ಜಾಗೀರ್ದಾರ್*

ಲಹರಿ – MRT ಮ್ಯೂಸಿಕ್ ಸಂಸ್ಥೆಯು 50 ವರುಷಗಳ ಸಂತಸದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಹೊಸ್ತಿಲಲ್ಲಿ ಮತ್ತೊಂದು ಸಿಹಿ ಸುದ್ಧಿ.

ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  MRT ಸಂಸ್ಥೆಯಲ್ಲಿರುವ ಎಸ್ ಜಾನಕಿ ಅವರು ಹಾಡಿರುವ ಕಮಲದ ಮೊಗದೋಳೆ ಹಾಡಿಗೆ ಮನಸೋತು ತಮ್ಮ x ಖಾತೆಯಲ್ಲಿ ಹಂಚಿಕೊಂಡು ದೇಶದ ಜನತೆಗೆ ನವರಾತ್ರಿಯ ಶುಭಾಶಯವನ್ನು ಕೋರಿದ್ದಾರೆ.

ನಾಡು ನುಡಿ ಸಂಸ್ಕೃತಿ ಮತ್ತು ಕಲೆಗಳನ್ನು ,ಕಲಾವಿದರನ್ನೂ ಸದಾ ಪೋಷಿಸುತ್ತಿರುವ ಲಹರಿ MRT ಮ್ಯೂಸಿಕ್ ಸಂಸ್ಥೆಗೆ ದೇಶದ ಮಾನ್ಯ ಪ್ರಧಾನಿಯವರು ಗುರುತಿಸಿರುವುದು ಹಿರಿಮೆ.

ವಿಶ್ವಗುರು ಎಂದೇ ಪ್ರಖ್ಯಾತಿಯಾಗಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಮ್ಮ ಕನ್ನಡದ MRT Music ಸಂಸ್ಥೆಯ ಹಾಡನ್ನು ಮೆಚ್ಚಿ ಭಕ್ತಿಪೂರ್ವಕವಾದ ಸಂದೇಶವನ್ನು ಇಡೀ ದೇಶಕ್ಕೆ ನೀಡಿರುವುದು ನಮ್ಮ ಕನ್ನಡದ ಸಂಸ್ಥೆಗೆ ಹಾಗೂ ಕನ್ನಡದ ಜನತೆಯ ಹಿರಿಮೆ ಕೂಡ ಹೌದು.

ಲಹರಿ MRT ಮ್ಯೂಸಿಕ್ ಸಂಸ್ಥೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮೂಲಕ ನವರಾತ್ರಿಯ ಶುಭಾಶಯವನ್ನು ಕೋರುತ್ತಿದ್ದೇವೆ. ಎಂದು ಲಹರಿ ವೇಲು ಸಂತಸ ವ್ಯಕ್ತಪಡಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ