- ರಾಘವೇಂದ್ರ ಅಡಿಗ ಎಚ್ಚೆನ್.
ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯಗೆ (Reeshma Nanaiah) ಇಂದು (ಏ.28) 23ನೇ ವರ್ಷದ ಜನ್ಮದಿನದ (Birthday) ಸಂಭ್ರಮ. ಈ ಹಿನ್ನೆಲೆ ‘ಕೆಡಿ’ ಚಿತ್ರದ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿ ನಾಯಕಿ ರೀಷ್ಮಾಗೆ ಡೈರೆಕ್ಟರ್ ಪ್ರೇಮ್ (Prem) ಶುಭಕೋರಿದ್ದಾರೆ.

reeshma (1)

ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ ಕ್ಲೀಪ್‌ಗಳನ್ನು ಡೈರೆಕ್ಟರ್ ಶೇರ್ ಮಾಡಿ, ನಟಿಗೆ ವಿಶೇಷವಾಗಿ ನಿರ್ದೇಶಕ ಪ್ರೇಮ್ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ಡೇ ಮಗನೇ ಎಂದು ರೀಷ್ಮಾಗೆ ಹಾರೈಸಿದ್ದಾರೆ.

reeshma-1
ರೀಷ್ಮಾ ನಾಣಯ್ಯ ಅವರು ಧ್ರುವಗೆ (Dhruva Sarja) ಜೋಡಿಯಾಗಿ ನಟಿಸಿದ್ದಾರೆ. ಮಚ್ಚಲಕ್ಷ್ಮಿ ಎಂಬ ರಗಡ್ ಆಗಿರೋ ಪಾತ್ರದಲ್ಲಿ ಅವರು ಜೀವ ತುಂಬಿದ್ದಾರೆ. ಸದ್ಯ ಸೆಟ್‌ನಲ್ಲಿ ತೆಗೆದಿರುವ ನಟಿಯ ವಿಡಿಯೋ ತುಣುಕುಗಳು ಕ್ಯೂಟ್ ಆಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಧ್ರುವ, ರೀಷ್ಮಾ ಜೊತೆ ಶಿಲ್ಪಾ ಶೆಟ್ಟಿ, ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರೇಮ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

ಅಂದಹಾಗೆ, ‘ಕೆಡಿ’ ಸಿನಿಮಾದ ಜೊತೆ ಡಾಲಿಗೆ ನಾಯಕಿಯಾಗಿ ‘ಅಣ್ಣ ಇನ್ ಮೆಕ್ಸಿಕೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ