– ರಾಘವೇಂದ್ರ ಅಡಿಗ ಎಚ್ಚೆನ್.
ರಂಗ ವಿಜಯಾ ತಂಡದ ಕೂಸು ರಘು ರಾಜನಂದ ಪೂರ್ಣ ಪ್ರಮಾಣ ದ ನಾಯಕನಾಗಿ ನಟಿಸಿರುವ ರೋಣ ಚಿತ್ರದ ಟೀಜರ್ ಜಿ.ಟಿ. ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಆಗಿದೆ.. ಬಹುಭಾಷಾ ನಟರಾದ ಶರತ್ ಲೋಹಿತಾಶ್ವ ಈ ಈ ಟೀಸರ್ ಅನ್ನು ರಿಲೀಸ್ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಕೃತಿ ಪ್ರಸಾದ್, ಬಲರಾಜವಾಡಿ, ಶ್ರೀಧರ್, ಶರತ್ ಲೋಹಿತಾಶ್ವ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿದ್ದು ಪ್ರೆಸ್ ಮೀಟ್ ನಲ್ಲಿ ಚಿತ್ರತಂಡ ಮಾತನಾಡಿದೆ.
ಸಸ್ಪೆನ್ಸ್, ಥ್ರಿಲ್ಲರ್, ರಾಜಕಾರಣ, ವಿಜ್ಞಾನ, ತಂತ್ರಜ್ಞಾನ ಪ್ರೀತಿ ಎಲ್ಲವನ್ನು ಒಳಗೊಂಡ ಮಿಕ್ಸ್ ಮಸಾಲ ಕತೆಯ ಸಿನಿಮಾ ಇದು
ಬಿ ಕೆ ಆರ್ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸತೀಶ್ ಕುಮಾರ್
ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ರೋಣ
ಚಿತ್ರದಲ್ಲಿ ನಾಯಕನಾಗಿ ರಘು ರಾಜನಂದ ಕಾಣಿಸಿಕೊಳ್ಳಲಿದ್ದಾರೆ
ಈ ಹಿಂದೆ ಕೆರೆಬೇಟೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ರಘು
ರೋಣ ಚಿತ್ರದ ಮೂಲಕ ಪೂರ್ಣ ಪ್ರಮಾಣ ನಾಯಕನಾಗಿ
ಕಾಣಿಸಿಕೊಳ್ಳಲಿದ್ದಾರೆ. ಹೊಸಕೋಟೆ ಮೂಲದ ರಘು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊ೦ಡು ನಟಿಸುವುದರೊಂದಿಗೆ ಗೆಳೆಯರ ತಂಡ ಕಟ್ಟಿಕೊಂಡು ನಿರ್ಮಾಣವನ್ನೂ ಮಾಡಿದ್ದಾರೆ.
ನಾಯಕಿ ಪ್ರಕೃತಿ ಪ್ರಸಾದ್, ಚಿಲ್ಲರ್ ಮಂಜು, ವಿನೋದ್ ಪೂಜಾರ್ ಮುಂತಾದವರು ಬಹಳಷ್ಟು ಅದ್ಭುತವಾಗಿ ನಟಿಸಿದ್ದಾರೆ. ಶರತ್ ಲೋಹಿತಾಶ್ವ ಅವರ ಇದುವರೆಗಿನ ಪಾತ್ರಗಳಿಗೆ ಹೋಲಿಸಿದರೆ ಇದೊಂದು ವಿಭಿನ್ನ ಪಾತ್ರ ಎನ್ನುವುದು ತಿಳಿಯುತ್ತದೆ.
ರೋಣ ಸಿನಿಮಾದಲ್ಲಿ ನ್ಯಾಯ ನೀತಿ ಎಂದು ಹೋರಾಟ ಮಾಡುವ ಪಾತ್ರದಲ್ಲಿ ಶರತ್ ಲೋಹಿತಾಶ್ವ ಕಾಣಿಸಿಕೊಳ್ಳಲಿದ್ದಾರೆ.
ತಂದೆ-ಮಗನ ಕಥೆ ನನಗೆ
ಇಷ್ಟವಾಯ್ತು. ನಾಯಕ ರಘು ನನ್ನ ಮಗನ ಪಾತ್ರ ಮಾಡಿದ್ದು, ನಾನು ಗೌರವಯುತ ತಂದೆಯಾಗಿ ನಟಿಸಿದ್ದೇನೆ, ನ್ಯಾಯ, ತಿ ಅಂತ ಹೋರಾಟ ಮಾಡುವ ಪಾತ್ರವದು. ಟೀಸರ್ ನೋಡಿದಾಗ
ಖುಷಿ ಕೊಟ್ಟಿತು. ಚಿತ್ರ ಕೂಡ ಅಷ್ಟೇ ಸುಂದರವಾಗಿ
ಮೂಡಿ ಬಂದಿದೆ ಎಂದು ಹೇಳಿದರು.
ನಂತರ ನಿರ್ದೇಶಕ
ಸತೀಶ್ ಕುಮಾ ಮಾತನಾಡಿ, ಕಳೆದ ಇ
ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾ ಸಾಕಷ್ಟು ಅನುಭವ ಪಡೆದುಕೊಂಡು ಆ ಅನುಭವದ ಮೂಲಕ ಮೊದಲಬಾರಿಗೆ ಈ ಚಿತ್ರ ನಿರ್ದೇಶಿಸಿದ್ದೇನೆ. ರೋಣ ಒಂದು ಕ್ಷೇತ್ರದ ಹೆಸರು. ಎರಡು ವರ್ಷದ ಹಿಂದೆ ಶುರುವಾದ ಈ ಚಿತ್ರಕ್ಕೆ ಹೊಸಕೋಟೆಯ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ಪೊಲಿಟಿಕಲ್ ಡ್ರಾಮಾ, ಸಾಮಾಜಿಕ ಕಳಕಳಿ, ಲವ್ ಸ್ಟೋರಿ ಹೀಗೆ ಎಲ್ಲಾ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದೆ ಎಂದು ಹೇಳಿದರು.
ನಾಯಕ ರಘು ರಾಜ ಮಾತನಾಡಿ ರಂಗಭೂಮಿಯಲ್ಲಿ ಸಾಕಷ್ಟು ಕಲಿತ ನಂತರ ಕ್ಯಾಮೆರಾ ಎದುರಿಸಿದ್ದೇನೆ, ಕೆರೆಬೇಟೆಯಲ್ಲಿ ನಾನು ನಿರ್ದೇಶಕರು ಜತೆಗೆ ಕೆಲಸ ಮಾಡಿದ್ದೆವು, ರಮೇಶ್ ಒಳ್ಳೇ ಕಥೆ ಮಾಡಿದ್ದಾರೆ, ನಾವು ಐವರು ಸ್ನೇಹಿತರೇ ಸೇರಿ ಈ ಸಿನಿಮಾಗೆ ಬಂಡವಾಳ ಹಾಕಿದ್ದೇವೆ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ ಎಂದು ಹೇಳಿದರು, ನಟರಾದ ಮಾಲೂರು ವಿಜಯ್, ಗೀತಾ, ಚಿಲ್ಲರ್ ಮಂಜು, ಸಂಗೀತ
ನಿರ್ದೇಶಕ ಗಗನ್, ಸಂಭಾಷಣೆಗಾರ ಆದೀಶ್ವರ, ಛಾಯಾಗ್ರಾಹಕ ಆರುಣ್‌ಕುಮಾರ್, ಸಾಹಿತಿ ಕಿನ್ನಾಳರಾಜ್ ತಮ್ಮ ಅನುಭವ ಹಂಚಿ
ಕೊಂಡರು.