- ರಾಘವೇಂದ್ರ ಅಡಿಗ ಎಚ್ಚೆನ್.
ಡಿಸೆಂಬರ್ ಒಂಥರಾ ಲಕ್ಕಿ ಮಂಥ್. ಆ ತಿಂಗಳಲ್ಲಿ ಸಿನಿಮಾಗಳು ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ಹಿಟ್ ಗ್ಯಾರಂಟಿ. ಹಾಗಾಗಿಯೇ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವೀಸ್ ಎಲ್ಲಾ ಡಿಸೆಂಬರ್ ಮೇಲೆ ಕಣ್ಣು ಹಾಕಿವೆ. ದರ್ಶನ್, ಧ್ರುವ ಸರ್ಜಾ ಹಾಗೂ ದುನಿಯಾ ವಿಜಯ್ ಸಿನಿಮಾಗಳ ರಿಲೀಸ್ ಅಪ್ಡೇಟ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
ಡಿಬಾಸ್ ದರ್ಶನ್ ಅಭಿನಯದ ಡೆವಿಲ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಹಾಗೂ ದುನಿಯಾ ವಿಜಯ್ ಮುಖ್ಯಭೂಮಿಕೆಯ ಲ್ಯಾಂಡ್‌ಲಾರ್ಡ್..ಇವೆಲ್ಲಾ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವೀಸ್. ಅದರಲ್ಲೂ ಮಾಸ್ ಇಮೇಜ್ ಇರೋ ಆ್ಯಕ್ಷನ್ ಹೀರೋಗಳ ಹೈ-ವೋಲ್ಟೇಜ್ ಸಿನಿಮಾಗಳು ಆದ್ದರಿಂದ ಸಹಜವಾಗಿಯೇ ಇವುಗಳ ಮೇಲೆ ಕುತೂಹಲ ಡಬಲ್ ಆಗಿದೆ.ಹತ್ತು ಹಲವು ಕಾರಣಗಳಿಗೆ ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಅನಿಸಿಕೊಂಡಿವೆ. ಅದರಲ್ಲೂ ಎರಡು ರೆಟ್ರೋ ಚಿತ್ರಗಳಾದ್ರೆ, ಒಂದು ಪಕ್ಕಾ ಮೆಟ್ರೋ ಪ್ಯಾಟ್ರನ್ ಸಿನಿಮಾ. ಹೌದು..
ಕೆಡಿ ಸಿನಿಮಾನ ಜೋಗಿ ಪ್ರೇಮ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಇಡೀ ಇಂಡಿಯಾದಲ್ಲಿರೋ ಸ್ಟಾರ್ಸ್‌ನ ಒಗ್ಗೂಡಿಸಿಕೊಂಡು ಸಿನಿಮಾ ಮಾಡಿದ್ದಾರೆ. ಧ್ರುವ ಸರ್ಜಾಗೆ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಹಾಗೂ ರಮೇಶ್ ಅರವಿಂದ್ ಸಾಥ್ ನೀಡಿದ್ದಾರೆ. ಕೆಡಿ ಸಾಂಗ್ಸ್ ಸಖತ್ ಹಂಗಾಮ ಮಾಡ್ತಿದ್ದು, ರಿಲೀಸ್ ಯಾವಾಗ ಅಂತ ಚಿತ್ರಪ್ರೇಮಿಗಳು ಎದುರು ನೋಡ್ತಿದ್ದಾರೆ.