ಅನುಷ್ಕಾ ತನ್ನ ಪ್ರೆಗ್ನೆನ್ಸಿಯನ್ನು ಸುಲಭಾಗಿ ಮ್ಯಾನೇಜ್ ಮಾಡಿದ್ದು ಹೇಗೆ?
ವಾರ್ಮಿಕಾ ನಂತರ 2ನೇ ಸಲ ತನ್ನ ಪ್ರೆಗ್ನೆನ್ಸಿಯ ವದಂತಿ ಹರಡಿದಾಗ, ಅನುಷ್ಕಾಳ ಮೊದಲ ಪ್ರೆಗ್ನೆನ್ಸಿ ರೊಟೀನ್ ಈಗಲೂ ಚರ್ಚೆಯಲ್ಲಿದೆ. ತನ್ನ ಮೊದಲ ಪ್ರೆಗ್ನೆನ್ಸಿಯನ್ನು ಸುಲಭಗೊಳಿಸಿಕೊಳ್ಳಲು ಅನುಷ್ಕಾ ಡಿಸಿಪ್ಲಿನ್‌ಸ್ಟ್ರಿಕ್ಟ್ ಆಗಿ ಹೆಲ್ದಿ ಡಯೆಟ್, ವ್ಯಾಯಾಮಗಳನ್ನು ಡೇಲಿ ರೊಟೀನ್ ಆಗಿಸಿಕೊಂಡಳು. ಇದರ ಜೊತೆಗೆ ಆಕೆ ತನ್ನನ್ನು ತಾನು ಸ್ಟ್ರೆಸ್ ಫ್ರೀ ಆಗಿರಿಸಿಕೊಂಡಳು, ಸೆಲ್ಫ್ ಕೇರ್ ಕಡೆ ಗಮನಹರಿಸಿದಳು. ಅನುಷ್ಕಾಳ ಈ ರೊಟೀನ್ ಯಂಗ್ ಮದರ್ಸ್ ಗೆ ಒಂದು ಆದರ್ಶವಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ, ಅವಳ ಈ ರೊಟೀನ್ ನ್ನು ಪೂರ್ತಿಗೊಳಿಸುವಲ್ಲಿ ಪತಿ ವಿರಾಟ್ ನ ಸಹಕಾರ ದೊಡ್ಡದಾಗಿತ್ತು. ಇಂದಿನ ಆಧುನಿಕ ಪತಿಯರಿಗೆ ಇದು ಉತ್ತಮ ಮಾರ್ಗದರ್ಶನ ನೀಡುತ್ತದೆ. ಗರ್ಭವತಿ ಪತ್ನಿಗೆ ಎಲ್ಲ ವಿಧದಲ್ಲೂ ಸಹಕಾರ ನೀಡಬೇಕು ಎನ್ನುತ್ತದೆ. ಏಕೆಂದರೆ ಗರ್ಭಾವಸ್ಥೆ ಕೇವಲ ಮಗು ಹೆರಲು ನೆಪವಾಗದೆ, ಜೀವನವಿಡೀ ಹಸಿರು ನೆನಪು ಉಳಿಸಿಕೊಳ್ಳಲು ಸಾಕಲಾಗಿದೆ.
ಪರಿಸ್ಥಿತಿಯಿಂದಾಗಿ ಹುಟ್ಟಿಕೊಂಡ ಹಿಟ್ ಆ್ಯಕ್ಟರ್
ಯಂಗ್ ಏಜ್ ನಲ್ಲಿ ನೌಕರಿಗಾಗಿ ಪರದಾಟ, 15 ನೌಕರಿ ಬದಲಾಯಿಸಿದರೂ ಸೆಟ್ ಆಗದ ಕಾರಣ ಬಿಸ್ ನೆಸ್ ಶುರು. ಇಷ್ಟಾದರೂ ಯಶಸ್ಸು ಕೈಗೆ ಸಿಗಲಿಲ್ಲ. ಇಂದು ಕೋಟಿಗಳಲ್ಲಿ ಸಂಭಾವನೆ ಪಡೆಯುವ ತಮಿಳಿನ ಯಶಸ್ವಿ ನಟ ವಿಜಯ್ ಸೇತುಪತಿಯ ಕಥೆ ಇದು. ವಿಜಯ್ ಕತ್ರೀನಾ ನಟಿಸಿರುವ `ಮೆರ್ರಿ ಕ್ರಿಸ್‌ಮಸ್’ ಚಿತ್ರ ಈಗಷ್ಟೇ ರಿಲೀಸ್ ಆಗಿದೆ. ಇದರ ಗಳಿಕೆಯೂ ಎಷ್ಟೋ ಉತ್ತಮ ಎನಿಸಿದೆ. ಕಳೆದ 2 ವರ್ಷಗಳಲ್ಲಿ ವಿಜಯ್ ಬಾಲಿವುಡ್ ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡಿದ್ದಾನೆ. ದುರ್ಬಲ ಪಾತ್ರ ನಿರ್ವಹಿಸುತ್ತಾ ಮುದಿಯಾಗುತ್ತಿರುವ ಖಾನ್ ತ್ರಯರಿಗೆ ಇದನ್ನು ಕೇಳಿ ಕಹಿ ಕಹಿ ಎನಿಸುವುದು ಸಹಜ. ತೃಷಾ ಜೊತೆ ಈತನ `96′ ಚಿತ್ರ ಕನ್ನಡದಲ್ಲಿ ಗಣೇಶ್ ಭಾವನಾರ `99′ ಆಗಿ ಯಶಸ್ವಿ ಎನಿಸಿತ್ತು. ಆಲ್ ದಿ ಬೆಸ್ಟ್ ಸೇತು!
ರಾಜಕೀಯದಿಂದ ಪ್ರೇರಿತ ಮತ್ತೊಂದು ಚಿತ್ರ
ರಾಜಕೀಯಕ್ಕೂ ಚಿತ್ರರಂಗಕ್ಕೂ ಅವಿನಾಭಾವ ನಂಟು. ಆದರೆ ಭಗವಾ ಸರ್ಕಾರದಲ್ಲಿ ಈ ಅಂಶ ಹೆಚ್ಚಿನ ರಂಗೇರಿಸುತ್ತಿದೆ. ಈ ನಿಟ್ಟಿನಲ್ಲಿ ಬಂದಿದೆ ಹೊಸ ಚಿತ್ರ `ಮೈ ಅಟ್ ಹ್ಞೂಂ.’ ಪಂಕಜ್ ತ್ರಿಪಾಠಿ ಇದರಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪಾತ್ರ ನಿರ್ವಹಿಸಿದ್ದಾರೆ. ಇಂಥ ರಾಜಕೀಯ ಮೂಲದ ಚಿತ್ರಗಳಿಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಸಪೋರ್ಟ್ ಸಿಕ್ಕಿಲ್ಲ ಎಂಬುದನ್ನು ಇದರ ನಿರ್ಮಾಪಕರು ಮರೆತಂತಿದೆ. ಯಾವುದೋ ಒಂದು ಪಕ್ಷವನ್ನು ಖುಷಿಪಡಿಸಲೆಂದೇ ನಿರ್ಮಾಪಕರು ಇಂಥ ಚಿತ್ರ ಮಾಡುತ್ತಿದ್ದಾರೆ ಎಂಬುದು ಇದರಿಂದ ಸುಸ್ಪಷ್ಟ. ಉತ್ತಮ ಸಂದೇಶ ನೀಡುವಂಥ ಫಿಲ್ಮಿ ಕಥೆ ರಚಿಸುವವರೇ ಇಲ್ಲ ಎಂದಾಗ ಈ ನಿರ್ಮಾಪಕರು ಬೇರೇನು ಮಾಡಿಯಾರು?
ಅಂತೂ ದಿಶಾಗೆ ಸಿಕ್ಕಿತು ದೆಶೆ
ಇದುವರೆಗೂ ಕೇವಲ ಬೋಲ್ಡ್ ಫೋಟೋಗಳನ್ನಷ್ಟೇ ಪ್ರದರ್ಶಿಸುತ್ತಾ, ತನ್ನ ಗಾಡಿ ಓಡಿಸುತ್ತಿದ್ದ ದಿಶಾಳಿಗೀಗ ಒಂದು ದೆಶೆ ಸಿಕ್ಕಿದೆ. ಇದೀಗ ಈಕೆ ತಮಿಳಿನ ಸೂಪರ್ ಸ್ಟಾರ್ ಸೂರ್ಯನ ಜೊತೆ `ಕಂಗುಲಾ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ದಿಶಾ ತನ್ನ ಫಿಗರ್ ಹಾಗೂ ಲವ್ ಲೈಫ್ ಗೆ ಹೆಚ್ಚಿನ ಸಮಯ ನೀಡುತ್ತಿದ್ದಳು. ಹೀಗಾಗಿಯೇ ಚಿತ್ರಗಳಲ್ಲಿ ಅವಕಾಶ ಸಿಗಲಿಲ್ಲ. `ಬೆಟರ್ ಲೇಟ್ ದ್ಯಾನ್ ನೆವರ್’ ಎಂಬ ಆಂಗ್ಲ ಗಾದೆ ಮಾತಿನಂತೆ, ಕೊನೆಗೂ ಇವಳಿಗೆ ಅವಕಾಶ ಸಿಕ್ಕಿದ್ದು ಪುಣ್ಯ.