ಸರಸ್ವತಿ*

ಇದೇ ನವೆಂಬರ್ 28 ಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯ ಸಂಭ್ರಮ ಕಾಣುತ್ತಿರುವ ’ಅಪರೇಷನ್ ಲಂಡನ್ ಕೆಫೆ’ (ಓ. ಎಲ್. ಸಿ) ಚಿತ್ರದ ಮೊದಲ ಹಾಡು ಬಿಡುಗಡೆಗೊಂಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ!

ತರ್ಲೆ ತುಂಟ ಲಂಗದಾವಣಿ ತೊಟ್ಟ ಅಪ್ಪಟ ಬಜಾರಿ ಬಾಯಿ ಬಡಕಿ ಹಳ್ಳಿ ಹುಡುಗಿಯಂತೆ ಮೇಘಾ ಶೆಟ್ಟಿ ಹಿಂದೆಂದಿಗಿಂತಲೂ ಲವಲವಿಕೆಯಿಂದ ಕಾಣಿಸಿಕೊಂಡು ’ರೈ ರೈ ರೈ ಈ ಪ್ರೀತಿ ಶ್ಯಾನೆ ಮಜವಾಗುತೈತಿ, ಮನಸಾಗ ಎಲಿಯಡಿಕಿ ಆಗಿಯಾಕತೈತಿ’ ಎನ್ನುತ್ತಾ ತನ್ನ ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ರಸಗವಳ ಬಡಿಸಿದ್ದಾರೆ.

rhyming

ನಕ್ಸಲೈಟ್ ಗೆಟಪ್ಪಿನಲ್ಲಿ ಮೀಸೆ ತಿರುವುತ್ತಾ ಖದರ್ರಾಗಿ ಕಾಣುವ ನಾಯಕ ಕವೀಶ್ ಶೆಟ್ಟಿಯ ಸಿದ್ಧಾಂತ ಬದ್ಧ ಬಿಗುಮಾನವನ್ನು ಅಣಕಿಸಿ, ಗೋಳು ಹುಯ್ದುಕೊಳ್ಳುತ್ತಾ ಪ್ರಕೃತಿ ಮತ್ತು ಮಾನವ ಸಹಜ ಪ್ರೀತಿ ಸಂಬಂಧಗಳ ಬಗ್ಗೆ ಸುಂದರವಾಗಿ ವರ್ಣಿಸುತ್ತಾ ಚಿತ್ರದ ತುಂಬಾ ಇಂತದ್ದೇ ತರಲೇ ತಂಟೆ ತಕರಾರು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುವ ಮೇಘಾ ಶೆಟ್ಟಿ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾರೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿ ಈ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಛಾಯಾಗ್ರಾಹಕ ಆರ್. ಡಿ. ನಾಗಾರ್ಜುನ್ ಹಾಡಿಗೆ ತಕ್ಕ ಹಾಗೆ ಪ್ರಕೃತಿಯ ಸುಂದರ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.

rhyming 1

ವಿನಾದ್ ಮ್ಯೂಸಿಕ್ ಲೇಬಲ್ನ ಅಡಿಯಲ್ಲಿ ಮೂರೂ ಭಾಷೆಯಲ್ಲಿ ಬಿಡುಗಡೆಗೊಂಡ ಈ ಹಾಡಿಗೆ ಸಂಗೀತ ನಿರ್ದೇಶಕ ಪ್ರಾಂಶು ಝಾ ಜಿಲ್ಕಾ ಚಿತ್ರದ ನಂತರ ಎರಡನೆಯ ಬಾರಿ ತಮ್ಮ ವಿಶೇಷ ವಿಶಿಷ್ಟ ಸಂಗೀತ ಸಂಯೋಜನೆಯ ಮೂಲಕ ಮತ್ತೊಮ್ಮೆ ಕನ್ನಡಕ್ಕೂ ಜೈ ಎಲ್ಲದಕ್ಕೂ ಸೈ ಎನ್ನಿಸಿಕೊಂಡಿದ್ದಾರೆ.

ತನ್ನ ಮಾದಕ ಮತ್ತು ಮೋಹಕ ಧ್ವನಿಯಿಂದ ಈಗಾಗಲೇ ಕನ್ನಡಿಗರ ಮನ ಸೂರೆಗೊಳಿಸಿದ ಗಾಯಕಿ ಐಶ್ವರ್ಯ ರಂಗರಾಜನ್ ಈ ಮೂಲಕ ಮತ್ತೊಂದು ಹಿಟ್ ಹಾಡನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ

ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಸಂಸ್ಥೆಯಿಂದ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಮಾಸ್ ಆಕ್ಷನ್ ಪೋಸ್ಟರ್ಸ್ ಮೂಲಕ ಗಮನ ಸೆಳೆದಿದ್ದ ಅಪರೇಷನ್ ಲಂಡನ್ ಕೆಫೆ ಮತ್ತೆ ಈ ಹಾಡಿನ ಮೂಲಕ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಿನ ಕುತೂಹಲ ಹುಟ್ಟಿಸಿದೆ. ಈ ಚಿತ್ರ ಇದೇ ತಿಂಗಳು ಇಪ್ಪತ್ತೆಂಟಕ್ಕೆ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ