ಆರ್ಯನ್‌ ಕಮಾಲ್‌!

ವಯಸ್ಸು ಫಿಫ್ಟಿ ಪ್ಲಸ್‌. ಯುವಕರನ್ನು ನಾಚಿಸುವಂಥ ಫಿಟ್‌ನೆಸ್‌. ಶಿವರಾಜ್‌ ಕುಮಾರ್‌ `ಆರ್ಯನ್‌' ಚಿತ್ರದಲ್ಲಿ ಕಾಣಿಸಿಕೊಂಡಿರುವ ಪರಿವೆ ಹೇಗಿದೆ ಅಂದರೆ, ಆತ ಒಬ್ಬ ಕ್ರೀಡಾಪಟುವೇನೋ ಎನ್ನುವಂತೆ ಭಾಸವಾಗುತ್ತದೆ. `ಆರ್ಯನ್‌' ಚಿತ್ರದಲ್ಲಿ ಅವರು `ಕೋಚ್' ಪಾತ್ರ ನಿರ್ವಹಿಸಿದ್ದಾರೆ. ಸ್ಲಿಮ್ ಅಂಡ್‌ ಫಿಟ್‌ ಆಗಿರುವ ಶಿವರಾಜ್‌ ಅವರ ಪರ್ಸನಾಲಿಟಿ ಕುರಿತು ಇಂಟ್ರೆಸ್ಟಿಂಗ್ ಪ್ರಸಂಗವೊಂದು `ಆರ್ಯನ್‌' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಡೆಯಿತು. ಚಿತ್ರರಂಗದ ಗಣ್ಯರ ಜೊತೆ ಸಮಾರಂಭದಲ್ಲಿ ಕ್ರಿಕೆಟ್‌ನ ವಿಜಯ ಭಾರದ್ವಾಜ್‌ ಕೂಡಾ ಅತಿಥಿಗಳಾಗಿದ್ದರು. ಅವರು ಶಿವಣ್ಣನವರತ್ತ ನೋಡುತ್ತಾ, ಕ್ರೀಡಾಪಟುವಾಗಿ ನಾವು ಫಿಟ್ನೆಸ್‌ ಬಗ್ಗೆ ಯೋಚಿಸಲಿಲ್ಲ. ಅದನ್ನು ಕಾಯ್ದುಕೊಳ್ಳಲಿಲ್ಲ. ಆದರೆ ಸಿನಿಮಾರಂಗದಲ್ಲಿದ್ದು ಒಬ್ಬ ಕ್ರೀಡಾಪಟುವೆತೆ ಫಿಟ್‌ನೆಸ್‌ಕಾಪಾಡಿಕೊಂಡು ಇಷ್ಟು ಯಂಗ್‌ ಆಗಿರಲು ಹೇಗೆ ಸಾಧ್ಯ? ಅದರ ರಹಸ್ಯವೇನು ಎಂದು ಕೇಳಿದರು. ಶಿವಣ್ಣ ನಗುತ್ತಲೇ ಅಲ್ಲೇ ಕುಳಿತಿದ್ದ ಗೀತಾ ಅವರತ್ತ ಬೆರಳು ಮಾಡಿ ತೋರಿಸಿದರು. ನನ್ನ ಗೀತಾ ನನ್ನ ಊಟದ ಬಗ್ಗೆ ತುಂಬಾ ಕೇರ್‌ ತೆಗೆದುಕೊಳ್ಳುತ್ತಾರೆ. ನಾನಿವತ್ತು ಈ ರೀತಿ ಫಿಟ್‌ ಆಗಿರಲು ಗೀತಾನೇ ಕಾರಣ ಎಂದರು.

ಅಭಿನೇತ್ರಿ ಅತ್ತಳು

Abhinetri

`ಅಭಿನೇತ್ರಿ' ಪೂಜಾಗಾಂಧಿಯ ಬಹು ನಿರೀಕ್ಷಿತ ಚಿತ್ರ. ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದ ಈ ಚಿತ್ರ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಅದಕ್ಕೆ ಅಡ್ಡಿ ಆತಂಕ ಶುರುವಾಗಿದೆ. ನಟಿ ಪೂಜಾಗಾಂಧಿ ಕಥೆ ಕಳ್ಳಿ ಎಂಬ ಆರೋಪ ಎದುರಿಸುತ್ತಿದ್ದಾಳೆ. ಹಾಗಾಗಿ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿದ ಕಾರಣ ಮಳೆ ಗುಡುಗಿ ಪೂಜಾಗಾಂಧಿ ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ. ಭಾಗ್ಯ ಕೃಷ್ಣಮೂರ್ತಿ ಎನ್ನುವ ಬರಹಗಾರ್ತಿ ತಮ್ಮ ಕಾದಂಬರಿಯನ್ನು ಕದಿಯಲಾಗಿದೆ ಎಂದು ಆರೋಪ ಮಾಡಿ ಕೋರ್ಟಿನ ಮೆಟ್ಟಿಲು ಹತ್ತಿದ್ದರು. ಅವರ ಕಾದಂಬರಿಗೂ ನನ್ನ ಚಿತ್ರಕಥೆಗೂ ಯಾವುದೇ ಸಂಬಂಧವಿಲ್ಲ ಎಂದು ಪೂಜಾ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುತ್ತೇನೆ ಎಂದಿದ್ದರು. ಈಗ ಚಿತ್ರೀಕರಣವನ್ನು ಪೂರೈಸಲು ಅನುಮತಿ ನೀಡಿದ್ದು, ಮೊದಲ ಕಾಪಿಯನ್ನು ನೋಡಿದ ನಂತರ ಉಳಿದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದೆ. ನನ್ನ ಮೊದಲ ನಿರ್ಮಾಣದ ಚಿತ್ರಕ್ಕೆ ಇಂಥವೊಂದು ಆರೋಪ ಬಂದಿತ್ತಲ್ಲ ಎಂದು ಮನನೊಂದ ಪೂಜಾ ಕೋರ್ಟ್‌ ಆರಣದಲ್ಲೇ ಥೇಟ್‌ ಕಲ್ಪನಾ ತರಹ ಕಣ್ಣೀರಿನ ಮಳೆ ಸುರಿಸಿದಳಂತೆ.

ದೃಶ್ಯಾಕರ್ಷಣೆ

uppi2

 

ಈ ವರ್ಷ ರವಿಚಂದ್ರನ್‌ ಅವರಿಗೆ ಹರುಷದ ವರ್ಷವಾಗಿದೆ. `ಮಾಣಿಕ್ಯ' ಸೂಪರ್‌ ಹಿಟ್‌ ಆಯಿತು. ಅದರ ಬೆನ್ನಲ್ಲೇ ಬಿಡುಗಡೆಯಾದ `ದೃಶ್ಯ' ಚಿತ್ರವನ್ನು ಮಾಸ್ಕ್ ಮತ್ತು ಕ್ಲಾಸ್‌ ಎರಡೂ ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡರು. ಫಾದರ್‌ ಫಿಗರ್‌ ಆಗಿರುವ ರವಿಚಂದ್ರನ್‌ ಪಾಲಿಗೆ ಈ ಹೊಸ ಇಮೇಜ್‌ ಹೆಚ್ಚು ಅದೃಷ್ಟ ತಂದಂತಿದೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿ `ದೃಶ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರುವ ತಮ್ಮ ಎಲ್ಲ ಕ್ರೇಜಿ ಇಮೇಜನ್ನು ಪಕ್ಕಕ್ಕಿಟ್ಟು ಸೀದಾ ಸಾದಾ ಅಪ್ಪನಾಗಿ ಉತ್ತಮ ಅಭಿನಯ ನೀಡಿದ್ದಾರೆ. `ದೃಶ್ಯ' ಕೂಡಾ ಯಶಸ್ಸು ಕಂಡಿದೆ. ಆದರೆ ಈ ಇಮೇಜ್‌ ಪರ್ಮನೆಂಟ್‌ ಅಲ್ಲ ಎಂದು ರವಿ ಹೇಳುತ್ತಾರೆ. ನಾನು ಎಲ್ಲ ಚಿತ್ರದಲ್ಲೂ ಅಪ್ಪನ ಪಾತ್ರ ವಹಿಸುವುದಿಲ್ಲ. ಈ ಚಿತ್ರಗಳಲ್ಲಿ ಆ ಪಾತ್ರಗಳಿಗೊಂದು ಅರ್ಥವಿತ್ತು. ನನ್ನನ್ನು ಬಿಟ್ಟರೆ ಬೇರೆ ಯಾರೇ ಮಾಡಿದರೂ ಒಪ್ಪುವುದಿಲ್ಲ ಅಂತ ನಿರ್ದೇಶಕರು ನಂಬಿ ನನ್ನನ್ನು ಆಯ್ಕೆ ಮಾಡಿದ್ದರಿಂದ ಒಪ್ಪಿಕೊಂಡಿದ್ದೆ. ಈಗ ನನ್ನ ಪುತ್ರನ ಚಿತ್ರದಲ್ಲೂ ಸಹಾ ಅಪ್ಪನ ಪಾತ್ರ ವಹಿಸಬೇಕಿದೆ. ಅದು ಬಿಟ್ಟರೆ ಬೇರೆ ಯಾವ ಚಿತ್ರದಲ್ಲೂ ನಾನು ಫಾದರ್‌ ಪಾತ್ರ ಮಾಡುತ್ತಿಲ್ಲ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ