ಸ್ಟಾರ್‌ ನಿರ್ದೇಶಕ ಮಣಿರತ್ನಂ ಹಾಗೂ ಕಮಲ್‌ ಹಾಸನ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ ʻಥಗ್‌ ಲೈಫ್‌ʼ ಸಿನಿಮಾ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಹೀಗಾಗಿ ನಿರ್ದೇಶಕ ಮಣಿರತ್ನಂ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಕಾಲಿವುಡ್‌ ನಟ ಕಮಲ್‌ ಹಾಸನ್‌ ಹಾಗೂ ಸ್ಟಾರ್‌ ನಿರ್ದೇಶಕ ಮಣಿರತ್ನಂ ಅವರು ಸುಮಾರು 37 ವರ್ಷಗಳ ನಂತರ ʻಥಗ್‌ ಲೈಫ್‌ʼ ಪ್ಯಾನ್‌ ಇಂಡಿಯಾ ಆಕ್ಷನ್‌ ಸಿನಿಮಾಗಾಗಿ ಒಂದಾಗಿದ್ದರು. ʻನಾಯಗನ್‌ʼ ಸಿನಿಮಾದ ದೊಡ್ಡ ಸಕ್ಸಸ್‌ ನಂತರ ಅಭಿಮಾನಿಗಳು ಈ ಜೋಡಿಯಿಂದ ಮತ್ತೊಂದು ಉತ್ತಮ ಸಿನಿಮಾವನ್ನು ನಿರೀಕ್ಷಿಸಿದ್ದರು. ಆದರೆ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ʻಥಗ್‌ ಲೈಫ್‌ʼ ಸಿನಿಮಾ ವಿಫಲವಾಗಿದೆ. ಈ ಬಗ್ಗೆ ನಿರ್ದೇಶಕ ಮಣಿರತ್ನಂ ರಿಯಾಕ್ಟ್‌ ಮಾಡಿದ್ದಾರೆ.ʻನಮ್ಮನ್ನು ಕ್ಷಮಿಸಿ..!ʼ
ʻಥಗ್‌ ಲೈಫ್‌ʼ ಸಿನಿಮಾದ ವೈಫಲ್ಯಕ್ಕೆ ನಿರ್ದೇಶಕ ಮಣಿರತ್ನಂ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. "ನಮ್ಮಿಬ್ಬರಿಂದ ಮತ್ತೊಂದು ʻನಾಯಗನ್‌ʼ ಸಿನಿಮಾವನ್ನು ನಿರೀಕ್ಷಿಸುತ್ತಿದ್ದವರಿಗೆ ಕ್ಷಮಿಸಿ ಎಂದಷ್ಟೇ ನಾನು ಹೇಳಬಲ್ಲೆ. ನಾವು ಎಂದಿಗೂ ಹಿಂತಿರುಗುವ ಉದ್ದೇಶ ಹೊಂದಿರಲಿಲ್ಲ. ನಾವು ಸಂಪೂರ್ಣವಾಗಿ ವಿಭಿನ್ನವಾದುದ್ದನ್ನು ಮಾಡಲು ಬಯಸಿದ್ದೆವು. ಅತಿಯಾದ ನಿರೀಕ್ಷೆಗಿಂತಲೂ ಹೆಚ್ಚಾಗಿ, ಅದು ಮತ್ತೊಂದು ಹೊಸ ನಿರೀಕ್ಷೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ಪ್ರೇಕ್ಷಕರು ನಾವು ನೀಡಿದ ಪ್ರದರ್ಶನಕ್ಕಿಂತ ಬಹಳ ಭಿನ್ನವಾದದ್ದನ್ನು ನಿರೀಕ್ಷಿಸಿದ್ದರು” ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಣಿರತ್ನಂ ವಿಷಾದ ವ್ಯಕ್ತಪಡಿಸಿದ್ದಾರೆ.
ʻಥಗ್‌ ಲೈಫ್‌ʼ ಕಲೆಕ್ಷನ್
ಕಮಲ್‌ ಹಾಸನ್‌ ನಟನೆಯ ʻಥಗ್‌ ಲೈಫ್‌ʼ ಸಿನಿಮಾ ಜೂನ್‌ 5 ರಂದು ಬಿಡುಗಡೆಯಾಗಿತ್ತು. ʻಥಗ್‌ ಲೈಫ್‌ʼ ಮೂಲಕ ಮತ್ತೊಂದು ಶ್ರೇಷ್ಠ ಚಿತ್ರವನ್ನು ನೋಡಲು ಸಿನಿಪ್ರಿಯರು ಬಯಸಿದ್ದರು. ಆದರೆ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿತು. ಚಿತ್ರದ ಕಳಪೆ ಕಥೆ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಬಿಡುಗಡೆಯಾದ ಎರಡು ವಾರಗಳಲ್ಲಿ 60 ಕೋಟಿ ರೂಪಾಯಿಗಳಿಗಿಂತ ಕಡಿಮೆ ಕಲೆಕ್ಷನ್‌ ಮಾಡಿದೆ. ಹೀಗಾಗಿ ಅಭಿಮಾನಿಗಳಲ್ಲಿ ನಿರ್ದೇಶಕ ಮಣಿರತ್ನಂ ಅವರು ಕ್ಷಮೆ ಕೇಳಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಕಮಲ್‌ ಹಾಸನ್‌ ಅವರೊಂದಿಗೆ ಮತ್ತೆ ಕೆಲಸ ಮಾಡುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಕೆಂಗಣ್ಣು
ಇನ್ನೂ ʻಥಗ್‌ ಲೈಫ್‌ʼ ಈವೆಂಟ್‌ನಲ್ಲಿ ʻತಮಿಳಿನಿಂದ ಕನ್ನಡ ಹುಟ್ಟಿತುʼ ಎಂಬ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಕಮಲ್‌ ಹಾಸನ್‌ ಗುರಿಯಾಗಿದ್ದರು. ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಕಮಲ್‌ ಹಾಸನ್‌ ಅವರು ಕನ್ನಡಿಗರಿಗೆ ಕ್ಷಮೆ ಕೇಳಬೇಕು ಎಂದು ಹೇಳಿದ್ದರು, ಅವರು ಕ್ಷಮೆ ಕೇಳಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ