ರಾಕುಲಳ ಸೋಶಿಯಲ್ ಜಂಪಿಂಗ್‌

ಇದೇನಪ್ಪ..... ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಅಂತ ಅಂದುಕೊಂಡ್ರಾ? ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾನ್‌ಫಾಲೋಯರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ಸೋ ಕಾಲ್ಡ್ ಸೆಲೆಬ್ರಿಟೀಸ್‌ ರೇಸ್‌ಗೆ ಮುಗಿಬಿದ್ದವರಂತೆ ಆಡುತ್ತಾರೆ. ಇದನ್ನು ಜಂಪಿಂಗ್‌ಎನ್ನದೆ ಬೇರೇನೂ ಹೇಳಲು ಸಾಧ್ಯ? ಇತ್ತೀಚೆಗೆ ನಟಿ ರಾಕುಲ್ ‌ಸೋಶಿಯಲ್ ಮೀಡಿಯಾದ ಅಕೌಂಟ್‌ನಲ್ಲಿ 14 ಮಿಲಿಯನ್‌ಗೂ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದಾಳೆ. ಇದಕ್ಕೆ ಸಿನಿ ಹಿತೈಷಿಗಳ ಕಿವಿಮಾತು ಎಂದರೆ, ರಾಕುಲ್ ‌ಬಾಲಿವುಡ್‌ಗೆ ಅಂಟಿಕೊಂಡಿರಬೇಕಾದರೆ ಮೊದಲು ತನ್ನ ಚಿತ್ರಗಳಿಗೆ ಜನ ಬರುವಂತೆ ಮಾಡಿಕೊಳ್ಳಬೇಕು! ಈ ಸೋಶಿಯಲ್ ಮೀಡಿಯಾ ಸಂಖ್ಯೆಗಳೆಲ್ಲ ಸೋಪಿನ ನೊರೆಯಂತೆ.... ಯಾವಾಗ ಠುಸ್‌ ಅನ್ನುತ್ತೋ ಗೊತ್ತಿಲ್ಲ.

ಫ್ಯಾಟ್‌ನಿಂದ ಫಿಟ್‌ ಆದ ಸಾರಾ

 

Sara

ತಮ್ಮ ದೇಹ ಗಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯದ ಕೆಲವೇ ಬಾಲಿವುಡ್‌ ನಟಿಯರಲ್ಲಿ ಸಾರಾ ಅಲಿಖಾನ್‌ ಸಹ ಒಬ್ಬಳು. ಸಾರಾ ತಾನು ಡುಮ್ಮಿಯಾಗಿದ್ದಾಗಿನ ತನ್ನ ಹಳೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾಳೆ. ಹಾಗೆ ಮಾಡಿ ಜನರಿಗೆ ಅವಳು ನೀಡಲಿರುವ ಸಂದೇಶವೆಂದರೆ ಮನಸ್ಸು ಮಾಡಿದರೆ ಯಾರು ಯಾವಾಗ ಬೇಕಾದರೂ ಫ್ಯಾಟ್‌ನಿಂದ ಫಿಟ್‌ ಆಗಬಹುದು ಅಂತ. ಸಾರಾಳ ಪ್ರಕಾರ, ತಾನು ಬಾಲಿವುಡ್‌ಗೆ ಎಂಟ್ರಿ ನೀಡಿದ ಹೊಸತರಲ್ಲಿ ತನ್ನ ಲೈಫ್‌ ಸ್ಟೈಲ್ ‌ಹಾಗೂ ಆಹಾರದ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅಸಾಧ್ಯವಾಗಿತ್ತಂತೆ. ಏನೇ ಆಗಲಿ, ತಾನು ಫಿಟ್‌ ಆಗಲೇಬೇಕು ಎಂಬ ಹಠಯೋಗದಿಂದಾಗಿ, ಸತತ ದೇಹದಂಡನೆಗೆ ಮನಸ್ಸು ಮಾಡಿದಳು. ಇದರ ಪರಿಣಾಮವಾಗಿ ಫ್ಯಾಟ್‌ ಆಗಿದ್ದ ಸಾರಾ ಇಂದು ಫಿಟ್‌ ಆಗಿದ್ದಾಳೆ, ಹಿಟ್‌ ಸಹ! ಫ್ಯಾನ್ಸ್..... ನೀವು ಟ್ರೈ ಮಾಡಿ ನೋಡಿ!

ಕೀರ್ತಿಯ ಕೀರ್ತಿ ಹರಡುತ್ತಿದೆ!

Kirti

ಹಾಗೆ ನೋಡಿದರೆ ಮಾಡಲ್ ನಟಿ ಕೀರ್ತಿ ಕುಲ್ಹಾಡಿ ತನ್ನ ಅತಿಯಾದ ಬಾಯಿ ಮಾತುಗಳಿಂದ, ಗ್ಲಾಮರಸ್‌ ವೈಯಾರಗಳಿಂದ ಸದಾ ಚರ್ಚೆಗೆ ಈಡಾಗುತ್ತಾಳೆ. ಸದ್ಯಕ್ಕಂತೂ ವಿಷಯ ಬೇರೆಯೇ ಇದೆ. ಲಾಕ್‌ಡೌನ್‌ ಕಾರಣ ಕಲಾವಿದರೆಲ್ಲ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಹೀಗಾಗಿ ಅಭಿಮಾನಿಗಳ ಮಧ್ಯೆ ನಿರಂತರ ಉಳಿಯಲು ಏನಾದರೊಂದು ಸರ್ಕಸ್‌ ಮಾಡುತ್ತಿರುತ್ತಾರೆ. ಕೀರ್ತಿಯೂ ಹೀಗೇ ಮಾಡಿದಳು. ತನ್ನ ಹಲವಾರು ಗ್ಲಾಮರಸ್‌ ಹಾಟ್‌ ಪೋಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಳು. ಇನ್ನೇನು? ಲೈಕ್ಸ್ ಗಳ ಸುರಿಮಳೆ ಆಯ್ತು. ಕೀರ್ತಿಯ ಕೀರ್ತಿ ಎಲ್ಲೆಲ್ಲೂ ಹರಡಿತು. ಅಂತೂ ಬಾಲಿವುಡ್‌ ನೀರು ಕುಡಿದದ್ದಕ್ಕೂ ಸಾರ್ಥಕವಾಯಿತಮ್ಮ ಕೀರ್ತಿ ಎನ್ನುತಿದ್ದಾರೆ ಹಿತೈಷಿಗಳು.

ಅಕ್ಷಯ್‌ನ ಅಪೀಲ್ ‌

akshay-1

ಅಕ್ಷಯ್‌ ಕುಮಾರ್‌ ಇತ್ತೀಚೆಗೆ ತನ್ನ ತಂಗಿಯ ಕುರಿತಾಗಿ ಹರಡಿರುವ ವದಂತಿಗಳಿಂದಾಗಿ ಚಿಂತಿತನಾಗಿದ್ದಾನೆ. ತನ್ನ ತಂಗಿ ಕುರಿತಾಗಿ ಗಾಳಿ ಮಾತು ಹರಡುವವರ ವಿರುದ್ಧ ಕಾನೂನು ಸಮರ ಸಾರಲಿದ್ದಾನೆ. ಫೇಕ್‌ ನ್ಯೂಸ್‌ ಯಾಕಂತೀರಾ? ಅದು ಈತನ `ಫಿಲ್‌ ಹಾಲ್‌' ಮ್ಯೂಸಿಕ್‌ ವಿಡಿಯೋ ಕುರಿತಾದುದು. ಇದ್ದಕ್ಕಿದ್ದಂತೆ ಯಾರೋ ಇಂಥದೇ `ಫಿಲ್ ‌ಹಾಲ್‌' ಮಾಡುತ್ತಿದ್ದಾರೆಂದೂ, ಆ ಬಗ್ಗೆ ತನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದಾಗ ಕೋಪ ಬರದೆ ಇರುತ್ತದೆಯೇ? ತಾರಾಬಳಗಕ್ಕಾಗಿ ಬೇರೆ ಯಾರು ಯಾರನ್ನೋ ಅಪ್ರೋಚ್‌ ಮಾಡಲಾಗುತ್ತಿದೆ ಎಂಬ ವದಂತಿಗೆ, ಫ್ಯಾನ್ಸ್ ಇದನ್ನು ನಂಬಬಾರದು, ಗಾಳಿ ಮಾತಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಂಡಿದ್ದಾನೆ. ಲಾಕ್‌ ಡೌನ್‌ನಲ್ಲಂತೂ ಇಂಥ ವದಂತಿಗಳು ಇನ್ನಷ್ಟು ಹೆಚ್ಚಿದವು. ಇತ್ತೀಚೆಗೆ ಒಬ್ಬ ಹೆಸರಾಂತ ನಟ ಅಕ್ಷಯ್‌, ಅವನ ತಂಗಿ ಹೆಸರು ಹೇಳಿಕೊಂಡು ತನಗೆ ಸಲ್ಮಾನ್‌ ಚಿತ್ರದಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಹಣ ಏಮಾರಿಸಿದರೆಂದಾಗ ಅಕ್ಷಯ್‌ನ ಕೋಪ ಅಕ್ಷಯಗೊಂಡಿತು. ಯಾವುದಕ್ಕೂ ನೀವು ಎಚ್ಚರದಿಂದಿರಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ