ಶರತ್ ಚಂದ್ರ
ಆಶಿಕಾ ರಂಗನಾಥ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಹಾಗಂತ ಅವರೇನು ಕನ್ನಡದ ಯಾವುದೇ ಹೊಸ ಚಿತ್ರದಲ್ಲಿ ನಟಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಆರಂಭವಾದ ಸಿಂಪಲ್ ಸುನಿ ನಿರ್ದೇಶನದ ಬೆಂಗಳೂರಿನಲ್ಲಿ ನಡೆದ ಗತ ವೈಭವ ಚಿತ್ರದ ಪತ್ರಿಕಾಗೋಷ್ಠಿಗೆ ಹಾಜರಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದ ಆಶಿಕಾ ರಂಗನಾಥ್ ಕರ್ನಾಟಕದಲ್ಲಿ ಯಾವುದಾದರೂ ಶೋರೂಮ್ ಉದ್ಘಾಟನೆಯಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆಶಿಕಾ ಅವರು ಕೂಡ ಬಹುದಿನಗಳ ನಂತರ ಕನ್ನಡ ಸಿನಿಮಾದ ಪತ್ರಿಕಾ ಕೋಷ್ಟಿಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಖುಷಿ ಪಟ್ಟಿದ್ದರು.
ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ನಲ್ಲಿ ಪಿ ಆರ್ ಕೆ ಪ್ರೊಡಕ್ಷನ್ ನಿರ್ಮಾಣದ O2 ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದ ಆಶಿಕಾ ರಂಗನಾಥ್, ಶನಿವಾರ ನಡೆದ ' ಚಿತ್ರಸಂತೆ' ಅವಾರ್ಡ್ ನಲ್ಲಿ ಅದೇ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
'ಅಮಿಗೋಸ್ 'ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ಆಶಿಕಾ ನಾಗಾರ್ಜುನ ಜೊತೆ ನಟಿಸಿರುವ 'ನಾಸಾಮಿ ರಂಗ' ಚಿತ್ರ ಹಿಟ್ ಆಗಿತ್ತು. ಈ ಮಧ್ಯೆ ಸಿದ್ದಾರ್ಥ್ ಜೊತೆ 'ಮಿಸ್ ಯು' ಎನ್ನುವ ತಮಿಳು ಚಿತ್ರದಲ್ಲಿ ಕೂಡ ನಟಿಸಿರುವ ಆಶಿಕಾ ಸದ್ಯಕ್ಕೆ ಸ್ಯಾಂಡಲ್ವುಡ್ ಗೆ ಬರುವ ಸೂಚನೆ ಕಾಣುತ್ತಿಲ್ಲ.
ಆದರೆ ಇತ್ತೀಚೆಗೆ ಬಿಡುಗಡೆಯಾದ ಗತವೈಭವ ಚಿತ್ರದ ಒಂದು ಮಿಲಿಯನ್ ವೀಕ್ಷಣೆಗೆ ಒಳಗಾದ ಟೀಸರ್ನಲ್ಲಿ ದೇವ ಕನ್ಯೆಯಾಗಿ ಕಾಣಿಸಿಕೊಂಡ ಆಶಿಕಾ ಅವರ ಸೌಂದರ್ಯ ಮತ್ತು ನಟನೆ ನೋಡಿ ಕನ್ನಡ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರದ ನಿರ್ಮಾಪಕರಾದ ದೀಪಕ್ ತಿಮ್ಮಪ್ಪ ಪ್ರೆಸ್ ಮೀಟ್ ನಲ್ಲಿ ಮಾತಾಡಿ ಆಶಿಕಾ ಗೆ ಈ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದರೂ ಕೂಡ ಆಶ್ಚರ್ಯವಿಲ್ಲ ಎಂದಿದ್ದಾರೆ.
ನಾಯಕ ನಟ ದುಷ್ಯಂತ್, ನಿರ್ದೇಶಕ ಸಿಂಪಲ್ ಸುನಿ ಕೂಡ ಆಶಿಕಾ ಕೆರಿಯರ್ ನ ಅತ್ಯುತ್ತಮ ಚಿತ್ರ ಇದಾಗಿದೆಯೆಂದು ನಿರ್ಮಾಪಕರ ನುಡಿಗೆ ಸಹಮತ ಸೂಚಿಸಿದ್ದಾರೆ.
ಕನ್ನಡ ಚಿತ್ರಗಳಲ್ಲಿ 9 ವರ್ಷದ ಜರ್ನಿ ಪೂರೈಸಿ ಈಗಲೂ ಬೇಡಿಕೆಯಲ್ಲಿರುವ ಆಶಿಕಾ ರಂಗನಾಥ್ ಇನ್ನಷ್ಟು ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿ ರಂಜಿಸಲಿ ಎಂದು ಹಾರೈಸೋಣ