• ರಾಘವೇಂದ್ರ ಅಡಿಗ ಎಚ್ಚೆನ್.

ರಾಘವೇಂದ್ರ ಅಡಿಗ ಎಚ್ಚೆನ್.ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯೂ ನಾನೇ ನಿರೂಪಣೆ ಮಾಡಲಿದ್ದೇನೆ ಎಂದಿರುವ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಗೆ ಹೋಗುವವರು ಉದ್ರೇಕಿತರಂತೆ ವರ್ತಿಸುವುದು, ಹುಚ್ಚಾಟ ನಡೆಸುವುದು ಸಾಮಾನ್ಯ ಏಕೆಂದರೆ ಶೋ ನಡೆಸಿಕೊಡುತ್ತಿರುವವವೇ ಹುಚ್ಚ (ಸುದೀಪ್) ಹಾಗಾಗಿ ಬಿಗ್ಬಾಸ್ ಮನೆ ಹುಚ್ಚರ ಸಂತೆ, ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಕಿಚ್ಚ ಸುದೀಪ್ ಅವರು ಬರೀ 12ನೇ ಸೀಸನ್ ಮಾತ್ರವಲ್ಲದೇ ಇನ್ನೂ ಸೀಸನ್ 15ರವರೆಗೂ ಅವರೇ ಹೋಸ್ಟ್ ಮಾಡಲಿದ್ದಾರೆ ಎಂದು ಬಿಗ್ಬಾಸ್ ತಂಡ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಸದ್ಯ ಇದೇ ವಿಚಾರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.
ಬಿಗ್ ಬಾಸ್ ಬಗ್ಗೆ ಸುದೀಪ್ಗೆ ಇದ್ದ ಅಸಮಾಧಾನ ಏನು?
11ನೇ ಸೀಸನ್ ಬಳಿಕ ತಾವು ಬಿಗ್ ಬಾಸ್ ಕನ್ನಡ ಶೋ ನಿರೂಪಣೆ ಮಾಡಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಆದರೆ ಈಗ ಅವರು ಮತ್ತೆ ಮನಸ್ಸು ಬದಲಾಯಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಈ ಮೊದಲು ಅವರು ಶೋನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸರಿಯಾದ ಮನ್ನಣೆ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ ತಾವು ನಿರೂಪಣೆ ನಿಲ್ಲಿಸಲು ತೀರ್ಮಾನಿಸಿದ್ದಾಗಿ ಅವರು ಹೇಳಿದ್ದಾರೆ.

ಮನೆ ಬಾಡಿಗೆ ಏರಿದಂತೆ..’; ಬಿಗ್ ಬಾಸ್ ಸಂಭಾವನೆ
‘ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್ಕ್ರಿಮೆಂಟ್ ಇರುತ್ತೆ. ನಾನು ಲೀಸ್ಗೂ ಅಲ್ಲ, ರೆಂಟ್ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ’ ಎಂದು ಸುದೀಪ್ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಪ್ರಶ್ನೆಗೆ ಸುದೀಪ್ ಈ ಮೇಲ್ಕಂಡ ರೀತಿಯಲ್ಲಿ ಉತ್ತರಿಸಿದ್ದಾರೆ., ‘ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ಲ. ಅದು ಪಬ್ಲಿಕ್ನಲ್ಲಿ ಮಾತನಾಡುವ ವಿಚಾರ ಅಲ್ಲ. ಹಣ ಅನ್ನೋದು ಲಾಸ್ಟ್. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿದಲ್ಲ. ಏಕೆಂದರೆ ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಇರುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
ಈ ವೇಳೆ ಈ ಬಾರಿಯ ಸೀಸನ್ನಲ್ಲಿ ಜನಸಾಮಾನ್ಯರು ಇರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗಿದೆ. ಕೆಲವು ಸೀಸನ್ಗಳಲ್ಲಿ ಜನ ಸಾಮಾನ್ಯರಿಗೆ ಅವಕಾಶ ನೀಡಲಾಗಿತ್ತು. ಶೀಘ್ರದಲ್ಲೇ ರಿಲೀಸ್ ಆಗೋ ಪ್ರೋಮೋದಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆಯಂತೆ. ಪ್ರೋಮೋನ ಅದ್ದೂರಿಯಾಗಿ ಶೂಟ್ ಮಾಡಲು ನಿರ್ಧರಿಸಲಾಗಿದೆ.
ಕುಳಿತುಕೊಂಡು ಯಾಕೆ ಬಿಗ್ ಬಾಸ್ ನಡೆಸಿಕೊಡಬಾರದು?
ಕಿಚ್ಚ ಸುದೀಪ್ ಗಂಟೆಗಟ್ಟಲೆ ನಿಂತುಕೊಂಡೇ ‘ಬಿಗ್ ಬಾಸ್ ಕನ್ನಡ’ ಶೋ ನಡೆಸಿಕೊಡುತ್ತಾರೆ. ಹಾಗಿದ್ದರೆ ಅವರು ಏಕೆ ಕುಳಿತುಕೊಳ್ಳಬಾರದು ಎಂದರೆ ‘ಕುಳಿತುಕೊಂಡು ಶೋ ನಡೆಸಿಕೊಟ್ಟರೆ ನಿರೂಪಕನ ವ್ಯಕ್ತಿತ್ವ ಬಿದ್ದು ಹೋಗುತ್ತದೆ. ನಾನು ಬೇಕಿದ್ದರೆ 2 ಸಂಚಿಕೆ ಕುಳಿತುಕೊಂಡು ಮಾಡುತ್ತೇನೆ. ಆಮೇಲೆ ದಯವಿಟ್ಟು ಬೇಡ ಅಂತ ನೀವೇ ಹೇಳುತ್ತೀರಿ’ ಎಂದಿದ್ದಾರೆ ಕಿಚ್ಚ ಸುದೀಪ್.
ನಾನು ಯಾವುದೇ ಕಂಡೀಶನ್ನ್ನು ಹಾಕಿಲ್ಲ
ಎಲ್ಲರೂ ಒಂದೇ ಥರ ಆಲೋಚಿಸುವವರನ್ನು ಹಾಕಿಕೊಂಡು ಬಿಗ್‌ ಬಾಸ್‌ ನಡೆಸುವುದಕ್ಕೆ ಆಗುತ್ತಾ? ಬಿಗ್‌ ಬಾಸ್‌ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಎಂಥವರನ್ನು ಒಳಗೆ ಕಳುಹಿಸುತ್ತೇವೆ ಎಂಬ ಕ್ಲಾರಿಟಿ ಇರಬೇಕು. ಜೊತೆಗೆ ಸಿಬ್ಬಂದಿಗಳಿಗೆ ಅಂತಹವರನ್ನು ಬಿಗ್‌ಬಾಸ್‌ಗೆ ಯಾಕೆ ಕಳುಹಿಸುತ್ತೇವೆ ಎಂಬುದು ಗೊತ್ತಿದೆ. ನನಗೆ ಅದರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಜೊತೆಗೆ ನಾನು ಯಾವುದೇ ಕಂಡೀಶನ್‌ನ್ನು ಹಾಕಿಲ್ಲ”
“ಬರಿ ಕಂಟ್ರೋಲ್ ಮಾಡೋದೇ ನನ್ನ ಕೆಲಸ ಆಗ್ಬಾರ್ದು. ಬಿಗ್ ಬಾಸ್ ಒಳಗೆ ಬರೋದೇ ಬುದ್ದಿವಂತರು ಹಾಗು ಅತೀ ಬುದ್ದಿವಂತರು. ವಿವಾದಿತ ಸ್ಪರ್ಧಿಗಳು ಬಂದರೂ ನಾನು ಹ್ಯಾಂಡಲ್ ಮಾಡ್ತೀನಿ. ಅಂದಹಾಗೆ ನಾನು ಮತ್ತೆ ಬಂದಿದ್ದು ಸುಷ್ಮಾ ಅವರಿಗೋಸ್ಕರ” ಎಂದು ಸ್ಪಷ್ಟವಾಗಿ ಕಿಚ್ಚ ಹೇಳಿಕೆ ನೀಡಿದ್ದಾರೆ.
ಬಾರಿ ಬಿಗ್ಬಾಸ್ನಲ್ಲಿ ವಿವಾದಿತರಿಗೆ ಎಂಟ್ರಿ ಇದೆಯಾ?
ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್‌ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದು ಹೇಳಲಾಗಿದೆ.
IPLನಷ್ಠೇ ಜನ ಬಿಗ್ಬಾಸ್ ಇಷ್ಟ ಪಡ್ತಾರೆ. ನೋಡ್ತಾರೆ
IPLನಷ್ಠೇ ಜನ ಬಿಗ್‌ಬಾಸ್‌ನ ಇಷ್ಟ ಪಡ್ತಾರೆ. ನೋಡ್ತಾರೆ. ಅಲ್ಲದೆ ಬಿಗ್‌ಬಾಸ್ ತುಂಬಾ ಜನಕ್ಕೆ ಕರಿಯರ್ ಕಟ್ಟಿಕೊಟ್ಟಿದೆ. ವ್ಯಕ್ತಿತ್ವಗಳ ಜೊತೆ ಬದುಕು ರೂಪಿಸಿದೆ. ನನ್ನ ಚೈತನ್ಯ ಎಂದೂ ಕುಗ್ಗಿಲ್ಲ. ನನಗೆ ವೈಯಕ್ತಿಕವಾಗಿ ಕಂಟೆಸ್ಟೆಂಟ್ಸ್‌‌ನ ಕಂಟ್ರೋಲ್ ಮಾಡೋದು ಒತ್ತಡ ಆಗಬಾರದು. ವಿವಾದಿತರನ್ನ ಕರೆಯಬಾರದು ಅಂತ ಹೇಳಿಲ್ಲ. ಆದ್ರೆ ಅವರೇ ಯಾಕೆ ಅನ್ನೋ ಕ್ಲಾರಿಟಿ ಇರಬೇಕು. ಕೆಲವೊಂದು ಐಡಿಯಾಗಳನ್ನ ಇನ್ ಕಾರ್ಪೊರೇಟ್ ಆಗಿರಲಿಲ್ಲ. ಈಗ ಇನ್ ಕಾರ್ಪೋರೇಟ್ ಆಗಿವೆ. ಹಾಗಾಗಿ ನಾನು ಮತ್ತೆ ಈ ಶೋ ನಿರೂಪಕನಾಗಿ ವಾಪಾಸ್ ಬಂದಿದ್ದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ.
ನನ್ನ ಜಾಗಕ್ಕೆ ಯಾರೇ ಬಂದ್ರು ಖುಷಿ
ಅಂದು ನಾನು ಮಾಡಿದ್ದ ಟ್ವೀಟ್‌ ಕೇವಲ ನನ್ನ ಅಭಿಪ್ರಾಯವಷ್ಟೇ, ಹೊರತಾಗಿ ಬೆದರಿಕೆಯಲ್ಲ, ಎಚ್ಚರಿಕೆಯಲ್ಲ. ಬೇರೊಬ್ಬರು ಬಂದು ಬಿಗ್‌ ಬಾಸ್‌ ನಡೆಸಿಕೊಟ್ಟರೆ ಖುಷಿಯಿಂದ ನಮ್ಮವರೇ ನಡೆಸಿಕೊಡುತ್ತಾರೆ ಅಂತ ನೋಡುತ್ತಿದ್ದೆ. ನಾನು ಬಿಗ್ ಬಾಸ್‌ನ ಮಿಸ್ ಮಾಡ್ಕೋತಿರ್ಲಿಲ್ಲ.
ಇನ್‌ಸೆಕ್ಯೂರಿಟಿ ಅಲ್ಲಿ ಜೀವನ ನಡೆಸಿಲ್ಲ ನಾನು. ನನ್ನ ಜಾಗಕ್ಕೆ ಯಾರೇ ಬಂದ್ರು ಖುಷಿ ಇದೆ”
ಬಿಗ್‌ ಬಾಸ್‌ ಯಾವಾಗ ಶುರುವಾಗುತ್ತೆ ಎಂಬುದರ ಬಗ್ಗೆಯೂ ಸ್ಪಷ್ಟನೆ ಕೊಟ್ಟ ತಂಡ, “ಡೇಟ್ ಯಾವಾಗ ಎಂಬುದನ್ನು ನಾವೇ ಅನೌನ್ಸ್‌ ಮಾಡುತ್ತೆವೆ. ಇನ್ನೂ ಅದರ ಬಗ್ಗೆ ಸ್ಪಷ್ಟನೆ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ