ಶರತ್ ಚಂದ್ರ
ಭಾರತ ಚಿತ್ರರಂಗದ ಅತೀ ದೊಡ್ಡ ಬಹು ನಿರೀಕ್ಷಿತ ಚಿತ್ರ ಕಾಂತರ ಚಾಪ್ಟರ್ 1 ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಎಲ್ಲಾ ಭಾಷೆಯ ಟ್ರೈಲರ್ ಇಂದು ಬಿಡುಗಡೆಯಾಗಲಿದೆ.
ವಿಶೇಷವೆಂದರೆ ಚಿತ್ರದ ಟ್ರೈಲರ್ ನ್ನು ಹೊಂಬಾಳೆ ಸಂಸ್ಥೆಯೊಂದಿಗೆ ಈ ಹಿಂದೆ ಅಸೋಸಿಯೇಟ್ ಆಗಿರುವಂತಹ ನಟರುಗಳು ಹಾಗೂ ಇನ್ನು ಮುಂದೆ ಈ ಸಂಸ್ಥೆಯ ಚಿತ್ರಗಳಲ್ಲಿ ನಟಿಸಲಿರುವ ಬಿಡುಗಡೆ ಮಾಡುತ್ತಿರುವುದು.
ಕನ್ನಡದಲ್ಲಿ ಮಾತ್ರ ಯಾವುದೇ ಹೀರೋ ಕೈಲಿ ಬಿಡುಗಡೆ ಮಾಡಿಸದೇ ‘ಕನ್ನಡ ಜನತೆ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿ ಪ್ರೇಕ್ಷಕರಿಗೆ ವಿಶೇಷ ಗೌರವ ನೀಡಲಾಗಿದೆ.
ತೆಲುಗು ಚಿತ್ರದ ಟ್ರೈಲರ್ ನ್ನು ಹೊಂಬಾಳೆ ಸಂಸ್ಥೆ ಗೆ ಸಲಾರ್ ಚಿತ್ರದ ಮೂಲಕ ಸೂಪರ್ ಹಿಟ್ ಕೊಟ್ಟು ಅದರ ಸೀಕ್ವೆಲ್ ನಲ್ಲಿ ಕೂಡ ನಟಿಸಿರುವ ಡಾರ್ಲಿಂಗ್ ಪ್ರಭಾಸ್ ಬಿಡುಗಡೆ ಮಾಡುತ್ತಿದ್ದಾರೆ.
ಮಲಯಾಳಂ ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಲಿರುವ ಪ್ರಥ್ವಿರಾಜ್ ಸುಕುಮಾರ್ ಕೂಡ ಈ ಹಿಂದೆ ಹೊಂಬಾಳೆ ಸಂಸ್ಥೆಯ ಕೆ. ಜಿ. ಎಫ್ ಚಿತ್ರವನ್ನು ಕೇರಳದಲ್ಲಿ ಪ್ರೆಸೆಂಟ್ ಮಾಡಿದ್ದರು. ಸಲಾರ್ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ಕೂಡ ನಿಭಾಯಿಸಿದ್ದ ಪ್ರಥ್ವಿರಾಜ್ ಕನ್ನಡದ 777 ಚಾರ್ಲಿ ಚಿತ್ರವನ್ನು ಕೂಡ ಮಲಯಾಳಂ ಜನತೆಗೆ ತಲುಪಿಸಿದ್ದರು.ಒಟ್ಟಿನಲ್ಲಿ ಕನ್ನಡ ಚಿತ್ರರಂಗದೊಂದಿಗೆ ಅವರ ಬಾಂದವ್ಯ ಮುಂದುವರಿದಿದೆ.
ಕೆಲವು ತಿಂಗಳುಗಳ ಹಿಂದೆ ಹೃತಿಕ್ ರೋಷನ್ ಹೊಂಬಾಳೆ ಸಂಸ್ಥೆಯ ಹೊಸ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಕನ್ಫರ್ಮ್ ಆಗಿತ್ತು.ಹೊಂಬಾಳೆ ಫಿಲ್ಮ್ ಸಂಸ್ಥೆಯೊಂದಿಗೆ ಹೊಸದಾಗಿ ಕೈ ಜೋಡಿಸಿರುವ ಹೃತಿಕ್ ರೋಷನ್ ಹಿಂದಿ ಟ್ರೈಲರ್ ಅನಾವರಣ ಮಾಡಲಿದ್ದಾರೆ.
ಇತ್ತೀಚಿಗೆ ಮದರಾಸಿ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ತಮಿಳಿನ ಸೂಪರ್ ಸ್ಟಾರ್ ಶಿವ ಕಾರ್ತಿಕೇಯನ್ ಕೂಡ ಹೊಂಬಾಳೆ ಸಂಸ್ಥೆ ಯ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಇದೇ ಉದ್ದೇಶದಿಂದ ತಮಿಳು ಟ್ರೈಲರ್ ನ್ನು ಇವರಿಂದ ಬಿಡುಗಡೆ ಮಾಡಿಸಲಾಗುವುದು.
ಕನ್ನಡದ ಟ್ರೈಲರ್ ನ್ನು ಹೊಂಬಾಳೆ ಸಂಸ್ಥೆಯ ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ ಅಥವಾ ಯಶ್ ಕೈಯಲ್ಲಿ ಮಾಡಿಸಬಹುದಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಬಹುಶ ಬಿಡುಗಡೆಯ ಮುಂಚೆ ಅದ್ದೂರಿಯಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಒಂದಷ್ಟು ತಾರೆಗಳು ಜಗಮಗಿಸಬಹುದೇನೋ
ಟೈಲರ್ ಬಿಡುಗಡೆ ಒಂದು ನೆಪ ಮಾತ್ರ ಜನ ಕಾಯುತ್ತಾ ಇರುವುದು ಡಿವೈನ್ ಸಿನಿಮಾದ ಮಾಂತ್ರಿಕತೆ ಯ ರೋಚಕ ಅನುಭವಕ್ಕಾಗಿ.ಟ್ರೈಲರ್ ಗಿಂತ ಹೆಚ್ಚಾಗಿ ಸಿನಿ ಪ್ರೇಕ್ಷಕರು ಬುಕ್ ಮೈ ಶೋನ ಗೇಟ್ ಯಾವಾಗ ಓಪನ್ ಆಗುತ್ತೆ ಎಂದು ಕಾಯುತ್ತಿದ್ದಾರೆ.
ಅಕ್ಟೋಬರ್ ತಿಂಗಳ ಒಂದನೇ ತಾರೀಕಿನಂದು 2000 ಕ್ಕೂ ಹೆಚ್ಚಿನ ಚಿತ್ರಮಂದಿರ ದಲ್ಲಿ ಪೈಡ್ ಪ್ರೀಮಿಯರ್ ಗೆ ಚಿತ್ರಮಂದಿರಗಳು ಸಜ್ಜಾಗಿವೆ.ಬಹುಷಃ ಈ ಬಾರಿ ಕನ್ನಡ ಚಿತ್ರರಂಗ ದ ದಸರಾ ಉತ್ಸವ ಮತ್ತು ಉತ್ಸಾಹ ಈ ಹಿಂದೆಂದಿಗಿಂತಲೂ ದುಪ್ಪಟ್ಟು ಆಗಲಿದೆ.