ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟಕ್ಕೆ ಹೆಸರಾಗಿರುವ ಹೋಟೆಲ್ ನಳಪಾಕದಲ್ಲಿ ಸಂಕ್ರಾಂತಿ ಸಡಗರಕ್ಕೆ ವಿಶೇಷ ಸವಿಭೋಜನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ನಟಿ ತಾರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
”ಬೆಂಗಳೂರಿನಂತಹ ಹಳೆ ಮೈಸೂರಿನ ಭಾಗದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಸೇರಿದಂತೆ ನಾನಾ ಬಗೆಯ ಖಾದ್ಯ ಗಳನ್ನು ಆಹಾರ ಪ್ರಿಯರಿಗೆ ಉಣಬಡಿಸುವ ನಳಪಾಕ ಬೆಂಗಳೂರಿನಲ್ಲಿ ಅತಿ ಪ್ರಸಿದ್ಧವಾದ ಎಂಟಿಆರ್ ಮತ್ತು ಸಿಟಿಆರ್ ಹೋಟೆಲ್‌ಗಳ ಮಾದರಿಯಲ್ಲಿ ನಗರದಲ್ಲಿ ಉತ್ತರ ಕರ್ನಾಟಕದ ತಿಂಡಿ ತಿನಿಸುಗಳಿಗೆ ಖ್ಯಾತಿ ಗಳಿಸಿದೆ” ಎಂದರು.
ಉಪಲೋಕಾಯುಕ್ತ ಹಾಗೂ ಎನ್‌ಜಿಟಿ ರಾಜ್ಯ ಘಟಕದ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ  ಎಂಟು ದಿನಗಳ ಸಂಕ್ರಾಂತಿ ಸವಿರುಚಿ

FB_IMG_1767931283844

ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, “ನಳಪಾಕದ
ಎಲ್ಲ ತಿಂಡಿ ತಿನಿಸುಗಳು ಆರೋಗ್ಯಪೂರ್ಣ ಬೆಂಗಳೂರಿನಂತಹ ಹಳೇ ಮೈಸೂರಿನ ಭಾಗದಲ್ಲಿ ಉತ್ತರ ಕರ್ನಾಟಕದ ರೊಟ್ಟಿ ಮತ್ತು ವಿವಿಧ ಬಗೆಯ ಖಾದ್ಯಗಳನ್ನು ಜನಪ್ರಿಯಗೊಳಿಸಿದ್ದಾರೆ” ಎಂದು ಹೇಳಿದರು. “ಹೋಟೆಲ್ ಉದ್ಯಮ ಅತಿಕಷ್ಟಕರ. ಇಂತಹ ಸನ್ನಿವೇಶ ಮತ್ತು ಸಂದರ್ಭದಲ್ಲಿ ನಳಪಾಕ ಹೋಟೆಲಿನ ಆಡಳಿತ ವರ್ಗ ಮುತುವರ್ಜಿ ವಹಿಸಿ ಸಾಮಾಜಿಕ ವಲಯಕ್ಕೂ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ” ಎಂದು ಹೇಳಿದರು.
ನಳಪಾಕ ಹೋಟೆಲ್ ಮಾಲಿಕರಾದ ಲಿಂಗಯ್ಯ ಬಿ. ಕಾಡದೇವರಮಠ ಅವರು ಮಾತನಾಡಿ, “ಹೋಟೆಲ್ ಶುಚಿ ಮತ್ತು ಶುಭ್ರತೆ ಕಾಪಾಡಿಕೊಂಡು ಬರುವುದು ಒಂದು ಸವಾಲು, ಸದಾ ಗ್ರಾಹಕನನ್ನು ಸಂತೃಪ್ತಗೊಳಿಸುವುದೇ ನಳಪಾಕ ಹೋಟೆಲ್
ಗುರಿ” ಎಂದರು.
ಈ ವೇಳೆ ಕವಿತಾ ಲಿಂಗಯ್ಯ, ಹಿರಿಯ ಪತ್ರಕರ್ತರಾದ ಸದಾಶಿವ ಶೆಣೈ,, ಶಿವಾನಂದ ತಗಡೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ “ವಂದೇ ಕರ್ನಾಟಕ ” ಮಾಸಪತ್ರಿಕೆಯ 2026ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಂಗಭೂಮಿ ಕಲಾವಿದರಾದ ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಎಸ್ಪಿಬಿ ಅವರಿಂದ ಹಾಡು, ಸಂಗೀತ ಕಾರ್ಯಕ್ರಮ ಆಯೋಜನೆ ಆಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ