ಸುಂದರ ಪರಿಸರ
ಮನೆಯ ಪರಿಸರ ಸುಂದರವಾಗಿರಲು
ಮನೆಯ ಮುಂದೆ ಹೂವಿನ ಗಿಡ ಇರಲಿ
ರಂಗು ರಂಗಿನ ಹೂವುಗಳು ಅರಳಿದರೆ
ಮನವು ಸಂತೋಷದಿಂದ ಇರುವುದು
ಮುಂಜಾವಿನಲಿ ರವಿ ಉದಯಿಸಲು
ಹೂವಿನ ಘಮ ಘಮದ ಪರಿಮಳವು
ಮನೆಯಂಗಳದ ತುಂಬಾ ಪಸರಿಸಿರಲು
ಮನೆ ಹೊಸ ಕಳೆಯಿಂದ ಶೋಭಿಸುವುದು
ಗಿಡಗಳ ನೆಡುವ ಪರಿಪಾಠ ನಿಮಗಿರಲಿ
ಗೆಳೆಯರಿಗೂ ಗಿಡವ ನೆಡಲು ಬೋಧಿಸಿ
ಪರಿಸರವ ಕಾಪಾಡಲು ಹೋರಾಡೋಣ
ಮೊದಲು ಅಂಗಳದೊಳಗೆ ಗಿಡ ನೆಡೋಣ
ಸವಿತಾ ರಮೇಶ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





