- ಎಸ್. ಆರತಿ
ಕನ್ನಡದ ಖ್ಯಾತ ನಟಿ ರುಕ್ಮಿಣಿ, ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಾ, ತಮ್ಮ ಬ್ಯೂಟಿ, ಗ್ಲಾಮರ್ ನಿಂದ `ನ್ಯಾಶನಲ್ ಕ್ರಶ್' ಎನಿಸಿದ್ದಾರೆ. `ಕಾಂತಾರ ಚ್ಯಾಪ್ಟರ್-1' ಪ್ಯಾನ್ ಇಂಡಿಯಾ ಚಿತ್ರದ ಅಪಾರ ಯಶಸ್ಸಿನಿಂದ ಈ ದಕ್ಷಿಣದ ಸ್ಟಾರ್ ಯುವಜನತೆಯ ಹೃದಯ ಗೆದ್ದದ್ದು ಹೇಗೆ....?
ಕಳೆದ ತಿಂಗಳು ರಿಲೀಸ್ ಆದ ಕನ್ನಡದ `ಕಾಂತಾರ ಚ್ಯಾಪ್ಟರ್-1' ಚಿತ್ರದಲ್ಲಿ ರಾಜಕುಮಾರಿ ಕನಕವತಿಯಾಗಿ ನಟಿಸಿದ ಅಪ್ಪಟ ಕನ್ನಡತಿ ರುಕ್ಮಿಣಿ ವಸಂತ್, ಕನ್ನಡದ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಈ ಪ್ಯಾನ್ ಇಂಡಿಯಾ ಚಿತ್ರ ದಕ್ಷಿಣದ ಎಲ್ಲಾ ಭಾಷೆ, ಹಿಂದಿ, ಬಂಗಾಳಿಯಲ್ಲೂ ಧೂಳೆಬ್ಬಿಸಿದ್ದು, ಈಕೆ ಇಡೀ ದೇಶದ ಯುವಜತೆಯ ಅಚ್ಚುಮೆಚ್ಚಿನ ನಾಯಕಿಯಾಗಿ ಗುರುತಿಸಲ್ಪಟ್ಟು, ಇಂದಿನ `ನ್ಯಾಶನಲ್ ಕ್ರಶ್' ಎನಿಸಿದ್ದಾರೆ. ರುಕ್ಮಿಣಿ ಪ್ರಸ್ತುತ ಭಾರತೀಯ ಸಿನಿರಂಗದ ಎಲ್ಲರಿಗಿಂತಲೂ ಅತಿ ಪ್ರತಿಭಾವಂತ ನಟಿ ಎಂಬ ಪಟ್ಟಕ್ಕೆ ಸೈ ಎನಿಸಿದ್ದಾರೆ. ಈಕೆ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಚಿತ್ರರಂಗದಲ್ಲೂ ಈಗಾಗಲೇ ಭರವಸೆಯ ಛಾಪು ಮೂಡಿಸಿದ್ದಾರೆ!
ಲಂಡನ್ ಮೂಲದ `ರಾಯ್ ಅಕ್ಯಾಡೆಮಿ ಆಫ್ ಡ್ರಮಾಟಿಕ್ ಆರ್ಟ್' ನಿಂದ ಅಭಿನಯದ ತರಬೇತಿ ಪಡೆದ ಈಕೆ, ಮೊದಲು ಕನ್ನಡದಲ್ಲಿ 2019ರಲ್ಲಿ `ಬೀರಬಲ್ ಟ್ರೈಲಾಜಿ' ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟರು. ಈಕೆಯ ಕೆರಿಯರ್ ಗ್ರಾಫ್ ಮೇಲೇರಿದ್ದು 2023ರಲ್ಲಿ ಈಕೆ ನಟಿಸಿದ `ಸಪ್ತಸಾಗರದಾಚೆ ಎಲ್ಲೋ' ಸೈಡ್‌ಆಗಿ ರಕ್ಷಿತ್ ಶೆಟ್ಟಿ ಜೊತೆ, ಪ್ರಿಯಾ ಪಾತ್ರದಲ್ಲಿ ಯುವಜನತೆಯ ಮನಗೆದ್ದರು, ನಂತರ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ! ತನ್ನ ಸಶಕ್ತ ನಟನೆಯಿಂದ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರರಾದ ರುಕ್ಮಿಣಿ, ಈ ಚಿತ್ರಕ್ಕಾಗಿ ಸರ್ವಶ್ರೇಷ್ಠ ಕನ್ನಡ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್ ಗಿಟ್ಟಿಸಿದರು.
ರುಕ್ಮಿಣಿಯ ಮುಂದಿನ ಕನ್ನಡ ಚಿತ್ರಗಳು ಒಂದರ ಮೇಲೊಂದು ಹಿಟ್ ಎನಿಸಿತು. ರಕ್ಷಿತ್ ಶೆಟ್ಟಿ ಜೊತೆ `ಸಪ್ತಸಾಗರದಾಚೆ ಎಲ್ಲೋ,' ಗಣೇಶ್ ಜೊತೆ `ಬಾನ ದಾರಿಯಲ್ಲಿ,' ಶ್ರೀಮುರಳಿ ಜೊತೆ `ಬಫೀರಾ,' ಶಿವಣ್ಣ ಜೊತೆ `ಭೈರತಿ ರಣಗಲ್' ಮುಂತಾದ ಉತ್ತಮ ಹೆಸರು ತಂದುಕೊಟ್ಟವು.
ಕನ್ನಡದಲ್ಲಿ ಮಿಂಚುತ್ತಲೇ ನೆರೆ ಭಾಷೆಯ ತಮಿಳಿನಲ್ಲಿ ರುಕ್ಕು ಪಾತ್ರದಲ್ಲಿ `ಏಸ್' ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ .. ಮುರುಗದಾಸ್ ರಂಥ ದಕ್ಷ ನಿರ್ದೇಶಕರ ಗರಡಿಯಲ್ಲಿ ಶಿವ ಕಾರ್ತಿಕೇಯನ್ ಜೊತೆ `ಮದರಾಸಿ' ಚಿತ್ರಗಳಲ್ಲಿ ಸೈ ಎನಿಸಿಕೊಂಡರು. ಇದರ ಮುಂದಿನ ಹೆಜ್ಜೆಯಾಗಿ ನಿಖಿಲ್ ಸಿದ್ಧಾರ್ಥ್ ಜೊತೆ `ಅಪ್ಪುಡೋ ಇಪ್ಪುಡೋ ಎಪ್ಪುಡೋ' ತೆಲುಗು ಚಿತ್ರರಂಗದಲ್ಲೂ ದಾಂಗುಡಿ ಇಟ್ಟಾಯಿತು. ಸೊಗಸುಗಾತಿ ರುಕ್ಮಿಣಿ ಕೇವಲ ತನ್ನ ಸಿನಿಮಾಗಳಿಂದಾಗಿ ಮಾತ್ರ ಖ್ಯಾತರಲ್ಲ, ಬದಲಿಗೆ ತಮ್ಮ ಸೊಬಗಿನ ಸೌಂದರ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ `ನ್ಯಾಶನಲ್ ಕ್ರಶ್' ಆಗಿಯೇ ಗುರುತಿಸಿಕೊಂಡಿದ್ದಾರೆ!
ಇತ್ತೀಚೆಗೆ ಗೃಹಶೋಭಾಳೊಂದಿಗೆ ಮನಬಿಚ್ಚಿ ಮಾತನಾಡಿದ ರುಕ್ಮಿಣಿ ವಸಂತ್, ತಮ್ಮ ಇದುವರೆಗಿನ ನಟನೆಯ ಕೆರಿಯರ್, `ಕಾಂತಾರ ಚ್ಯಾಪ್ಟರ್-1' ಚಿತ್ರದಲ್ಲಿನ ರಾಣಿ ಕನಕವತಿಯ ವಿಶಿಷ್ಟ ಪಾತ್ರ ಮತ್ತು ಆ ಚಿತ್ರದ ಶೂಟಿಂಗ್ ಅನುಭವ, 15ರ ಹರೆಯದಲ್ಲೇ ಅಭಿನಯದ ಅಭಿರುಚಿ ಬೆಳೆಸಿಕೊಂಡಿದ್ದು, ತಮ್ಮ ನಟನೆಯ ಜರ್ನಿ, ಮನೆಯವರು ನೀಡಿದ ಸಹಕಾರ, ತಾನು ಯಾವ ಪರಿವಾರಕ್ಕೆ ಸೇರಿದರು, ಮುಂದೆ ಬಾಲಿವುಡ್ ಚಿತ್ರಗಳಲ್ಲಿ ನಟಿಸಬೇಕೆಂದಿರುವ ಆಸಕ್ತಿ.... ಇತ್ಯಾದಿ ಎಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಅವರೊಂದಿಗಿನ ಮಾತುಕಥೆಯ ಸಂಕ್ಷಿಪ್ತ ರೂಪ :





