ಶರತ್ ಚಂದ್ರ
ಭಾರತೀಯ ಚಿತ್ರರಂಗದ ಗಾಯನ ಕ್ಷೇತ್ರದಲ್ಲಿ ಅತಿ ಹೆಚ್ಚು ಹಿಟ್ ಹಾಡುಗಳನ್ನು ನೀಡಿದ ಜೋಡಿಗಳಲ್ಲಿ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಜೋಡಿ ಕೂಡ ಒಂದು. ಕನ್ನಡದಲ್ಲಿ ಕೂಡ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಹೆಗ್ಗಳಿಕೆ ಇವರದು.

ಇತ್ತೀಚಿನ ವರ್ಷಗಳಲ್ಲಿ Indian idol ರಿಯಾಲಿಟಿ ಶೋನಲ್ಲಿ ಬ್ಯುಸಿಯಾದ ನಂತರ ಶ್ರೇಯ ಗೋಷಾಲ್, ಕನ್ನಡ ಹಾಡುಗಳನ್ನು ಹಾಡುವುದನ್ನು ಕಡಿಮೆ ಮಾಡಿದ್ದರು. ಈ ಹಿಂದೆ ಅವಕಾಶ ನೀಡಿ ಒಳ್ಳೆಯ ಹಿಟ್ ಸಾಂಗ್ ಹಾಗೂ ಒಳ್ಳೆ ಸಂಭಾವನೆ ನೀಡಿದ ನಿರ್ದೇಶಕರೊಂದಿಗೆ, ಹಾಗೂ ಸಂಗೀತ ನಿರ್ದೇಶಕರ ಜೊತೆ ಕೂಡ ಕೆಲಸ ಮಾಡಲು ಆಕೆ ಒಪ್ಪಿರಲಿಲ್ಲ.

ಸೋನು ನಿಗಮ್ ಕೂಡ ಹೊಸಬರ ಮಧ್ಯೆ ಕನ್ನಡದಲ್ಲಿ ಬೇಡಿಕೆ ಕಳೆದುಕೊಂಡು, ವಿಪರೀತ ಸಂಭಾವನೆ ಡಿಮಾಂಡ್ ಮಾಡುತ್ತಿದ್ದುದರಿಂದ ಈ ಗಾಯಕನಿಂದ ಕನ್ನಡದ ನಿರ್ಮಾಪಕರು ಅಂತರ ಕಾಯ್ದುಕೊಂಡಿದ್ದರು. ಈ ವರ್ಷ ಕಾಲೇಜಿನ ಸಮಾರಂಭವೊಂದರಲ್ಲಿ ಕನ್ನಡಿಗರ ಭಾವನೆಗೆ ದಕ್ಕೆ ಆಗುವಂತೆ ಮಾತಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಕನ್ನಡ ಚಿತ್ರರಂಗ ಇವರನ್ನು ಅಘೋಷಿತ ಬ್ಯಾನ್ ಮಾಡಿತ್ತು.
ಇತ್ತೀಚೆಗೆ ಈ ಹಿಂದೆ ಇಬ್ಬರು ಹಾಡಿರುವ ‘ಪ್ಯಾರ್’ ಚಿತ್ರದ ‘ಒಂದೇ ಮಾತಲ್ಲಿ ಹೇಳೋದಾದರೆ’ ಎಂಬ ಅದ್ಭುತ ಗೀತೆ ಬಿಡುಗಡೆಯಾಗಿದೆ. ಕವಿರಾಜ್ ಬರೆದಿರುವ ಈ ಪ್ರೇಮಗೀತೆಗೆ ಪಳನಿ ಸೇತುಪತಿ ಸಂಗೀತ ನೀಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇರುವ ನಾಯಕನಟಿ ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಸುಂದರವಾಗಿ ಕಾಣುತ್ತಿದ್ದು ನಾಯಕ ಭರತ್ ಜೊತೆ ಕೆಮೆಸ್ಟ್ರಿ ಹಾಡಿನಲ್ಲಿ ಚೆನ್ನಾಗಿ ಕಾಣಿಸುತ್ತಿದೆ.

ಚಿತ್ರದಲ್ಲಿ ತಂದೆಯ ಪಾತ್ರವನ್ನು ವಿ ರವಿಚಂದ್ರನ್ ನಿಭಾಯಿಸುತ್ತಿದ್ದು ಇದೊಂದು ತಂದೆ ಮತ್ತು ಮಗಳ ಬಾಂಧವ್ಯದ ಕುರಿತಾದ ಚಿತ್ರವಾಗಿದೆ. ಎಚ್.ಎಸ್.ನಾಗಶ್ರೀ, ಎಸ್ಎಂ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ‘ಪ್ಯಾರ್’ ಚಿತ್ರಕ್ಕೆ ಸುಪ್ರೀತ್ ಆಕ್ಷನ್ ಕಟ್ ಹೇಳಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿನಿಮಾ ತೆರೆ ಕಾಣಲಿದ





