ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಹುಡುಗಿಯರ ಸಂಖ್ಯೆ ಜಾಸ್ತಿ. ಸಿನಿಮಾಗೆ ಹೊಂದುವಂತಹ ಫೇಸ್‌ ಕಟ್‌ ಹಾಗೂ ಒಂದಷ್ಟು ಟ್ಯಾಲೆಂಟ್‌, ಜೊತೆಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬಂದರೆ ಸಾಕು. ಪ್ರೋತ್ಸಾಹ ಬೆಂಬಲ ಸಿಕ್ಕರೆ ಶೈನ್‌ ಆಗೋದು ಖಚಿತ. ಇತ್ತೀಚೆಗೆ ಬಂದಿರುವ ಹೊಸ ನಟಿಯರಲ್ಲಿ ಹೆಚ್ಚು ಸುದ್ದಿಯಲ್ಲಿರುವ ಹುಡುಗಿ ಅಂದರೆ ಅನೂಷಾ.

ಇಡೀ ಚಿತ್ರವನ್ನು ಮೊಬೈಲ್‌ನಲ್ಲೇ ಶೂಟ್‌ ಮಾಡಿರುವ `ಡಿಂಗ' ಎಂಬ ಚಿತ್ರದಲ್ಲಿ ಈಕೆ ನಟಿಸಿದ್ದಳು. ಆಗಲೇ ಹೆಚ್ಚು ಪಬ್ಲಿಸಿಟಿ ಪಡೆದಿದ್ದಳು. ಇತ್ತೀಚೆಗೆ `ದಾರಿ ಯಾವುದಯ್ಯ ವೈಕುಂಠಕೆ' ಎನ್ನುವ ಚಿತ್ರದ ಮೂಲಕ ಮತ್ತೆ ಕನ್ನಡದ ಪ್ರೇಕ್ಷಕರೆದುರು ಬರಲಿದ್ದಾಳೆ. ಅನೂಷಾಳ ಫೋಟೋಸ್‌ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದೆ. ಅವಕಾಶಗಳು ಸಿಗುವ ಸಮಯದಲ್ಲಿ ಕೊರೋನಾ ಮಹಾಮಾರಿಗೆ ಇಡೀ ಸಿನಿಮಾರಂಗದ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ. ಅನೂಷಾಳಂತಹ ಅದೆಷ್ಟೋ ಹೊಸ ಪ್ರತಿಭೆಗಳಿಗೆ ನಿರಾಸೆಯಾಗಿರಬಹುದು. ಆದಷ್ಟು ಬೇಗ ಈ ಕೊರೋನಾ ತೊಲಗಲಿ, ಎಲ್ಲರೂ ತಮ್ಮ ಕನಸುಗಳನ್ನು ನನಸು ಮಾಡುವ ಸಮಯ ಬೇಗ ಬರಲಿ ಎಂದು ಅನೂಷಾ ಹಾರೈಸುತ್ತಾಳೆ.

ಅನೂಷಾಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ. ಹೀಗಾಗಿ ಕಾಲೇಜು ದಿನಗಳಿಂದ ನಾಟಕಗಳಲ್ಲಿ ಅಭಿನಯಿಸಿ ಅಲ್ಲಿಂದ ಮುಂದೆ `ಡಿಂಗ' ಚಿತ್ರ ತಂಡಕ್ಕೆ ಪರಿಚಯವಾಗಿ `ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾಳೆ. ಕೊರೋನಾ ಮಾರಿಯಿಂದ ಚಿತ್ರ ಅಪೂರ್ಣವಾಗದೆ ಆದಷ್ಟು ಬೇಗ OTT ಮೂಲಕ ಪ್ರೇಕ್ಷರನ್ನು ತಾನು ತಲುಪಬೇಕು ಎಂದು ಓದುಗರ ಹಾರೈಕೆ ಬಯಸುತ್ತಾಳೆ ಅನೂಷಾ.

`ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದ ಚಿತ್ರೀಕರಣ ಹೆಚ್ಚುಕಡಿಮೆ ಪೂರ್ಣವಾಗಿದೆ ಎನ್ನುತ್ತದೆ ಆ ತಂಡ.ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ. ಕೊಟಗಿ ನಿರ್ಮಿಸಿರುವ `ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದ ಚಿತ್ರೀಕರಣ ಒಂದು ವಿಧದಲ್ಲಿ ಮುಗಿದಿದೆ.

IMG-20200706-WA0061

ಲಾಕ್‌ ಡೌನ್‌ ತೆರವಿನ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳನ್ನು ಪೂರ್ಣ ಮಾಡಲು ಅನುಮತಿ ನೀಡಿತು. ನಂತರ ಸರ್ಕಾರದ ಆದೇಶ ಪಾಲಿಸಿ ಬೆಂಗಳೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ವರ್ಧನ್‌, ಅನೂಷಾ, ಬಲ ರಾಜಾಡಿ ಮುಂತಾದವರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣದ ನಂತರದ ಚಟುವಟಿಕೆ ಪ್ರಾರಂಭವಾಗಲಿದೆ.

ಈ ಹಿಂದೆ `ಕೃಷ್ಣ ಗಾರ್ಮೆಂಟ್ಸ್' ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರದ ನಿರ್ದೇಶಕರು. ವರ್ಧನ್‌ ತೀರ್ಥಹಳ್ಳಿ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ನವ ನಾಯಕಿ ಅನೂಷಾ.

`ಡಿಂಗ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅನೂಷಾ, `ಶ್ರೀಮಾನ್‌ ಶ್ರೀಮತಿ' ಹಾಗೂ `ಅವಳು ಸುಜಾತಾ' ಕಿರು ತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಳು.

IMG-20200706-WA0064-(1)-a

`ತಿಥಿ' ಚಿತ್ರದ ಖ್ಯಾತಿಯ ಪೂಜಾ, ಬಲ ರಾಜಾಡಿ, ಶೀಬಾ, ಡಿ.ವಿ. ನಾಗರಾಜ್‌, ಸುಚಿತ್‌, ಅರುಣ್‌ ಮೂರ್ತಿ, ಸಂಗೀತಾ, ಗೌಡಿ, ಸಿದ್ಧಾರ್ಥ್‌, ಪ್ರಣಯ್‌ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ