ಸರಸ್ವತಿ *

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಜ. 9ರಂದು ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣಾ ಹಕ್ಕನ್ನು ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಪಡೆದುಕೊಂಡಿದೆ.

ಮಾರುತಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ, ಪ್ರಭಾಸ್ ಅವರು ಹೊಸದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಈ ಚಿತ್ರ ದೇಶಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಇದೊಂದು ಪಕ್ಕಾ ಕಮರ್ಷಿಯಲ್ ಹಾಗೂ ಹಾರರ್, ಫ್ಯಾಂಟಸಿ ಎಂಟರ್ ಟೈನರ್‌ ಚಿತ್ರವಾಗಿದ್ದು, ಮನರಂಜನೆಯ ಜತೆಗೆ ಭಾವನಾತ್ಮಕ ಫ್ಯಾಂಟಸಿ ಎಲಿಮೆಂಟ್ಸ್ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲಿದೆ.

rajasaab

ಈ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿ ಬುಧವಾರ ಸಂಜೆ ನಡೆಯಿತು. ಇಡೀ ಚಿತ್ರದ ಶೂಟಿಂಗ್ ನಡೆದ ಪೀಪಲ್ ಮೀಡಿಯಾ ಫ್ಯಾಕ್ಟರಿ ಸ್ಟುಡಿಯೋದಲ್ಲಿ ಹಾಕಿದ್ದ ಪುರಾತನ ಭವ್ಯ ಬಂಗಲೆಯ ಸೆಟ್ ನಲ್ಲೇ ನಡೆದದ್ದು ವಿಶೇಷ. ಈ ವೇದಿಕೆಯಲ್ಲಿ ನಿರ್ಮಾಪಕರಾದ ಟಿ.ಜಿ. ವಿಶ್ವಪ್ರಸಾದ್, ಕೃತಿ ಪ್ರಸಾದ್, ಚಿತ್ರದ ನಿರ್ದೇಶಕ ಮಾರುತಿ, ನಾಯಕಿಯರಾದ ನಿಧಿ ಅಗರವಾಲ್, ರಿಧ್ದಿ ಕುಮಾರ್, ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಕೂಡ ಹಾಜರಿದ್ದು ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.

ಚಿತ್ರದ ಟ್ರೈಲರ್, ಹಾಡುಗಳ ಪ್ರದರ್ಶನದ ನಂತರ ಮಾತನಾಡಿದ ಟಿ.ಜಿ. ವಿಶ್ವಪ್ರಸಾದ್ ರಾಜಾಸಾಬ್ ಮೂರು ವರ್ಷಗಳ ಹಿಂದೆ ಈ ಸಿನಿಮಾ ಪಯಣ ಪ್ರಾರಂಭ ವಾಯಿತು. ಫೈನಲಿ ಜ. 9ಕ್ಕೆ ಚಿತ್ರ ರಿಲೀಸಾಗುತ್ತಿದೆ. ಹಾರರ್ ಫ್ಯಾಂಟಸಿ ಎಲ್ಲ ಭಾಷೆಗೂ ಹೊಂದಿಕೊಳ್ಳುತ್ತದೆ. ನಮ್ಮ ಚಿತ್ರ ಪ್ರೇಕ್ಷಕರಿಗೆ ಅದ್ಭುತ ಫ್ಯಾಂಟಸಿ ಅನುಭವ ನೀಡುತ್ತದೆ ಎಂದು ಹೇಳಿದರು.

ನಿರ್ದೇಶಕ ಮಾರುತಿ ಮಾತನಾಡಿ ಒಂದೂವರೆ ವರಗಷದಿಂದ ಈ ಸೆಟ್ ತುಂಬೆಲ್ಲ ಓಡಾಡಿದ್ದೇವೆ. ಆ ನೆನಪು ಎಂದಿಗೂ ಮಾಸದು. ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ನನಗೆ ಈ ಅವಕಾಶ ನೀಡಿದ್ದಕ್ಕೆ ನಾನು ಚಿರಋಣಿ. ಇದು ಕೇವಲ ಸಿನಿಮಾ ಅಲ್ಲ, ಒಂದು ಬಿಗ್ ಹಾರರ್-ಫ್ಯಾಂಟಸಿ ಅನುಭವ. ಚಿತ್ರದ ಪ್ರತಿ ದೃಶ್ಯವೂ ಅಭಿಮಾನಿಗಳಿಗೆ ಹಬ್ಬದಂತಿರಲಿದೆ” ಎಂದು ಹೇಳಿದರು.

ನಾಯಕಿ ನಿಧಿ ಅಗರವಾಲ್ ಮಾತನಾಡಿ ಈ ಸೆಟ್ ತುಂಬೆಲ್ಲ ಹಲವಾರು ಸಲ ಓಡಾಡಿದ್ದೇನೆ. ಇಲ್ಲಿ ತುಂಬಾ ನೆನಪುಗಳಿವೆ. ಪ್ರಭಾಸ್ ರಂತಹ ಆಕ್ಟರ್ ಜತೆ ಅಭಿನಯಿಸಿದ್ದು ಖುಷಿಯ ಸಂಗತಿ, ಇನ್ನೆರಡು ದಿನಗಳಲ್ಲಿ ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದು ಹಿಂದಿನ ಅನುಭವಗಳನ್ನು ಮೆಲುಕು ಹಾಕಿದರು.

ಕರ್ನಾಟಕದಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜಾಸಾಬ್ ಚಿತ್ರ ಬಿಡುಗಡೆಯಾಗುತ್ತಿದೆ.

ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ, ಹಿರಿಯ ನಟಿ ಜರೀನಾ ವಹಾಬ್ ನಾಯಕನ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಮತ್ತು ಬೋಮನ್ ಇರಾನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಮನ್ ಅವರ ಸಂಗೀತ ಸಂಯೋಜನೆ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ಬ್ಯಾನರ್ ಅಡಿ ಟಿ.ಜಿ. ವಿಶ್ವ ಪ್ರಸಾದ್ ಅವರು ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ