ಸ್ಯಾಂಡಲ್ ವುಡ್‌ ಘಮಘಮಿಸುತ್ತಿದೆ. ಹೊಸ ಸೆನ್ಸೇಷನ್‌ನೊಂದಿಗೆ ಘಮ್ಮೆಂದು ಪರಿಮಳ ಬೀರುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಷ್ಟೇ ಕಥೆ ಚಿತ್ರಕಥೆಗಳು ಹುಟ್ಟಿಕೊಂಡಿದ್ದರೂ, ಎಷ್ಟೇ ಹೊಸಬರು ಎಂಟ್ರಿ ಕೊಟ್ಟಿದ್ದರೂ ಇಂತಹ ಸೆನ್ಸೇಷನ್‌ ಕ್ರಿಯೇಟ್ ಆಗಿರಲಿಲ್ಲ.

ಈಗ ಇಡೀ ಸ್ಯಾಂಡಲ್ ವುಡ್‌ಗೆ ಸ್ಯಾಂಡಲ್ ವುಡ್ಡೇ ಅಚ್ಚರಿಪಡುವಂತಹ ಸೆನ್ಸೇಷನ್‌ ಒಂದು ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಚಾಂದಿನಿ!

ಇಲ್ಲದೇ ಇದ್ದಿದ್ದರೆ ಅಂದು `ಛಲೀ ಗಯೇ ಚಾಂದಿನಿ' ಎಂದು ತೆರೆಯ ಮೇಲೆ ಹಾಡಿ ಕುಣಿದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ, ನಾಲ್ಕಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದು ಕೆಲಕಾಲ ದೂರವಾಗಿಬಿಟ್ಟಿದ್ದ ಚಾಂದಿನಿ, ಇಂದು `ಫಿರ್‌ ಆಗಯೀ ಚಾಂದಿನಿ`ಯಾಗಿ ಮತ್ತೆ ನಮ್ಮ ಮುಂದೆ ಬರುತ್ತಿದ್ದಳೇ? ಹಲವು ವರ್ಷಗಳ ನಂತರ ಆಕೆ ಮತ್ತೆ ಸ್ಯಾಂಡಲ್ ವುಡ್‌ಗೆ ರೀ ಎಂಟ್ರಿ ಪಡೆಯಲೆಂದೇ `ಖೈದಿ' ಹೊಸ ರೂಪ ತಾಳುತ್ತಿದ್ದನೇ? ಅಥವಾ `ಸೈಕೋ' ಖ್ಯಾತಿಯ ನಾಯಕ ನಟ ಧನುಷ್‌ ಮತ್ತು ಇದೇ ಚಿತ್ರದ ನಿರ್ಮಾಪಕ ಗುರುದತ್‌ ಇಲ್ಲಿ ಒಂದಾಗುತ್ತಿದ್ದರೇ...?

ಇದೆಲ್ಲ ಕಾಕತಾಳೀಯವೇ ಇರಬಹುದೇನೋ...? ಆದರೆ, ಚಾಂದಿನಿ ಮತ್ತೆ ಸ್ಯಾಂಡಲ್ ವುಡ್‌ಗೆ ಮರಳುವುದಕ್ಕೆ ಒಂದರ್ಥದಲ್ಲಿ `ಖೈದಿ'ಯೇ ಕಾರಣ.

ಕಳೆದ ಮೂರು ದಶಕಗಳ ಹಿಂದೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ ವಿಷ್ಣು ಅಭಿನಯದ `ಖೈದಿ' ಇಂದು ಹಲವು ವಿಶೇಷತೆಗಳೊಂದಿಗೆ ಅದೇ ಹೆಸರಿನಲ್ಲಿ ಮೈದಳೆದು, ಚಾಂದಿನಿ ಧನುಷ್‌ ಕಾಂಬಿನೇಷನ್‌ನಲ್ಲಿ ಪ್ರೇಕ್ಷಕನನ್ನು ರಂಜಿಸಲು ತಯಾರಿ ನಡೆಸಿದ್ದಾನೆ. ಅಷ್ಟೇ ಅಲ್ಲ, ಮತ್ತೊಮ್ಮೆ ಸಾಹಸಸಿಂಹನ `ಖದರ್‌' ನೆನಪಿಸಲು ಬರುತ್ತಿದ್ದಾನೆ.

ಫಿರ್‌ ಆಗಯೀ ಚಾಂದಿನಿ, ಹಳೇ ಹೆಸರು ಹೊಸ ರೂಪದ `ಖೈದಿ.' ಸೈಕೋ ಧನುಷ್‌ ಮತ್ತು ಗುರುದತ್‌ ಕಾಂಬಿನೇಷನ್‌ನ್ನು ಒಟ್ಟಾಗಿ ನೋಡಿದರೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿರುವ ಈ ಹೊಸ ಸೆನ್ಸೇಷನ್‌ಗೆ ಅಚ್ಚರಿಪಡಬೇಕಾದದ್ದೇ. ಏಕೆಂದರೆ ಗುರುದತ್‌ಅವರು `ಖೈದಿ' ಹೆಸರಿನಲ್ಲಿ ಸಿನಿಮಾ ತಯಾರಿಕೆಗೆ ಮನಸ್ಸು ಮಾಡಿ, ಕಥೆ ಚಿತ್ರಕಥೆ ಸಿದ್ಧಪಡಿಸಿಕೊಂಡು ಅದಕ್ಕಾಗಿ ಹಗಲು ರಾತ್ರಿ ವರ್ಕ್‌ ಔಟ್‌ ಆರಂಭಿಸಿದಾಗ ಚಾಂದಿನಿಯಂತಹ ನಾಯಕಿಗಾಗಿಯೇ ಹುಡುಕಾಟ ನಡೆಸಿದ್ದರು.

ಈ ಸಮಯದಲ್ಲಿ ಗುರುದತ್‌ರಿಗೆ ಉಪೇಂದ್ರರ `ಎ' ಚಿತ್ರ ಸೇರಿದಂತೆ ಶಿವರಾಜ್‌ ಕುಮಾರ್‌, ಸಾಹಸಸಿಂಹ ವಿಷ್ಣುವರ್ಧನ್‌ ಮತ್ತು ಶಿವಮಣಿ ಅವರೊಂದಿಗೆ ಅಭಿನಯಿಸಿ ಸಿನಿಪ್ರಿಯರ ಮನ ಗೆದ್ದಿದ್ದ ನಾಯಕಿ ಚಾಂದಿನಿ ನೆನಪಾಗಿದ್ದರು. ಮಾತುಕತೆ ನಡೆಯಿತು. ಚಾಂದಿನಿ ಒಪ್ಪಿದರು. ಮತ್ತೊಮ್ಮೆ ಸ್ಯಾಂಡಲ್ ವುಡ್‌ಗೆ ಮರಳಲು `ಖೈದಿ' ಅವಕಾಶ ಕೊಟ್ಟಿದ್ದರಿಂದ ಸಹಜವಾಗಿಯೇ ಚಾಂದಿನಿ ಖುಷಿಯಾದರು.

`ಆಗಯೀ ಚಾಂದಿನಿ'ಯಾಗಿ ಹೊಸ ಸೆನ್ಸೇಷನ್‌ ಹುಟ್ಟಿಸುವಲ್ಲಿ ಯಶಸ್ವಿಯೂ ಆದರು.

ಅಂದು ಸಾಹಸಸಿಂಹ ವಿಷ್ಣುವರ್ಧನ್‌`ಖೈದಿ'ಯಾಗಿ ಅಭಿನಯಿಸಿ ಚಿತ್ರರಸಿಕರ ಮನದಲ್ಲಿ ಮನೆ ಮಾಡಿದ್ದರು. ಆದರೆ, ಇಂದು ಅವರ ಅಭಿಮಾನಿ ಧನುಷ್‌ ಮತ್ತೆ ಖೈದಿಯಾಗಿ, ಹೊಸ ಅವತಾರದಲ್ಲಿ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಹಾಕಲು ಬರುತ್ತಿದ್ದಾರೆ. ಈಗಾಗಲೇ `ಸೈಕೋ'ದಲ್ಲಿ ನಾಯಕನಾಗಿ ಅಭಿನಯಿಸಿ ಒಂದಿಷ್ಟು ಹೆಸರು ಮಾಡಿರುವ ಧನುಷ್‌, ವಿಷ್ಣು ಅವರ ಪಕ್ಕಾ ಅಭಿಮಾನಿ ಆಗಿದ್ದು, ಅಂದು ವಿಷ್ಣು `ಖೈದಿ'ಯಾಗಿ ಮೆರೆದಿದ್ದ ಹಿನ್ನೆಲೆಯಲ್ಲೇ ಈಗ ಅದೇ ಹೆಸರಿನ `ಖೈದಿ'ಯಲ್ಲಿ ಸ್ವತಃ ತಾವೇ ರೋಲ್ ಮಾಡುವಂತಾದುದಕ್ಕೆ ಹೆಚ್ಚು ಉತ್ಸುಕತೆ ಹೊಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ