ಜಾಗೀರ್ದಾರ್*

ಬೆಂಗಳೂರಿನ ಮಾಗ್ರತ್‌ ರಸ್ತೆಯಲ್ಲಿನ ಗರುಡಾ ಮಾಲ್‌ನಲ್ಲಿ ಹೊಸ ಲಕ್ಸುರಿ ಬ್ಯೂಟಿ ಮತ್ತು ವೆಲ್‌ನೆಸ್‌ ಡೆಸ್ಟಿನೇಷನ್‌ NAASH ಸ್ಟುಡಿಯೋ, ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಸುಧಾರಾಣಿ ರಿಬ್ಬನ್‌ ಕಟ್ ಮಾಡುವ ಮೂಲಕ ಗ್ರ್ಯಾಂಡ್‌ ಲಾಂಚ್‌ಗೆ ಸಾಕ್ಷಿಯಾದರು.

ಉದ್ಘಾಟನೆ ಬಳಿಕ ಮಾತನಾಡಿದ ಸುಧಾರಾಣಿ, “NAASH ಉದ್ಘಾಟನೆ ಮಾಡುವುದು ನನಗೆ ಸಂತೋಷ ತಂದಿದೆ. ನಿಜವಾದ ಸೌಂದರ್ಯ ಸಂಪೂರ್ಣ ಸ್ವಯಂ ಆರೈಕೆಯಿಂದ ಬರುತ್ತದೆ ಎಂಬುದನ್ನು ಈ ಬ್ರ್ಯಾಂಡ್ ಅರಿತಿರುವುದು ಶ್ಲಾಘನೀಯ. ವಿಕ್ರಮ್ ಮತ್ತು ವಿವಾನ್ ಹಾಗೂ ಸಂಪೂರ್ಣ NAASH ತಂಡಕ್ಕೆ ನನ್ನ ಶುಭ ಹಾರೈಕೆಗಳು”

sudha

*ನ್ಯಾಶ್‌ನಲ್ಲಿ ಸಿಗುವ ಸೇವೆಗಳ*

ನೇಲ್ಸ್: ಸಿಗ್ನೇಚರ್ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್

ಲ್ಯಾಶಸ್: ತಜ್ಞರ ಲ್ಯಾಶ್ ಎಕ್ಸ್ಟೆನ್ಶನ್ ಹಾಗೂ ಎನ್ಹಾನ್ಸ್‌ಮೆಂಟ್‌ಗಳು

ಸ್ಕಿನ್: ಅಡ್ವಾನ್ಸ್‌ ಹೈಡ್ರಾ ಫೇಷಿಯಲ್‌ ಟ್ರೀಟ್‌ಮೆಂಟ್‌ಗಳು

ಹೇರ್ & ವಿಶ್ರಾಂತಿ: ಲಕ್ಸುರಿಯಸ್ ಹೇರ್‌ ವಾಶ್‌ ಹಾಗೂ ಹೆಡ್ ಮಸಾಜ್

*NAASH ಸಂಸ್ಥಾಪಕರ ಹೇಳಿಕೆ*

NAASH ಸಂಸ್ಥಾಪಕರಾದ ವಿಕ್ರಮ್ ಮತ್ತು ವಿವಾನ್ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “NAASH, ನಮ್ಮ ಪರಿಪೂರ್ಣತೆಯ ಪೈಪೋಟಿ ಮತ್ತು ಗ್ರಾಹಕರಿಗೆ ಎಲ್ಲಾ ಸೌಂದರ್ಯ ಸೇವೆಗಳು ಒಂದೇ ಜಾಗದಲ್ಲಿ ಸಿಗುವ ತಾಣವನ್ನು ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದೆ. ಉತ್ತಮ ತಂತ್ರಜ್ಞಾನ ಹಾಗೂ ತರಬೇತಿ ಪಡೆದ ತಜ್ಞರಲ್ಲಿ ನಾವು ಹೂಡಿಕೆ ಮಾಡಿದ್ದೇವೆ. ಶೀಘ್ರ ಮ್ಯಾನಿಕ್ಯೂರ್ ಆಗಿರಲಿ ಅಥವಾ ವಿಶ್ರಾಂತಿ ನೀಡುವ ಹೈಡ್ರಾ ಫೇಷಿಯಲ್ ಆಗಿರಲಿ – ಪ್ರತಿಯೊಂದು ಸೇವೆಯೂ ಗ್ರಾಹಕರ ನಿರೀಕ್ಷೆಗಳನ್ನು ಮೀರುವಂತಿವೆ ಎಂದರು.

*NAASH ಬಗ್ಗೆ*

NAASH, ಸಂಪೂರ್ಣ ಲಕ್ಸುರಿ ಬ್ಯೂಟಿ ಸ್ಟುಡಿಯೋ ಆಗಿದ್ದು, ನೇಲ್ಸ್, ಲ್ಯಾಶಸ್, ಹೈಡ್ರಾ ಫೇಷಿಯಲ್, ಪೆಡಿಕ್ಯೂರ್, ಮ್ಯಾನಿಕ್ಯೂರ್ ಹಾಗೂ ಹೇರ್‌ವಾಶ್ ವಿತ್ ಮಸಾಜ್ ಸೇರಿದಂತೆ ವಿಶೇಷ ಸೇವೆಗಳನ್ನು ಒದಗಿಸುತ್ತದೆ. ಇಂಡೋನೇಷಿಯನ್ ಪ್ರೀಮಿಯಂ ಉತ್ಪನ್ನಗಳು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಪ್ರತಿಯೊಬ್ಬ ಗ್ರಾಹಕರಿಗೂ ಸಂಪೂರ್ಣ ಹಾಗೂ ಆನಂದದ ಅನುಭವವನ್ನು ನೀಡುವುದೇ ಇದರ ಉದ್ದೇಶ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ