– ರಾಘವೇಂದ್ರ ಅಡಿಗ ಎಚ್ಚೆನ್.
‘ಬನಾರಸ್’ ಹೀರೋ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಅನಿಲ್ ಕುಮಾರ್ ನಿರ್ದೇಶನವಿರುವ ಈ ಚಿತ್ರ ಜನವರಿ 23ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ರಾಜ್ಯದ ವಿವಿಧ ಸ್ಥಳಗಳಲ್ಲಿ ‘ಕರ್ನಾಟಕ ಕಲ್ಟ್ ಪ್ರವಾಸ’ ಎಂಬ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಪೈಕಿ ಮೊದಲಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಲಿದೆ ‘ಕಲ್ಟ್’ ಟೀಂ. ಹೌದು ಡಿಸೆಂಬರ್ 30ರಂದು ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ (ಪಿ.ಇ.ಎಸ್ ಮೈದಾನ) ಆವರಣದಲ್ಲಿ ಜರುಗಲಿದೆ. ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್) ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಬಳಿಕ ಜನವರಿ 4ರಂದು ದಾವಣಗೆರೆಗೆ ಭೇಟಿ ನೀಡಲಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದ ಆವರಣದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಅದೇ ವೇದಿಕೆಯಲ್ಲಿ ಝೈದ್ ಖಾನ್, ರಚಿತಾ ರಾಮ್ ನಟಿಸಿರುವ ಮೆಲೋಡಿ ಹಾಡು ಬಿಡುಗಡೆ ಆಗಲಿದೆ. ಚಿತ್ರತಂಡದ ಹಾಗೂ ಬೆಣ್ಣೆ ನಗರಿಯ ಜನರೆದುರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್) ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ‘ಅಯ್ಯೋ ಶಿವನೇ …’, ‘ಬ್ಲಡಿ ಲವ್ …’ ಹಾಗೂ ‘ನಿನ್ನಲ್ಲೇ ನಾನಿರೇ…’ ಎಂಬ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮತ್ತೊಂದು ಹಾಡು ಜನವರಿ 4ರಂದು ದಾವಣಗೆರೆಯಲ್ಲಿ ಅನಾವರಣಗೊಳ್ಳಲಿದೆ.
ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಸಿನಿಮಾ ಅರ‍್ಿಸುತ್ತಿದೆ. ಆನಂದ್ ಆಡಿಯೋ ಕಂಪನಿ ಬೃಹತ್ ಮೊತ್ತಕ್ಕೆ ಕಲ್ಟ್ ಆಡಿಯೋ ರೈಟ್ಸ್ ತನ್ನದಾಗಿಸಿಕೊಂಡಿತ್ತು. ಈ ಚಿತ್ರವನ್ನು ಗಣರಾಜ್ಯೋತ್ಸವದ ಅಂಗವಾಗಿ (ಜ. 23) ಅದ್ದೂರಿಯಾಗಿ ತೆರೆ ಕಾಣಿಸಲು ಸಜ್ಜಾಗಿದೆ ಟೀಮ್ ಕಲ್ಟ್.





