ನಟ ರಾಜ್‌ ಬಿ.ಶೆಟ್ಟಿ ನಿರ್ಮಾಣದ "ಸು ಫ್ರಂ ಸೋ" ಸಿನಿಮಾ ಪ್ರೇಕ್ಷಕರ ಮನಗೆದ್ದು ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಜನ ಫಿದಾ ಆಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಸದ್ಯ ಈ ಸಿನಿಮಾ ಧೂಳೆಬ್ಬಿಸಿದ್ದು, ಗೆಳೆಯನ ಸಿನಿಮಾ ಗೆದ್ದಿದ್ದಕ್ಕೆ ನಟ ರಿಷಬ್‌ ಶೆಟ್ಟಿ ಸಂತಸಪಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪತ್ರದ ಮೂಲಕ ಚಿತ್ರತಂಡದ ಬೆನ್ನುತಟ್ಟಿದ್ದಾರೆ.

ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ "SuFromSo" ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು! ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿ ನೀಡಿದೆ. ಈ ಸಿನಿಮಾ ರಚಿಸಿ, ನಿರ್ದೇಶಿಸಿದ ಜೆಪಿ ತುಮಿನಾಡ್‌ ಅವರಿಗೆ ಚಿತ್ರರಂಗಕ್ಕೆ ಸ್ವಾಗತ. ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್‌ ಬಿ ಶೆಟ್ಟಿ, ರವಿ ರೈ ಮತ್ತು ಶಶಿಧರ್‌ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಉತ್ತಮ ಚಿತ್ರಗಳು ಹೊರಬರುತ್ತಿವೆ ಎಂದಿದ್ದಾರೆ ರಿಷಬ್ ಶೆಟ್ಟಿ.ನಟರಾದ ಶನಿಲ್‌ ಗೌತಮ್‌, ಜೆಪಿ ತುಮಿನಾಡ್‌, ಸಂಧ್ಯಾ ಅರಕೆರೆ, ಪ್ರಕಾಶ್‌ ತುಮಿನಾಡ್‌, ದೀಪಕ್‌ ರೈ ಪನಾಜೆ, ಪುಷ್ಪರಾಜ್‌ ಬೋಳಾರ್‌, ಮೈಮ್‌ ರಾಮದಾಸ್‌ ಸೇರಿದಂತೆ ಪ್ರತಿಯೊಬ್ಬ ಕಲಾವಿದರ ಅಭಿನಯ ಗಮನ ಸೆಳೆಯುತ್ತಿದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ನೀಡಿದ ಇಡೀ ಸುಫ್ರಂಸೋ ತಂಡಕ್ಕೆ ನನ್ನ ಅಭಿನಂದನೆಗಳು ಎಂದಿದ್ದಾರೆ.

ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ಈ ಸಿನಿಮಾದಲ್ಲೂ ಇರುವುದು ಹಳೆಯ ನೆನೆಪುಗಳನ್ನು ಮರುಕಳಿಸುವಂತೆ ಮಾಡಿತು. ನಿಮ್ಮ ಈ ಪ್ರಯತ್ನಕ್ಕೆ ಇನ್ನಷ್ಟು ದೊಡ್ಡ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಿಮ್ಮ ಬೆಂಬಲ ಹೀಗೇ ಇರಲಿ ಎಂದು ರಿಷಬ್‌ ಶೆಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ