ಐಂದ್ರಿತಾ ತನ್ನ ವೃತ್ತಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಬಂದಿರುವಂಥ ಹುಡುಗಿ. ಬರೀ ಫ್ಯಾಷನ್‌ಗಾಗಿ ಸಿನಿಮಾ ದುನಿಯಾಗೆ ಬಂದವಳಲ್ಲ. ಒಂದು ಸಿನಿಮಾ ಒಪ್ಪಿಕೊಂಡಾಗ ತನ್ನ ಪಾತ್ರದ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಅದಕ್ಕೆ ಒಪ್ಪುವಂತೆ ನಟಿಸುವುದನ್ನು ಕಲಿತಳು. ಐಂದಿತ್ರಾಳಿಗೆ ಜನಪ್ರಿಯತೆ ಇತ್ತಾದರೂ ಹೆಚ್ಚು ಗಮನಸೆಳೆದದ್ದು `ಜಂಗ್ಲಿ' ಚಿತ್ರದ ಮೂಲಕ. ವಿಜಯ್‌ಜೋಡಿಯಾಗಿ ನಟಿಸಿದ್ದ ಐಂದ್ರಿತಾಳನ್ನು ನಿರ್ದೇಶಕ ಸೂರಿ ಬಹಳ ವಿಭಿನ್ನವಾಗಿ ತೋರಿಸಿದ್ದರು.

ಚಿತ್ರದಲ್ಲಿ ಐಂದ್ರಿತಾ ಪಾತ್ರಕ್ಕೂ ಹೆಚ್ಚು ಸ್ಕೋಪ್‌ ನೀಡಲಾಗಿತ್ತು. ಅಷ್ಟೇ ಬೋಲ್ಡಾಗಿ ಐಂದ್ರಿತಾ ನಟಿಸಿದ್ದರು. `ಹಳೇ ಪಾತ್ರೆ..... ಹಳೇ ಕಬಿಣ....' ಹಾಡಂತೂ ಸೂಪರ್‌ ಹಿಟ್‌ ಆಗಿತ್ತು. ಐಂದ್ರಿತಾಳಿಗೆ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ಬರುತ್ತಾ ಅಂತ ಎಲ್ಲರೂ ಆಶ್ಚರ್ಯಪಟ್ಟಿದ್ದರು. ದುನಿಯಾ ಸೂರಿ ಕೂಡಾ ಐಂದ್ರಿತಾಳಲ್ಲಡಗಿದ್ದ ಪ್ರತಿಭೆ ಹೊರತೆಗೆದಿದ್ದರು. ಪರವಾಗಿಲ್ಲ ಈ ಹುಡುಗಿಗೂ ಆ್ಯಕ್ಟಿಂಗ್‌ ಮಾಡೋದಿಕ್ಕೆ ಬರುತ್ತೆ ಅಂತ ಉಳಿದವರು ಕೂಡಾ ಒಳ್ಳೆ ನಾಯಕಿ ಪಾತ್ರ ನೀಡುತ್ತಾ ಹೋದರು.

ಸೂರಿ ಚಿತ್ರದಲ್ಲಿ ನಟಿಸಿದ ನಂತರ ಯೋಗರಾಜ್‌ ಭಟ್ಟರು ತಮ್ಮ `ಮನಸಾರೆ' ಚಿತ್ರದಲ್ಲಿ ಹುಚ್ಚಿ ಪಾತ್ರಕ್ಕೆ ಐಂದ್ರಿತಾಳನ್ನು ಆಯ್ಕೆ ಮಾಡಿದಾಗ ಇಂಥ ಪಾತ್ರವನ್ನು ಹೇಗೆ ಮಾಡುತ್ತಾಳೆಂಬ ಅನುಮಾನ ಎಲ್ಲರಲ್ಲೂ ಇತ್ತು. ಆದರೆ ಐಂದ್ರಿತಾ ಸರ್‌ಪ್ರೈಸ್ ಪ್ಯಾಕೇಜಾಗಿ ಕಂಡಳು. `ಮನಸಾರೆ' ಚಿತ್ರ ಒಳ್ಳೆ ಹೆಸರು ತಂದುಕೊಟ್ಟಿತು. ದಿಗಂತ್‌ ಐಂದ್ರಿತಾ ಜೋಡಿ ಸೂಪರ್‌ ಹಿಟ್‌ ಆಯಿತು. ಆದರೆ `ಪಾರಿಜಾತ' ಚಿತ್ರದಲ್ಲಿ ಈ ಜೋಡಿ  ಅಂಥಾದ್ದೇನೂ ಮೋಡಿ ಮಾಡಲಿಲ್ಲ. ಆದರೆ ಅವರ ಅಸಲಿ ಬದುಕಿನಲ್ಲಿ ಅವರು ಪ್ರೇಮಿಗಳಾಗಿಬಿಟ್ಟರು.

Aindrita-RayAindrita-Ray-1-(27)

ಹೌದು, ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ ಎಂದು ಬಹಿರಂಗಪಡಿಸಿದರು. ಮದುವೆ ಯಾವಾಗ ಎಂದು ಕೇಳಿದರೆ ಸದ್ಯಕ್ಕಿಲ್ಲ. ಆದರೆ ಇಬ್ಬರ ಮನೆಯವರೂ ಈ ಜೋಡಿಯನ್ನು `ಮನಸಾರೆ' ಒಪ್ಪಿಕೊಂಡಿದ್ದಾರೆ. 2015ರಲ್ಲಿ ಆಗುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈ ಜೋಡಿಯನ್ನು ತೆರೆ ಮೇಲೆ ಮತ್ತೆ ತರುವ ಪ್ರಯತ್ನ ನಡೆದಿದೆ.

`ಚಿತ್ತಾರ' ಪತ್ರಿಕೆಯ ಶಿವಕುಮಾರ್‌ ಸಿನಿಮಾವೊಂದನ್ನು ನಿರ್ಮಿಸು ಆಸಕ್ತಿಯಲ್ಲಿದ್ದಾರೆ. ದಿಗಂತ್‌ ಐಂದ್ರಿತಾ ಜೋಡಿ ಇರುತ್ತೆ. ಈ ಚಿತ್ರವನ್ನು `ಲವ್ ಗುರು' ಚಿತ್ರದಲ್ಲಿ ಪ್ರಶಾಂತರ ಗರಡಿಯಲ್ಲಿ ಪಳಗಿದಂಥ ಶ್ಯಾಮ್ ಎನ್ನುವವರು ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರಕ್ಕೆ `ರೊಮಾನ್ಸ್' ಅಂತ ಹೆಸರಿಡಬಹುದೆಂಬ ಗುಮಾನಿ ಇದೆ.

 

ಇತ್ತೀಚೆಗೆ `ಭಜರಂಗಿ' ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಅವರ ಜೊತೆಯಲ್ಲಿ ನಟಿಸಿದ್ದ ಐಂದ್ರಿತಾ ಈ ಹಿಂದೆ `ಕಡ್ಡಿಪುಡಿ' ಚಿತ್ರದಲ್ಲೂ ಸಹ ಒಂದು ಸಾಂಗ್‌ನಲ್ಲಿ ಶಿವಣ್ಣನ ಜೊತೆ ಕಾಣಿಸಿಕೊಂಡಿದ್ದಳು. `ಸೌಂದರ್ಯ ಸಮರಾ....' ಹಾಡು ಜನಪ್ರಿಯಾಗಿತ್ತು. `ಪ್ರೇಮ್ ಅಡ್ಡ'ದಲ್ಲೂ `ಮೈ ನೇಮು ಬಸಂತಿ....' ಹಾಡಿಗಾಗಿ ಕುಣಿದಿದ್ದಳು. ಏಕೆ ಐಂದ್ರಿತಾಳಿಗೆ ಅವಕಾಶಗಳು ಕಡಿಮೆಯಾಗುತ್ತಿದೆಯಾ ಎಂದು ಎಲ್ಲರಲ್ಲೂ ಅನುಮಾನದ ಪ್ರಶ್ನೆ ಹುಟ್ಟಿಕೊಳ್ಳುತ್ತಿರುವಾಗ, ಐಂದ್ರಿತಾ ಸದ್ದಿಲ್ಲದೆ ಎರಡು ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾಳೆ.

aindritha1 (1)

ಬಂಗಾಳಿ ಚಿತ್ರವೊಂದರಲ್ಲಿ ನಟಿಸಿದ್ದು, ಅದು ಕನ್ನಡದ `ಬಚ್ಚನ್‌' ರೀಮೇಕ್‌ ಅಂತೆ. ಐಂದ್ರಿತಾ ಮೊದಲ ಬಾರಿಗೆ ಕನ್ನಡೇತರ ಚಿತ್ರದಲ್ಲಿ ನಟಿಸುತ್ತಿರೋದು ಇದೇ ಮೊದಲು ಜಗ್ಗೇಶ್‌ ನಿರ್ದೇಶನದ `ಮೇಲುಕೋಟೆ ಮಂಜ' ಚಿತ್ರದಲ್ಲಿ ಐಂದ್ರಿತಾ ನಾಯಕಿಯಾಗಿದ್ದಾಳೆ. ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ಐಂದ್ರಿತಾ ಕಾಣಿಸಿಕೊಳ್ಳುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ