಬೇಕು. ತನ್ನ ಬಯೋಪಿಕ್‌ನಿಂದ ಹಲವಾರು ವಿವಾದಗಳು ಎದುರಾಗಲಿವೆ ಎಂದು ಚೆನ್ನಾಗಿಯೇ ಗೊತ್ತಿದೆ.