ಶರತ್ ಚಂದ್ರ
ಕಾಂತರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿ ಎಲ್ಲಾ ಭಾಷೆ ಗಳಲ್ಲಿ ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದು ಜನರಿಗೆ ಅಕ್ಟೋಬರ್ 2 ಯಾವಾಗ ಬರುತ್ತೋ ಎಂದು ಚಿತ್ರವನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾಯುವಂತೆ ಮಾಡಿದೆ.
ಟ್ರೈಲರ್ ಗೆ ಒಂದಷ್ಟು ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ ಕೂಡ, ಚಿತ್ರದ ದೃಶ್ಯ ವೈಭವ ನೋಡಿ ಇದೊಂದು ಸ್ಕ್ರೀನ್ ಮೇಲೆ ನೋಡಿ ಈ ಹಿಂದೆ ಯಾವುದೇ ಭಾರತ ದ ಸಿನಿಮಾ ನೀಡದೇ ಇರುವ ವಿಶಿಷ್ಟ ಅನುಭವ ನೀಡುವ ಎಲ್ಲಾ ಸಾಧ್ಯತೆಗಳಿವೆ ಅನ್ನೋದು ಸ್ಪಷ್ಟವಾಗಿದೆ.
ಈ ಎಲ್ಲದರ ಮಧ್ಯೆ ಟ್ರೈಲರ್ ನೋಡಿದವರು, ಒಂದಷ್ಟು ವಿಷಯಗಳನ್ನು ಪದೇ ಪದೇ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. AI ತಂತ್ರಜ್ಞಾನದ ಕಾಲದಲ್ಲಿ, ನಿಜವಾದ ಕಾಡಿಗೆ ಹೋಗಿ ಚಿತ್ರೀಕರಣ ಮಾಡಿರುವುದು, ಎಲ್ಲಕ್ಕಿಂತ ಹೆಚ್ಚಾಗಿ ಅರವಿಂದ್ ಕಶ್ಯಪ್ ಛಾಯಾಗ್ರಹಣಕ್ಕೆ ಈಗಿಂದಲೇ ಬಹುಪರಾಕ್ ಹೇಳುತ್ತಿದ್ದಾರೆ. ಚಿತ್ರದ ಕಲಾ ನಿರ್ದೇಶನ, VFX ಮತ್ತು ಸಾಹಸ ದ್ರಶ್ಯಗಳ ಬಗ್ಗೆ ಕೂಡ ಜನ ಅತೀ ನಿರೀಕ್ಷೆ ಇಟ್ಟುಕೊಂಡಿದ್ದು, ಟ್ರೈಲರ್ ನ ಕೆಲವೇ ಗ್ಲಿಂಪ್ಸ್ ಗಳಲ್ಲಿ ಅದು ಸಾಬೀತಾಗಿದೆ.
ರಿಷಬ್ ಶೆಟ್ಟಿ ಯ ಮೂರು ವರ್ಷದ ಶ್ರಮ ಖಂಡಿತ ಫಲ ನೀಡುತ್ತದೆ ಎನ್ನುವ ನಂಬಿಕೆ ಈ ಟ್ರೈಲರ್ ಸಾ ಬೀತು ಪಡಿಸಿದೆ.
ಅದರಲ್ಲೂ ವಿಶೇಷ ವಾಗಿ ಉತ್ತರ ಭಾರತದ ಸಿನಿ ಪ್ರೇಕ್ಷಕರು ಕಾಮೆಂಟ್ ಮಾಡುತ್ತಾ ಬಾಲಿವುಡ್ ನಲ್ಲಿ ನಮ್ಮ ಭಾರತ ದೇಶದ ಕಲೆ ಸಂಸ್ಕೃತಿ, ಅದರಲ್ಲೂ ಹಿಂದೂ ಸಮಾಜ ಪೂಜಿಸುವ ದೇವರುಗಳನ್ನು ಅವಹೇಳನ ಮಾಡುವ ಫಿಲಂ ಮೇಕರ್ಸ್ ಮಧ್ಯೆ ದಕ್ಷಿಣ ಭಾರತ ದ ಇಂತಹ ಚಿತ್ರಗಳನ್ನು ನಿರ್ಮಿಸುವ ರಿಷಬ್ ಶೆಟ್ಟಿ ಯಂತಹ ನಿರ್ದೇಶಕರಿಗೆ ನಿಜಕ್ಕೂ ಹಾಟ್ಸ್ ಆಫ್ ಎಂದಿದ್ದಾರೆ.
ರಾಜಕುಮಾರಿ ಕನಕವತಿಯ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಬಗ್ಗೆ ಮೀಮ್ ಗಳಲ್ಲಿ, ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಆಕೆಯ ಸೌಂದರ್ಯದ ಬಗ್ಗೆ , ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಎಷ್ಟೋ ಜನ ಇಡೀ ಟ್ರೈಲರ್ನಲ್ಲಿ ಈಕೆಯೇ ಹೈಲೈಟ್ ಎನ್ನುವ ರೀತಿಯಲ್ಲಿ ಆಕೆಯ ಬಗ್ಗೆ ಪ್ರಶಂಸೆ ಮಾತು ಕೇಳಿ ಬರುತ್ತಿದೆ.
ಮೇ ತಿಂಗಳು ನಮ್ಮನ್ನಗಲಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿಯನ್ನು ಟೈಲರ್ ನಲ್ಲಿ ಹೈಲೈಟ್ ಮಾಡಿರುವುದು ತುಂಬಾ ಜನಕ್ಕೆ ಖುಷಿ ಕೊಟ್ಟಿದೆ.
ಟ್ರೈಲರ್ ನೋಡಿದ ಪ್ರೇಕ್ಷಕರು ಈ ಹಿಂದೆ ಬಂದ ಕಾಂತಾರದ ತಿಳಿ ಹಾಸ್ಯ, ಇಂಪಾದ ಹಾಡುಗಳು, ದೈವ ನರ್ತನ, ಭೂತ ಕೋಲ, ಕಂಬಳ ದಂತಹ ದೃಶ್ಯಗಳನ್ನು ಈ ಚಿತ್ರದಲ್ಲಿ ಮಿಸ್ ಮಾಡಬಹುದೇನೋ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇಡೀ ಚಿತ್ರದಲ್ಲಿ ತುಳು ನಾಡಿನ ಹಳೆಯ ಇತಿಹಾಸವನ್ನು ಹೇಳುವುದರಿಂದ, ಈ ಚಿತ್ರ ಬಾಹುಬಲಿ, ಪೊನಿಯನ್ ಸೆಲ್ವನ್ ಮಾದರಿಯ ಸಿನಿಮಾ ಆಗಿ ಮೂಡಿ ಬಂದಿದೆ ಎಂದು ಊಹಿಸಲಾಗಿದೆ.
ಒಟ್ಟಿನಲ್ಲಿ ಟ್ರೈಲರ್, ಸಿನಿಮಾ ನೋಡುವ ಮುಂಚೆಯೇ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಕ್ಲಾರಿಟಿ ನೀಡಿದೆ. ಪ್ರೇಕ್ಷಕರು ತಾವು ನೋಡುವ ಚಿತ್ರ ಯಾವ ಥರ ಇರಬಹುದು ಎಂದು ಊಹೆ ಮಾಡಿ ಅವರನ್ನು ಮಾನಸಿಕ ಸಿದ್ಧತೆಗೆ ಅನುವು ಮಾಡಿ ಕೊಟ್ಟಿದೆ. ಸಿನಿಮಾ ಯಾವ ಥರ ಇದೆ ಎಂದು ತಿಳಿಯಲು ಅಕ್ಟೋಬರ್ ಒಂದರಂದು ನಡೆಯುವ ಪ್ರೀಮಿಯರ್ ಶೋ ತನಕ ಕಾಯ ಬೇಕಿದೆ.