– ರಾಘವೇಂದ್ರ ಅಡಿಗ ಎಚ್ಚೆನ್.
ವರ್ಣತರಂಗ ಮೂರು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಪಾಷನಾಮೂರ್ತಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಬೆಳ್ತಂಗಡಿ ಉದ್ಯಮಿ ಬಿ.ಶಿವಕುಮಾರ್ ಬಂಡವಾಳ ಹೂಡಿರುವುದು ಮೂರನೇ ಅನುಭವ. ಸೆಲ್ವರಾಜ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೊನೆಯ ಮುಖವೆಂದು ಇಂಗ್ಲೀಷ್‌ದಲ್ಲಿ ಅಡಿಬರಹ ಇರಲಿದೆ.
ಎಸಿಪಿ ಪಾತ್ರದಲ್ಲಿ ತಿಲಕ್ ನಾಯಕ. ಜೀವಿತಾ ನಾಯಕಿ ಪತ್ರಕತೆಯಾಗಿ ಸಾಕ್ಷಿ ಮೇಘನಾ ಉಪನಾಯಕಿ. ಹ್ಯಾಕರ್ ಅಗಿ ವರ್ಧನ್. ಉಳಿದಂತೆ ಹೇಮಂತ್, ರಮೇಶ್ ಪಂಡಿತ್, ಬಲರಾಜವಾಡಿ, ಟೆನ್ನಿಸ್‌ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್‌ಭಟ್ ಮುಂತಾದವರು ನಟಿಸಿದ್ದಾರೆ.
ಸಂಗೀತ ಆಕಾಶ್‌ರೆಡ್ಡಿ-ಯಶವಂತ್‌ಭೂಪತಿ, ಛಾಯಾಗ್ರಹಣ ಮನುಗೌಡ, ಸಂಕಲನ ವೆಂಕಿ.ಯುಡಿವಿ, ಸಾಹಿತ್ಯ ವಿ.ಎನ್.ಸ್ವಾಮಿ-ಆಕಾಶ್‌ರೆಡ್ಡಿ-ಮಿಥುನ್‌ಸುವರ್ಣ, ಕಾರ್ಯಕಾರಿ ನಿರ್ಮಾಪಕ ಕೆ.ಬಾಲಸುಬ್ರಮಣ್ಯನ್, ಸಾಹಸ ಥ್ರಿಲ್ಲರ್‌ಮಂಜು-ಕುಂಗುಫೂ ಚಂದ್ರು-ನರಸಿಂಹ, ನೃತ್ಯ ನಾಗಿ-ಆನಂದ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ಮೂಲಕ ವಿಎಫ್‌ಎಕ್ಸ್ ಟೆಕ್ನಿಷಿಯನ್ ಆಗಿದ್ದು, ಕಿರುಚಿತ್ರ ಸಿದ್ದಗೊಳಿಸಿದ್ದೇನೆ. ವರ್ಣತರಂಗ ಅಂದರೆ ಬಣ್ಣಗಳ ಅಲೆಗಳು ಎಂಬರ್ಥ ಕೊಡುತ್ತದೆ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ? ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳು ಇರುವುದರಿಂದ ಇಷ್ಟನ್ನು ಮಾತ್ರ ಹೇಳಬಹುದು. ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಎಫ್‌ಎಕ್ಸ್ ಶೇಕಡ ಇಪ್ಪತ್ತೈದರಷ್ಟು ಬರುತ್ತದೆ. ಮಾಧ್ಯಮದವರ ಸಹಕಾರಬೇಕೆಂದು ಕೋರಿದರು.
ನಾನು ಈಗಾಗಲೇ ಎಸಿಪಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದರಲ್ಲೂ ಅದೇ ಪಾತ್ರವಿದ್ದರೂ ಕೇಸ್ ಬೇರೆಯದೆ ಆಗಿರುತ್ತದೆ. ಅದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲವೆಂದು ತಿಲಕ್ ಮಾಧ್ಯಮದ ಪ್ರಶ್ನೆಗೆ ಉತ್ತರವಾದರು. ಬಾರ್‌ದಲ್ಲಿ ಬರುವ ’ಸುಕ್ಕ ಸುಕ್ಕ’ ಗೀತೆಗೆ ಚಂದನ್‌ಶೆಟ್ಟಿ ಧ್ವನಿಯಾಗಿದ್ದಾರೆ. ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಇನ್ನರೆಡು ತಿಂಗಳಿಲ್ಲಿ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.