ರಿಂಗೋ ಬ್ಯಾನರ್ಜಿಯವರ `ನಾ ಹನ್ನೀಯತೆ' ಬಂಗಾಳಿ ಚಿತ್ರ 2012ರಲ್ಲಿ ರಿಲೀಸ್‌ ಆದಾಗ, ತಾಯಿ ಮಗಳ ಅಪೂರ್ವ ಬಾಂಧವ್ಯದ ಈ ಚಿತ್ರ ಕೊಲ್ಕೊತಾ ಮಾತ್ರವಲ್ಲದೆ ದೆಹಲಿ, ಮುಂಬೈಗಳಲ್ಲೂ ಯಶಸ್ವಿಯಾಯಿತು. ಮಹಾಭಾರತದ ದ್ರೌಪದಿ ಪಾತ್ರದಿಂದ ಖ್ಯಾತಿವೆತ್ತ ರೂಪಾ ಗಂಗೂಲಿ ಇಲ್ಲಿ ತಾಯಿ ಆಗಿದ್ದರೆ, ಬಂಗಾಳ ಮೂಲದ ನವನಟಿ ಸಯಾನಿ ದತ್ತಾ ಮಗಳ ಪಾತ್ರದಲ್ಲಿ ಎಲ್ಲರ ಪ್ರಶಂಸೆ ಗಿಟ್ಟಿಸಿದಳು. ಈ ಕಾರಣದಿಂದಲೇ ಇದೇ ನಿರ್ದೇಶಕರು ತಮ್ಮ ಮುಂದಿನ `ಶದಾಕೋ ಅಚಾ' ಚಿತ್ರದಲ್ಲೂ ಗ್ಲಾಮರಸ್‌ ಪಾತ್ರ ನೀಡಿದರು. ಹಳ್ಳಿ ಹುಡುಗಿ ಹೇಗೆ ಡಾಕ್ಟರ್‌ ಆದಳು ಎಂಬುದೇ ಈ ಚಿತ್ರ.

ನಿರ್ದೇಶಕರ ಸವಾಲನ್ನು ಖಡಕ್‌ ಆಗಿ ಸ್ವೀಕರಿಸಿದ ಸಯಾನಿ ಹಳ್ಳಿ ಹುಡುಗಿ ಡ್ಯಾನ್ಸರ್‌ ಬೆಡಗಿ ಎರಡೂ ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿದಳು. ಆ ವರ್ಷದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಇದು ಪ್ರದರ್ಶನ ಕಂಡಿತು. ಇದಾದ ನಂತರ ಇವಳಿಗೆ ಇದೇ ನಿರ್ದೇಶಕರ `ಏ ಜೇ ಅಚೆ ಸೊಹೋರ್‌' ಚಿತ್ರದಲ್ಲಿ ಸತತ 3ನೇ ಅವಕಾಶ ಸಿಕ್ಕಿ, ಹ್ಯಾಟ್ರಿಕ್‌ ಹೊಡೆದಳು!

ಇದುವರೆಗೂ ಸಯಾನಿ 11 ಬಂಗಾಳಿ ಚಿತ್ರಗಳಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿದ್ದಾಳೆ. ಪ್ರತಿ ಚಿತ್ರದಲ್ಲೂ ತನ್ನನ್ನು ತಾನು ಇಂಪ್ರೂವೈಸ್‌ ಮಾಡಿಕೊಳ್ಳುತ್ತಿದ್ದಾಳೆ. ಇದಾದ ಮೇಲೆ ಇವಳು ಬಾಲಿವುಡ್‌ ಗೆ ಕಾಲಿಟ್ಟಾಗ, ಸ್ವಲ್ಪ ಎಡವಿದಳು ಎಂದೇ ಹೇಳಬೇಕು. ಕಳೆದ ವರ್ಷ OTT ಯಲ್ಲಿ ರಿಲೀಸ್‌ ಆದ ಇವಳ `ದಿ ಲೈಫ್‌' ಹಾರರ್‌ ಚಿತ್ರದಲ್ಲಿ ಗುರುಮೀತ್‌ ಚೌಧರಿಯ ಪತ್ನಿ ಪಾತ್ರದಲ್ಲಿ ನಟಿಸಿದ್ದಳು.

ನೀನು ನಟಿಯಾಗಲು ಬಂದವಳು, ಹಾಗಿರುವಾಗ ಸಹಾಯಕ ನಿರ್ದೇಶಕಿಯಾಗಿ ಕೆರಿಯರ್ಶುರು ಮಾಡಿದ್ದು ನಿನ್ನ ಸಿನಿ ಜೀವನಕ್ಕೆ ಹೊಂದುವುದೇ....?

ನೋಡಿ, ನಾನು ಬಾಲ್ಯದಿಂದಲೇ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ಉತ್ತಮ ಅಭಿನೇತ್ರಿ ಎನಿಸಿಕೊಳ್ಳುವ ಹುಚ್ಚು ಕನಸು ಕಂಡವಳು. ಶಾಲಾ ಕಾಲೇಜುಗಳಲ್ಲಿ ನಾನು ಬೇಕಾದಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಮಮತಾ ಶಂಕರ್‌ ಅವರಿಂದ ಕಥಕ್‌ ಶಾಸ್ತ್ರೀಯ ನೃತ್ಯ ಸಹ ಕಲಿತಿರುವೆ. ಆದರೆ ನಟನೆಯ ವೃತ್ತಿಯಲ್ಲಿ ಹೇಗೆ ಮುಂದುವರಿಯಬೇಕೋ ಗೊತ್ತಿಲ್ಲದವಳು. ಆಗ ನಾನು ಕೋಲ್ಕತಾದ ಪ್ರಸಿದ್ಧ ರಂಗಕರ್ಮಿ, ಅಭಿನಯ ಪ್ರಶಿಕ್ಷಕರಾದ ಸೋಹಾಗ್‌ ಸೇನ್‌ ರನ್ನು ಭೇಟಿಯಾದೆ. ಅವರಿಂದ ಬೇಕಾದಷ್ಟು ಕಲಿತೆ. ಅವರೇ ತಿಳಿಸಿಕೊಟ್ಟಂತೆ, ಸಹಾಯಕ ನಿರ್ದೇಶಕಿಯಾಗಿ ದುಡಿಯುವುದರಿಂದ ಸಿನಿರಂಗದ ಆಗುಹೋಗುಗಳು, ಕ್ಯಾಮೆರಾ ಟ್ರಿಕ್ಸ್ ಬೇಗ ಕಲಿಯಬಹುದೆನಿಸಿತು. ಇದರಿಂದ ಉತ್ತಮ ನಟಿಯಾಗಲು ಸಾಧ್ಯ ಎಂದರು.

ಅವರೇ ಮುಂದೆ ನನ್ನನ್ನು ಒಬ್ಬ ನಿರ್ದೇಶಕರ ಬಳಿ ಕಳಿಸಿಕೊಟ್ಟರು. ಅಲ್ಲಿ ನಾನು ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಸಾಕಷ್ಟು ಕಲಿತೆ. ದುರಾದೃಷ್ಟ, ಆ ಚಿತ್ರ ರಿಲೀಸ್‌ ಆಗಲೇ ಇಲ್ಲ. ಆ ನಂತರ ಆ ನಿರ್ದೇಶಕರು ಮತ್ತೆ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿಲ್ಲ. ಹೀಗೆ ನಾನು ನಟನೆಗೆ ಮುಂಚೆ ಈ ರೀತಿ ತಾಂತ್ರಿಕ ವರ್ಗದಲ್ಲಿ ನುರಿತವಳಾದೆ.

ನಿನ್ನ 7-8 ವರ್ಷಗಳ ಸಿನಿ ಕೆರಿಯರ್ಬಗ್ಗೆ ಹೇಳು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ