- ರಾಘವೇಂದ್ರ ಅಡಿಗ ಎಚ್ಚೆನ್.

ರಾಜಸ್ಥಾನದ ಉದಯಪುರದಲ್ಲಿರುವ ಐ‍ಷಾರಾಮಿ ಹೋಟೆಲ್‌ ನಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ವಿಜಯ್ ದೇವರಕೊಂಡ(ವಿರೋಶ್) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ.

ಖ್ಯಾತ ತೆಲುಗು ನಟ ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಅವರ ಮುದುವೆಗೂ ಮುನ್ನ ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ಹಳದಿ ಸಮಾರಂಭದ ಫೋಟೋಳನ್ನು ಸ್ವತಃ ವಿಜಯ್ ದೇವರಕೊಂಡ ಅವರು ಹಂಚಿಕೊಂಡಿದ್ದಾರೆ.

rashmikas1

ಉದಯಪುರದ ಹೊರವಲಯದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಗುರುವಾರ ವಿರೋಶ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ವಿಜಯ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಅಭಿಮಾನಿಗಳೊಂದಿಗೆ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹಳದಿ ಮತ್ತು ಮೆಹೆಂದಿ ಸಮಾರಂಭಗಳು ಇಂದು ನಡೆಯುತ್ತಿದ್ದು, ಅತಿಥಿಗಳು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಭಾಗವಹಿಸಿದ್ದಾರೆ. ಹಳದಿ ಶಾಸ್ತ್ರದ ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳೆಲ್ಲರೂ ಹಾಡಿ, ಕುಣಿದು ಸಂಭ್ರಮಿಸಲಿದ್ದಾರೆ.

rashmikas4

ಇನ್ನು ಸಮಾರಂಭದಲ್ಲಿ ಭಾಗಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಗೆಳತಿ ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ.
ನಿನ್ನೆ ವಿಜಯ್ ಮತ್ತು ರಶ್ಮಿಕಾ ಅವರು ಹೋಟೆಲ್ ಆವರಣದಲ್ಲಿ ಸ್ನೇಹಿತರೊಂದಿಗೆ ಫ್ರೆಂಡ್ಲಿ ಕ್ರಿಕೆಟ್ ಪಂದ್ಯವನ್ನು ಆಡಿದ್ದು, ಅದನ್ನು"ವಿರೋಶ್ ಪ್ರೀಮಿಯರ್ ಲೀಗ್" ಎಂದು ಕರೆಯಲಾಗಿದೆ.

rashmikas2

ಗುಲಾಬಿ ಟುಲಿಪ್ಸ್ ಮತ್ತು ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟ ಊಟದ ಮೇಜಿನೊಂದಿಗೆ ವಿವಾಹಪೂರ್ವ ಆಹಾರ ವ್ಯವಸ್ಥೆಗಳ ಚಿತ್ರವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

rashmikas3

"ಗೀತಾ ಗೋವಿಂದಂ" ಮತ್ತು "ಡಿಯರ್ ಕಾಮ್ರೇಡ್" ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಈ ಜೋಡಿ ಏಳು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಮತ್ತು ಹಲವು ವರ್ಷಗಳ ಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದರು. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ