ದೀಪಿಕಾಳ ಕಷ್ಟಗಳು ಹೆಚ್ಚಲಿವೆಯೇ?

deepika

ಒಬ್ಬ ಮಾಜಿ ರಾ ಆಫೀಸರ್‌ ದೀಪಿಕಾಳ ಮೇಲೆ ಅವಳು ್ತ್ಯಾದಲ್ಲಿ ನಡೆದ ್ಯ ಪ್ರೊಟೆಸ್ಟ್ ನಲ್ಲಿ ಭಾಗವಹಿಸಲು 5 ಕೋಟಿ ಕೇಳಿದ್ದಳೆಂದು ಕಪೋಲಕಲ್ಪಿತ ಗಂಭೀರ ಆರೋಪ ಹೊರಿಸಿ, ಟೆನ್ಶನ್‌ ಹೆಚ್ಚಿಸಿದ್ದಾರೆ. ಇಷ್ಟು ದಿನ ಸಮಾಧಿಯಲ್ಲಿದ್ದ ಈ ಸಂಗತಿ ಈಗ ದಿಢೀರನೆ ಹೊರಗೆದ್ದು ಬಂದದ್ದು ಹೇಗೆ, ಯಾಕೆ ಎಂಬುದು ತರ್ಕಕ್ಕೆ ನಿಲುಕದ ವಿಷಯ. ಇದರಿಂದ ಆತಂಕಗೊಂಡ ದೀಪಿಕಾಳ ರಕ್ಷಣೆಗೆ ಧಾವಿಸಿರುವ ಸ್ವರಾ ಭಾಸ್ಕರ್‌ ತೇಪೆ ಹಚ್ಚುವ ಮಾತನಾಡಿ ಇನ್ನಷ್ಟು ಗೊಂದಲ ಹೆಚ್ಚಿಸಿದ್ದಾಳೆ. ಈಗ ಈ ವಿಷಯ ಎಲ್ಲಿಗೆ ಎಷ್ಟು ಸೀರಿಯಸ್‌ ಆಗಿ ಮುಟ್ಟುತ್ತದೋ ಗೊತ್ತಿಲ್ಲ, ದೀಪಿಕಾ ಬಲಿಯಾಗುವಳೋ? ಅಥವಾ ಆರೋಪ ಹೊರಿಸಿದ ಅಧಿಕಾರಿಯೋ?

ದಬಂಗ್‌ ಬೆಳಗಿದ ಕೆರಿಯರ್‌

danagal

ದಬಂಗ್‌ ಗರ್ಲ್ ಸಾನ್ಯಾ `ಶಕುಂತಲಾ ದೇವಿ' ಚಿತ್ರದಲ್ಲಿ ಅಂತಾರಾಷ್ಟ್ರಿಯ ಖ್ಯಾತಿವೆತ್ತ ಹ್ಯೂಮನ್‌ ಕಂಪ್ಯೂಟರ್‌ ಬೆಂಗಳೂರಿನ ಶಕುಂತಲಾರ ಪಾತ್ರ ನಿರ್ವಹಿಸಿದ ವಿದ್ಯಾಬಾಲನ್‌ಳ ಮಗಳ ಪಾತ್ರ ನಿರ್ವಹಿಸಿ, ವಿದ್ಯಾಳಂತೆಯೇ ಸೈ ಎನಿಸಿದ್ದಾಳೆ. `ದಬಂಗ್‌' ಚಿತ್ರದ ನಂತರ ಇವಳ ಅನೇಕ ಚಿತ್ರಗಳು ಬಂದ, ಹೋದ ಯಾರಿಗೂ ತಿಳಿಯಲೇ ಇಲ್ಲ. OTTಯಲ್ಲಿ ಅಮೇಝಾನ್‌ ಇತ್ಯಾದಿಗಳಲ್ಲಿ ಬಿಡುಗಡೆಗೊಂಡ ಈ ಚಿತ್ರದ ಯಶಸ್ಸಿನ ಮೇಲೆ ಸಾನ್ಯಾಳ ಕೆರಿಯರ್‌ ನಿಂತಿದೆ, ವಿದ್ಯಾ ಬಾಲನ್‌ ಗೆದ್ದಾಯ್ತು, ಇವಳ ಗತಿ ಏನಾಗುವುದೋ? ಹೇಗಾದರೂ ಈ ಚಿತ್ರ ಸಕ್ಸಸ್‌ ಆಗಿ ಮುಂದೆ ತನಗೊಂದಿಷ್ಟು ಪಾತ್ರಗಳು ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾಳೆ. ವಿದ್ಯಾಳಂಥ ಆಲದ ಮರದ ಮುಂದೆ ಈ ತುಂಬೆ ಗಿಡ ಬಿಸಿಲು ಕಂಡೀತೇ? ಕಾಲವೇ ನಿರ್ಧರಿಸಬೇಕಷ್ಟೆ.

ಹಿಂದಿಯ ಹೊಸ ನಾಗಿಣಿ ಆಗಿ ಹೀನಾ

hina

ಭಾರತೀಯ ಕಿರುತೆರೆಯಲ್ಲಿ ನಾಗಿಣಿಗಳ ಕಾಟ ಇಂದು ನಿನ್ನೆಯದಲ್ಲ. ಅಂದ ಕಾಲತ್ತಿಲೆ..... ಶ್ರೀದೇವಿಯ ಸೂಪರ್‌ ಡೂಪರ್‌ ಸಕ್ಸಸ್‌ `ನಾಗಿನ್‌' ಚಿತ್ರದಿಂದ ಆರಂಭವಾದ ಈ ವ್ಯಾಮೋಹ ಕಿರುತೆರೆ ಧಾರಾವಾಹಿಗಳಿಗೆ ಮಹಾಮಾರಿಯಾಗಿ ಆಕ್ರಮಿಸಿದೆ. ಹಿಂದಿಯಲ್ಲಂತೂ ಪಾರ್ಟ್‌-4 ಈಗಾಗಲೇ ಮುಗಿದಿವೆ. ಇದೀಗ ಈ ಕಪೋಲಕಲ್ಪಿತ ತಲೆಬಾಲವಿಲ್ಲದ ಧಾರಾವಾಹಿಯ 5ನೇ ಭಾಗ ಪ್ರಸಾರಗೊಳ್ಳಲಿದೆ. ಈ ಸಲ 5ನೇ ನಾಗಿಣಿಯಾಗಿ ಭುಸುಗುಟ್ಟಲಿರುವವಳು ಹೀನಾ ಖಾನ್‌. ಲಾಕ್‌ ಡೌನ್‌ ಕಾರಣ ಫ್ರೀಯಾಗಿದ್ದ ಹೀನಾ ಟಿಕ್‌ಟಾಕ್‌ ವಿಡಿಯೋ ಮಾಡಿದ್ದೂ ಮಾಡಿದ್ದೇ, ಟಿಕ್‌ಟಾಕ್‌ ಬ್ಯಾನ್‌ ಆದಾಗ ಇವೆಲ್ಲ ಹೀನಾಯವಾಗಿ ಸೋತ. ಯಾರಾದರೂ ಖ್ಯಾತ ನಿರ್ದೇಶಕರು ತನ್ನತ್ತ ಕೃಪಾದೃಷ್ಟಿ ಬೀರಬಾರದೇ ಎಂದು ಕಾದಿದ್ದೇ ಬಂತು, ಅದೇನೂ ನಡೆಯದೆ ಕಿರುತೆರೆಗೆ ಮತ್ತೆ ಶರಣಾಗಿ ಭುಸುಗುಟ್ಟುತ್ತಿದ್ದಾಳೆ. ಹೀನಾ ಬೇಬಿ, ನೀನು ಮಾತ್ರವಲ್ಲ ಎಷ್ಟೋ ಸ್ಟಾರಿಣಿಯರ ಗತಿ ಹೀಗೇ ಆಗಿದೆ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಬದುಕಿರೋ ಎನ್ನುತ್ತಾರೆ ಹಿತೈಷಿಗಳು.

ಇದೀಗ ಹೊಸ ಅವತಾರದಲ್ಲಿ ಆಯುಷ್ಮಾನ್

ayushman

ನಮ್ಮ ವಿಕ್ಕಿ ಡೋನರ್‌ ಅಂದ್ರೆ ಆಯುಷ್ಮಾನ್‌ ಖುರಾನಾ ಬಾಲಿವುಡ್‌ನಲ್ಲಿ ತನ್ನದೇ ಆದ ಗಟ್ಟಿ ಸ್ಥಾನ ಸ್ಥಾಪಿಸಿಕೊಂಡಿದ್ದಾನೆ. ಇವನ ಪ್ರತಿಯೊಂದು ಚಿತ್ರದ ಪಾತ್ರ ವಿಭಿನ್ನವಾಗಿದ್ದು, ಅಭಿಮಾನಿಗಳಿಗೆ ಹುಚ್ಚೆಬ್ಬಿಸುತ್ತದೆ. ನಂಬಲರ್ಹ ಮೂಲಗಳ ಸುದ್ದಿ ಪ್ರಕಾರ, ಈಗ ಈತ ಅಭಿಷೇಕ್‌ ಕಪೂರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಅಥ್ಲೀಟ್‌ನ ಪಾತ್ರದಲ್ಲಿ ಮಿಂಚಲಿದ್ದಾನೆ. ಇದಕ್ಕಾಗಿ ಈತ ಸಖತ್ ತಯಾರಿಗೆ ಇಳಿದಿದ್ದಾನೆ. ನಿರ್ದೇಶಕರ ಪ್ರಕಾರ ಇದು ಈತನ ಕೆರಿಯರ್‌ಗೇ ಸವಾಲಾಗಬಹುದಾದ ಟರ್ನಿಂಗ್‌ ಪಾಯಿಂಟ್‌ಪಾತ್ರವಂತೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ