ನಿಮಗೆ ನೆನಪಿರಬಹುದು, 2010ರಲ್ಲಿ ಮಿಸ್‌ ಯೂನಿವರ್ಸ್‌ ಇಂಡಿಯಾದ ಸೆಕೆಂಡ್‌ ರನ್ನರ್‌ ಅಪ್‌ ಎನಿಸಿದ ಯಶಸ್ವೀ ಮಾಡೆಲ್, ನಟಿ ಪೂಜಾ ಹೆಗಡೆ `ಮೊಹೆಂಜೋದಾರೋ' ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದಳು. ಮೂಲತಃ ಮಂಗಳೂರಿನ ತುಳು ಹುಡುಗಿ ಪೂಜಾ ಹೆಗಡೆ ನಂತರ ಬೆಳೆದಿದ್ದು, ಓದಿದ್ದು ಎಲ್ಲಾ ಮುಂಬೈ ನಿವಾಸಿಯಾಗಿ. ಈಕೆ ಮೊದಲು ದಕ್ಷಿಣದ ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿ ಸೈ ಎನಿಸಿದಳು. ಕನ್ನಡಕ್ಕೆ ಎಂಟ್ರಿ ಕೊಡು ಮೊದಲೇ ಬಾಲಿವುಡ್‌ ಇವಳನ್ನು ಕೈ ಬೀಸಿ ಕರೆದಿತ್ತು.

ಮೊಗಮುಡಿ, ರಂಗಸ್ಥಳಂ, ಇತ್ತೀಚಿನ ಅಲಾ ವೈಕುಂಠಪುರಂ ಲೋ ಚಿತ್ರಗಳಿಂದ ಕಾಲಿ/ಟಾಲಿವುಡ್‌ನಲ್ಲಿ ಮನೆಮಾತಾಗಿದ್ದ ಈ ಬೆಡಗಿ ಹೃತಿಕ್‌ ರೋಶನ್‌ ಜೊತೆ ಹಿಂದಿಯಲ್ಲಿ `ಮೊಹೆಂಜೋದಾರೋ' ಚಿತ್ರದಲ್ಲಿ ಅದ್ಭುತ ವೆಲ್‌ಕಂ ಪಡೆದಳು.

ಕಾಲೇಜಿನ ದಿನಗಳಿಂದಲೇ ಫ್ಯಾಷನ್‌ ಶೋ, ಕ್ಯಾಟ್‌ ವಾಕ್‌, ರಾಂಪ್‌ ಶೋ ಸ್ಟಾಪರ್‌, ಮಾಡೆಲಿಂಗ್‌, ನಟನೆಯ ಹುಚ್ಚು ಬೆಳೆಸಿಕೊಂಡಿದ್ದ ಪೂಜಾ ಸಹಜವಾಗಿಯೇ ಮುಂದೆ ಚಿತ್ರರಂಗಕ್ಕೆ ಬಂದಳು. ತನ್ನ ಸಖತ್‌ ಸೌತ್‌ ಲುಕ್ಸ್ ನಿಂದಾಗಿ ತಮಿಳು, ತೆಲುಗಿನಲ್ಲಿ ಯಶಸ್ವೀ ಎನಿಸಿದಳು. ಕಾಲೇಜಿನಲ್ಲಿದ್ದಾಗಲೇ ಇವೆಲ್ಲ ಚಟುವಟಿಕೆಗಳಲ್ಲಿ ಸಹಜವಾಗಿ ಭಾಗವಹಿಸುತ್ತಿದ್ದಳು. ಆದರೆ ಪೂಜಾಳ ಕೌಟುಂಬಿಕ ಹಿನ್ನೆಲೆಯಲ್ಲಿ ಯಾರೂ ಚಿತ್ರರಂಗದವರು ಇರಲಿಲ್ಲ. ಅವಳ ಈ ಆಯ್ಕೆಗೆ ಮನೆಯವರು ಸಹಕಾರ, ಪ್ರೋತ್ಸಾಹ ನೀಡಿದರು. ಅವಳ ಈ ಕೆರಿಯರ್‌ಗೆ ತಾಯಿ ಲತಾ ಹೆಗಡೆ, ತಂದೆ ಮಂಜುನಾಥ್‌ ಹೆಗಡೆ ಒತ್ತಾಸೆಯಾಗಿ ನಿಂತರು.

Pooja-Hegde-Latest-Hd-Gallery_7

ಸ್ವಭಾತಃ ಶಾಂತ, ಸ್ನೇಹಮಯಿ, ಹಸನ್ಮುಖಿ ಪೂಜಾಳಿಗೆ ಅಭಿನಯದ ಪ್ರತಿ ಮಜಲೂ ಬಲು ಇಷ್ಟವಂತೆ. ದಕ್ಷಿಣದವಳಾದ್ದರಿಂದ ಲೀಲಾಜಾಲವಾಗಿ ತಮಿಳು, ತೆಲುಗಿನಲ್ಲಿ ಗೆಲ್ಲುವಂತಾಯಿತು. ಮುಂಬೈನಲ್ಲಿ ಕಲಿತಿದ್ದರಿಂದ ಹಿಂದಿ, ಮರಾಠಿಯ ಉಚ್ಚಾರಣೆಯಲ್ಲೂ ಯಾವುದೇ ಲೋಪದೋಷಗಳಿಲ್ಲದೆ ಬಾಲಿವುಡ್‌ನಲ್ಲಿ  ನೆಲೆಯೂರಲು ದಾರಿಯಾಯಿತು.

ಅವಳು ನಿರ್ಮಾಪಕ, ನಿರ್ದೇಶಕರಾದ ಆಶುತೋಷ್‌ ಗೋರ್‌ಕರ್‌ ಜೊತೆ ಹಿಂದಿಯ ಡೆಬ್ಯು ನಟಿ ಆಗಲು ಅವಕಾಶ ಸಿಕ್ಕಾಗ ಅದನ್ನು ಚೆನ್ನಾಗಿಯೇ ಬಳಸಿಕೊಂಡಳು. ಏಕೆಂದರೆ ಅವಳಿಗೆ ಹಿಂದಿಯ ಸ್ಟಾರ್‌ ನಟ ಹೃತಿಕ್‌ ರೋಶನ್‌ಗೆ ನಾಯಕಿಯಾಗಿ ನಟಿಸುವ ಸದವಕಾಶ ದೊರೆತಾಗ ಅದನ್ನು ಚೆನ್ನಾಗಿಯೇ ಬಳಸಿಕೊಂಡಳು. ಆದರೆ ದುರದೃಷ್ಟವಶಾತ್‌ ಆ ಚಿತ್ರ ಫ್ಲಾಪ್‌ ಆಯಿತು. ಹೀಗಾಗಿ ಆರಂಭದಲ್ಲಿಯೇ ಬಾಲಿವುಡ್‌ನಲ್ಲಿ ಪೂಜಾಳಿಗೆ ಗೆಲುವಿನ ಮನ್ನಣೆ ದೊರಕಲಿಲ್ಲ.

ಭರವಸೆಯ ಪರಿಶ್ರಮ

ಪೂಜಾ ಈ ಫ್ಲಾಪ್‌ ಕುರಿತು ವಿವರಿಸುತ್ತಾ, ಈ ಚಿತ್ರ ಸಕ್ಸಸ್‌ ಎನಿಸಿದ್ದರೆ ಬಾಲಿವುಡ್‌ನಲ್ಲಿ ನನ್ನ ವರ್ಚಸ್ಸು ವಿಭಿನ್ನವಾಗಿ ಇರುತ್ತಿತ್ತು. ಮೊದಲ ಚಿತ್ರ ಯಶಸ್ವಿ ಆಗುವುದು ಯಾವುದೇ ಕಲಾವಿದರಿಗಾದರೂ ಅನಿವಾರ್ಯ. ಅದು ಅವರ ಕೆರಿಯರ್‌ ಗ್ರಾಫ್‌ನ್ನೇ ಬದಲಿಸಿಬಿಡುತ್ತದೆ. ನನ್ನ ವಿಷಯದಲ್ಲಿ ಅದು ಆಗದೇ ಹೋದುದು ದುರಾದೃಷ್ಟ. ಚಿತ್ರ ಸಕ್ಸಸ್‌ ಆಗಲಿ ಬಿಡಲಿ, ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಯಾವುದೇ ಚಿತ್ರದ ಪ್ರೊಸೆಸಿಂಗ್‌ ಇದೆಯಲ್ಲ, ಅದನ್ನು ನಾನು ತುಂಬಾ ಎಂಜಾಯ್ ಮಾಡ್ತೀನಿ.

ಅದರಲ್ಲಿ ನನ್ನ ನಟನೆ ಇನ್ನಷ್ಟು ಮತ್ತಷ್ಟು ಸುಧಾರಿಸಬೇಕೆಂದು ಬಹಳ ಶ್ರಮಿಸುತ್ತೇನೆ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ. ಎಷ್ಟೋ ಸಲ ನಮಗೆ ನೀಡಿದ ಸ್ಕ್ರಿಪ್ಟ್ ಒಂದು ತರಹ ಇರುತ್ತದೆ, ಚಿತ್ರ ಪೂರ್ತಿ ಆಗಿ ರಿಲೀಸ್‌ ಆಗುವಷ್ಟರಲ್ಲಿ ಅದು ಇನ್ನೇನೋ ಆಗಿಹೋಗಿರುತ್ತದೆ. ಹಾಗಾದಾಗ ಚಿತ್ರ ಫ್ಲಾಪ್‌ ಆಗುವುದು ಗ್ಯಾರಂಟಿ. ಅಂದುಕೊಂಡಂತೆ ಎಲ್ಲ ನೀಟಾಗಿ ನಡೆದರೆ ಆಗ ನಾವು ಸಕ್ಸಸ್‌ ಎದುರು ನೋಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ