ಭೈರವ ಸಿನಿಮಾಸ್‌ ಲಾಂಛನದಲ್ಲಿ ಕಲ್ಯಾಣ್‌ ಸಿ. ಹಾಗೂ ರೋಹಿತ್‌ ಎಸ್‌. ಅವರು ನಿರ್ಮಿಸಿರುವ ಶಾರ್ದೂಲ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಕೊರೋನಾ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಈ ಚಿತ್ರದ ಟ್ರೇಲರ್‌ ಕೂಡ ವಿಭಿನ್ನವಾಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಅಸಂಖ್ಯಾತ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ನಮ್ ಏರಿಯಾದಲ್ ಒಂದು ದಿನ, ತುಘಲಕ್‌ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್‌ ಕೌಶಿಕ್‌ ಈ ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದೆವ್ವ ಇರಬಹುದಾ....? ಎಂಬ ಅಡಿಬರಹ ಈ ಚಿತ್ರಕ್ಕಿದೆ. ವೈ.ಜಿ.ಆರ್‌. ಮನು ಛಾಯಾಗ್ರಹಣ, ಸತೀಶ್‌ ಬಾಬು ಸಂಗೀತ ನಿರ್ದೇಶನ, ಶಿವರಾಜ್‌ ಮೇಹು ಸಂಕಲನ ಹಾಗೂ ಮಾಸ್‌ ಮಾದ, ಅಲ್ಟಿಮೇಟ್‌ ಶಿವ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್‌ ಚಂದ್ರ ನಿರ್ದೇಶಕ, ನಟ ರವಿತೇಜ, ಕೃತಿಕಾ ರವೀಂದ್ರ, ಐಶ್ವರ್ಯಾ ಪ್ರಸಾದ್‌, ಕಲ್ಯಾಣ್‌, ಹೃಷಿಕೇಶ್‌, ಮಹೇಶ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಮೆಝಾನ್‌ ಮತ್ತು ನೆಟ್‌ಫ್ಲಿಕ್ಸ್ ಸಂಸ್ಥೆಗಳಿಗೂ ಚಿತ್ರವನ್ನು ಕಳುಹಿಸಿಕೊಡಲಾಗಿದ್ದು, ಆ ಮಾಧ್ಯಮದಲ್ಲೂ ನಮ್ಮ ಚಿತ್ರ ವೀಕ್ಷಣೆಗೆ ಅನುಮತಿ ದೊರಕುವ ನಿರೀಕ್ಷೆ ಇದೆ ಎನ್ನುತ್ತಾರೆ ನಿರ್ಮಾಪಕರು.

ಈ ಲಾಕ್‌ ಡೌನ್‌ ಸಮಯದಲ್ಲಿ ಸಿನಿಮಾ ನಿರ್ಮಾಣಗಳ ಬಗ್ಗೆ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗಳು, ಚಿತ್ರ ಮಂದಿರ ತೆರೆಯುವಿಕೆ, ಚಿತ್ರೀಕರಣ ಪುನರಾರಂಭ ಕುರಿತು ಸಮಾಲೋಚನೆ ನಡೆಸಿ ಸರ್ಕಾರದ ನಿರ್ಧಾರಕ್ಕೆ ಕಾದು ಕುಳಿತಿದೆ ಚಿತ್ರ ತಂಡ. ಸಿನಿಮಾ ರೆಡಿ ಮಾಡಿಟ್ಟುಕೊಂಡಿದ್ದರೂ ಬಿಡುಗಡೆಯಾಗಲು ತಯಾರಿದ್ದರೂ ಥಿಯೇಟರ್‌ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. ಅನೇಕ ದೊಡ್ಡ ದೊಡ್ಡ ನಿರ್ಮಾಪಕರು ಸಿನಿಮಾ ಶುರು ಮಾಡಿ ಯಾಕಾದರೂ ಈ ಟೈಮಿನಲ್ಲಿ ನಿರ್ಮಾಣಕ್ಕೆ ಕೈ ಹಾಕಿದೆಯೋ ಎಂದು ಹಪಹಪಿಸುತ್ತಿದ್ದಾರೆ.

IMG-20200611-WA0005

ಸದ್ಯಕ್ಕೆ ಬಿಡುಗಡೆಗೆ ಸಜ್ಜಾದ ಚಿತ್ರಗಳು ಸೆನ್ಸಾರ್‌ಮಂಡಳಿಗೆ ರೌಂಡ್‌ ಹೊಡೆಯುತ್ತಿವೆ. ಇನ್ನೂ ಕೆಲವು ಚಿತ್ರಗಳು ಸೆನ್ಸಾರ್‌ಸರ್ಟಿಫಿಕೇಟ್‌ ರೆಡಿ ಇಟ್ಕೊಂಡು ಬಿಡುಗಡೆಗಾಗಿ ಕಾಯುತ್ತಿವೆ.

ಈಗ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳಲ್ಲಿ `ಶಾರ್ದೂಲ' ಕೂಡಾ ಒಂದು.`ಶಾರ್ದೂಲ' ಟೈಟಲ್ ಡಿಫರೆಂಟ್‌ ಆಗಿರೋದ್ರಿಂದ ಕುತೂಹಲ ಕೆರಳಿಸಿದೆ.

ನಮ್ ಏರಿಯಾದಲ್ ಒಂದು ದಿನ, ತುಘಲಕ್‌ ಚಿತ್ರಗಳನ್ನು ನಿರ್ದೇಶಿಸಿ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿಗಳಂತ ಪ್ರತಿಭೆಗಳನ್ನು ಪರಿಚಯಿಸಿದ ಕೌಶಿಕ್‌`ಶಾರ್ದೂಲ' ಚಿತ್ರದ ನಿರ್ದೇಶಕರಾಗಿದ್ದಾರೆ.

ಇದಕ್ಕೂ ಮೊದಲು ಹುಲಿರಾಯ ಎಂಬ ವಿಭಿನ್ನ ಕಥಾವಸ್ತುವುಳ್ಳ ಚಿತ್ರ ನೀಡಿದ್ದರು. ಸಿನಿಮಾ ಅಷ್ಟೇ ಅಲ್ಲ, ಜನಪ್ರಿಯ ಕಮಲಿ ಧಾರಾವಾಹಿ ನಿರ್ದೇಶಕರು ಇವರೇ.

ಈಗ ಇವರ ಶಾರ್ದೂಲ ಬಿಡುಗಡೆಗಾಗಿ ರೆಡಿಯಾಗಿ ನಿಂತಿದೆ. ಇದೊಂದು ಹಾರರ್‌ ಥ್ರಿಲ್ಲರ್‌ ಸಿನಿಮಾ ಎಂದು ಹೇಳಲಾಗಿದೆ. ಶಾರ್ದೂಲ ಎಂದರೂ ಹುಲಿ ಎಂದರ್ಥ. ಈ ಹಿಂದೆಯೂ ಹುಲಿರಾಯ ಸಿನಿಮಾ ಮಾಡಿದ್ದರು. ಶಾರ್ದೂಲ ಸಿನಿಮಾ ಹುಲಿ ಕುರಿತು ಏನಾದರೂ ಕಥೆ ಇದೆಯಾ ಎಂಬ ಪ್ರಶ್ನೆಗೆ, ನಿರ್ದೇಶಕರು ಶಾರ್ದೂಲ ಎಂದರೆ ಹುಲಿ ಎಂದರ್ಥ ನಿಜ. ಆದರೆ ಈ ಸಿನಿಮಾ ಕಥೆಗೂ ಹುಲಿಗೂ ಸಂಬಂಧವಿಲ್ಲ. ಹುಲಿ ವಿಷಯ ಬರೋದಿಲ್ಲ. ಹಾಗಾದರೆ ಶಾರ್ದೂಲ ಅಂತ ಯಾಕೆ ಟೈಟಲ್ ಇಟ್ಟಿದ್ದೀವಿ ಎಂದು ತಿಳಿಯಲು ಥಿಯೇಟರ್‌ಗೆ ಬರಬೇಕು ಎನ್ನುತ್ತಾರೆ ಅರವಿಂದ್‌ ಕೌಶಿಕ್‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ