ಉಪ್ಪಿ-2ಗೆ ಡರ್ಟಿ ಹುಡ್ಗೀನಾ....?

`ಡರ್ಟಿ ಪಿಕ್ಚರ್‌' ಮತ್ತು `ಕಹಾನಿ' ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಸ್ಥಾನ ಸೃಷ್ಟಿಸಿಕೊಂಡು ಖಾನ್‌ತ್ರಯರಿಗೂ ಸೆಡ್ಡುಹೊಡೆದ ಮಲೆಯಾಳಿ ಕುಟ್ಟಿ ವಿದ್ಯಾ ಬಾಲನ್‌ `ಉಪ್ಪಿ-2' ತಿನ್ನಲು ಸ್ಯಾಂಡಲ್ ವುಡ್‌ಗೆ ಬರುತ್ತಿದ್ದಾರಾ....? ಹಾಗೊಂದು ಸುದ್ದಿ `ಉಪ್ಪಿ-2'ಗಿಂತ ಹಸಿಬಿಸಿಯಾಗಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ರಿಯಲ್ ಸ್ಟಾರ್‌ ಉಪ್ಪಿ ಈಗಾಗಲೇ ತಮ್ಮ ಚಿತ್ರಕ್ಕೆ ವಿದ್ಯಾ ಬಾಲನ್‌ ಅವರನ್ನು ಕರೆತರಲು ಅವರ ಜೊತೆ ಮಾತುಕತೆ ಮುಗಿಸಿದ್ದಾರೆ. ಪಾತ್ರ ಮತ್ತು ಸಂಭಾವನೆ ಎರಡೂ `ತೂಕ'ದಲ್ಲಿ ಹೆವಿಯಾಗಿದ್ದರೆ ಆಕೆ ಸ್ಯಾಂಡಲ್ ವುಡ್‌ಗೆ ಬರುವುದರಲ್ಲಿ ಸಂಶಯವಿಲ್ಲ. ಆ ಲೆಕ್ಕಕ್ಕೆ ವಿದ್ಯಾ, ಇಲ್ಲಿಗೆ ಬಂದರೆ, ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಆಕೆಯ ತೆರೆಕಾಣಲಿರುವ ಮೊದಲ ಚಿತ್ರ `ಉಪ್ಪಿ-2' ಆಗಲಿದೆ.

ರಮ್ಯಾ ಮರಳಿ ಗೂಡಿಗೆ

Ramya

ರಾಜಕೀಯ ಕೆಸರಾಟದಲ್ಲಿ ಸೋತು ಹೈರಾಣಾಗಿ, ಆ ಕೆಸರನ್ನು ತೊಳೆದುಕೊಳ್ಳಲು ಲಂಡನ್‌ಗೆ ಹಾರಿದ್ದ ಹೈಟೆಕ್‌ ತಾರೆ ರಮ್ಯಾ `ಸಾಕಪ್ಪಾ ಸಾಕು. ಈ ರಾಜಕೀಯದ ಸಹವಾಸವೇ ಬೇಡ. ನನಗೆ ಸಿನಿಮಾನೇ ಸಾಕು,' ಅಂತ ರಾಜಕಾರಣಕ್ಕೆ `ಕೈ' ಮುಗಿದು, ಮಂಡ್ಯದಿಂದ ಬೆಂಗಳೂರಿನ ತಾಜ್‌ ಹೋಟೆಲ್ ಲೊಕೇಷನ್‌ಗೆ ಶಿಫ್ಟ್ ಆಗಿಬಿಟ್ಟರು. ಈ ವಿಷಯ ಲೀಕ್‌ ಆಗುವಷ್ಟರಲ್ಲಿ ದುನಿಯಾ ಸೂರಿ ನಿರ್ದೇಶನದ ಅಪ್ಪು ಅಭಿನಯದ `ದೊಡ್ಮನೆ ಹುಡುಗ'ನಿಗೆ ನಾಯಕಿಯಾಗಿ ರಮ್ಯಾ ಸೆಟ್ಟಿಗೆ ಬಂದಿರುವುದು ಈಗಾಗಲೇ ಖಚಿತವಾಗಿದೆ. ರಾಜಕೀಯಕ್ಕೆ ಜಿಗಿಯುವ ಮೊದಲು ರಮ್ಯಾ ಶಿವಣ್ಣನಿಗೆ ನಾಯಕಿಯಾಗಿದ್ದ `ಆರ್ಯನ್‌' ತೆರೆಗೆ ರೆಡಿಯಾಗುತ್ತಿದೆ. ಇದೀಗ ಮತ್ತೆ ಮರಳಿ ಬಂದಿರುವ ರಮ್ಯಾ, `ನೀರ್‌ ದೋಸೆ' ಹಾಕುವುದು ಒಪ್ಪಿದರೆ, ನಿರ್ದೇಶಕ ವಿಜಯ್‌ ಪ್ರಸಾದ್‌ ಹೆಂಚು ಕಾಯಲು ಒಲೆ ಹಚ್ಚಬಹುದಾ ಎಂದು ಗಾಂಧಿನಗರದಲ್ಲಿ ಮಾತೋ ಮಾತು.

ಸನ್ನಿ ಲಿಯೋನ್‌ ಬರ್ತಾಳಂತಾ....?

sav2

ಪೋಲಿ ಚಿತ್ರ ತಾರೆ ಸನ್ನಿ ಲಿಯೋನ್‌ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾಳೆ. ಅದಕ್ಕೆ ಕಾರಣ ಕೇವಲ ನೀಲಿ ಚಿತ್ರಗಳೆನ್ನುವುದು ಸುಳ್ಳು. ಈಗಾಗಲೇ ಬಾಲಿವುಡ್‌ನಲ್ಲೂ ಬಿಚ್ಚಮ್ಮಳಾಗಿ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಈ ಬೆಡಗಿ, ಇದೀಗ ಸ್ಯಾಂಡಲ್ ವುಡ್‌ಗೂ ಎಂಟ್ರಿ ಕೊಡುತ್ತಿದ್ದಾಳಾ...? ಜೋಗಿ ಪ್ರೇಮ್ ಅವರ `ಡಿ.ಕೆ.' ಚಿತ್ರಕ್ಕೆ ಆಕೆ ಐಟಂ ಗರ್ಲ್ ಆಗಿ ಬರುತ್ತಿದ್ದಾಳಂತೆ. ಅವಳಿಗೆ ಒಂದು ಕೋಟಿ ಸಂಭಾವನೆ ಕೊಟ್ಟು ಕರೆಸುತ್ತಿದ್ದಾರೆ. ಅಂದಮೇಲೆ, ಐಟಂ ಸಾಂಗ್‌ ಸಹ ಬಹಳ ಮಸ್ತ್ ಆಗಿರುತ್ತದೆ. ನಮ್ಮ ಪಡ್ಡೆ ಹುಡುಗರ ಕಣ್ಣುಗಳೂ ತಂಪಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದೆಷ್ಟು ಸತ್ಯ ಸುಳ್ಳೆನ್ನುವುದು ಪ್ರೇಮ್ ಗೆಲ್ಲದೇ ಇನ್ಯಾರಿಗೂ ಗೊತ್ತಿಲ್ಲ. ಏಕೆಂದರೆ, ಬೂಸಿ ಬಿಡುವುದರಲ್ಲಿ ಮತ್ತು ಚಿತ್ರ ತಯಾರಾಗೋ ಮೊದಲೇ ಪ್ರಚಾರ ಗಿಟ್ಟಿಸುವುದರಲ್ಲಿ ಜೋಗಿ ಪ್ರೇಮ್ ಎತ್ತಿದ ಕೈ. ಅದೇನೇ ಇದ್ದರೂ, ಪ್ರೇಮ್ ತಮ್ಮ ಚಿತ್ರಗಳಲ್ಲಿ ಇಂತಹ ಕೆಲವು ವಿಶೇಷತೆಗಳನ್ನು ತುಂಬಿ ಪ್ರೇಕ್ಷಕನನ್ನು ಗೆಲ್ಲೋ ಪ್ರಯತ್ನ ಮಾಡುತ್ತಿರುತ್ತಾರೆ. `ಜೋಗಿ' ಚಿತ್ರದ ಗುಂಗಿನಿಂದ ಇನ್ನೂ ಹೊರಬರದ ಪ್ರೇಮ್, ನಂತರದ ಚಿತ್ರಗಳಲ್ಲೂ ಅದೇ ಜಾಡನ್ನು ಉಳಿಸಿಕೊಂಡಿದ್ದರು. ಬಹುಶಃ `ಡಿ.ಕೆ.'ಯೂ ಅದಕ್ಕೆ ಹೊರತಲ್ಲವೇನೋ....?  ಆದರೆ ಒಂದಂತೂ ಸತ್ಯ, ತಮ್ಮ ಚಿತ್ರಗಳಲ್ಲಿ ಹೊಸತನ ಇರುತ್ತದೋ ಬಿಡುತ್ತದೋ ಗಿಮಿಕ್‌ಗಳಿಗೇನೂ ಕೊರತೆ ಇರುವುದಿಲ್ಲ. ಸನ್ನಿ ಲಿಯೋನ್‌ ಬರುತ್ತಿದ್ದಾಳೆ ಎಂಬ ಸುದ್ದಿಯೂ ಅಂತಹ ಒಂದು ಗಿಮಿಕ್‌ ಇರಬಹುದೇ...?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ