ಈ ಸೀರೆಗಳನ್ನು ಮುಖ್ಯವಾಗಿ ಉತ್ತರಪ್ರದೇಶದ ಚಂದೋಲಿ, ಬನಾರಸ್‌, ಜೌನಪುರ್‌, ಆಜಮ್ ಗಡ್‌, ಮಿರ್ಜಾಪುರ್‌, ಭದೋಹಿ, ಮುಬಾರಕ್‌ ಪುರ, ಖೈರಾಬಾದ್‌ನಲ್ಲಿ ತಯಾರಿಸಲಾಗುತ್ತದೆ. ಬನಾರಸಿ ಸೀರೆಗಳ ಉತ್ಪಾದನೆ ಈ ಪ್ರದೇಶದಲ್ಲಿ ವಾಸಿಸುವ ಜನರ ಆದಾಯದ ಪ್ರಮುಖ ಮೂಲವಾಗಿದೆ. ಈಗಲೂ ಭಾರಿ ದೊಡ್ಡ ಪ್ರಮಾಣದಲ್ಲಿ ಸೀರೆ ಖರೀದಿಸಲು ಜನರು ಬನಾರಸ್‌ಗೆ ಬರುತ್ತಾರೆ.

ಬನಾರಸಿ ಸೀರೆಗಳ ವಹಿವಾಟು ಅತ್ಯಂತ ಹಳೆಯದಾದುದು. ಆರಂಭದಲ್ಲಿ ಬನಾರಸ್‌ ಸೀರೆಗಳನ್ನು ಶುದ್ಧ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಉಪಯೋಗಿಸಿ ತಯಾರಿ ಸಾಗುತ್ತಿತ್ತು. ಅವನ್ನೇ `ಜರಿ' ಎಂದು ಹೇಳಲಾಗುತ್ತದೆ. ಬೆಲೆ ಏರಿಕೆಯ ಕಾರಣದಿಂದ ಶುದ್ಧ ಚಿನ್ನ ಹಾಗೂ ಬೆಳ್ಳಿಯ ಬದಲು ನಕಲಿ ಜರಿಯನ್ನು ಉಪಯೋಗಿಸಲಾಗುತ್ತದೆ. ಇವು ಅಷ್ಟೇನೂ ದುಬಾರಿಯಲ್ಲ. ರೇಷ್ಮೆ ನೂಲನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕೈಮಗ್ಗದ ಸ್ಥಾನವನ್ನು ಈಗ ಯಂತ್ರಗಳು ಪಡೆದುಕೊಂಡಿವೆ.

ಬನಾರಸಿ ಸೀರೆಗಳಲ್ಲಿ ಬೇರೆ ಬೇರೆ ತೆರನಾದ ಡಿಸೈನ್‌ಗಳ ಮಾದರಿಯನ್ನು ತಯಾರಿಸಲಾಗುತ್ತದೆ. ಬನಾರಸಿ ಸೀರೆಗಳ ಈ ಮೋಟಿಫ್‌ ಬಹಳ ಪ್ರಸಿದ್ಧವಾಗಿದೆ. ಇದನ್ನು ಬೇಲ್, ಬೂಟಿ, ಬೂಟಾ, ಕೋನಿಯಾ, ಜಾಲ್ ಆಂಚ್‌, ಜಂಗಾ ಮತ್ತು ಝೂಲರ್‌ನಂತಹ ಹೆಸರುಗಳಿಂದ ಕರೆಯಲಾಗುತ್ತದೆ. ಬನಾರಸಿ ಸೀರೆ ತಯಾರಿಸುವವರಲ್ಲಿ ಒಂದು ಹೆಸರು ಕಬೀರನದೂ ಕೂಡ ಆಗಿದೆ. ಕಬೀರ ಆ ಬಳಿಕ ಕವಿತೆ ರಚಿಸುವುದರಲ್ಲಿ ಹೆಸರುವಾಸಿಯಾದ. ಹೆಚ್ಚಿನ ಕುಶಲಕರ್ಮಿಗಳು ಮುಸ್ಲಿಂ ಸಮುದಾಯದ ಅನ್ಸಾರಿ ಪಂಗಡದಿಂದ ಬರುತ್ತಾರೆ. ಮೊದಲು ಮದುವೆಗಳಲ್ಲಿ ಬನಾರಸಿ ಸೀರೆಗಳನ್ನೇ ಕೊಡುವ ಪದ್ಧತಿ ಇತ್ತು. ಈಗಲೂ ಈ ಪರಂಪರೆ ಹಾಗೆಯೇ ಮುಂದುವರಿದಿದೆ. ಈಗ ಬನಾರಸಿ ಸೀರೆಗಳ ಜೊತೆ ಜೊತೆಗೆ ಬೇರೆ ಸೀರೆಗಳನ್ನು ಕೊಡಲಾಗುತ್ತದೆ.

SLSNN24A_big

ಫ್ಯಾಷನ್‌ ಡಿಸೈನರ್‌ಗಳು ಕೂಡ ಈಗ ಬನಾರಸಿ ಸೀರೆಗಳನ್ನು ಉಪಯೋಗಿಸಿಕೊಳ್ಳಲು ಆರಂಭಿಸಿದ್ದಾರೆ.

ಚಿತ್ರ ತಾರೆಯರ ಡಿಸೈನರ್‌ಗಳು ತಮ್ಮ ಚಿತ್ರಗಳಲ್ಲಿ ಇದನ್ನು ಉಪಯೋಗಿಸಿಕೊಳ್ಳಲು ಆರಂಭಿಸಿದ್ದಾರೆ. ಸಾಧಾರಣ ಸೀರೆಗಳಿಗೆ ಹೋಲಿಸಿದರೆ ಇದರ ಬೆಲೆ ಬಹಳ ಹೆಚ್ಚು. ನಕಲಿ ಜರಿಯಿಂದ ತಯಾರಿಸಿದ ರೇಷ್ಮೆ ಸೀರೆಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ.

ನಕಲಿ ಜರಿಯ ಕಾರಣದಿಂದಾಗಿ ಈಗ ಗ್ರಾಹಕರಿಗೆ ಅಸಲಿ ಬನಾರಸಿ ರೇಷ್ಮೆ ಸೀರೆಗಳ ಬಗೆಗಿನ ವಿಶ್ವಾಸವೇ ಹೊರಟುಹೋಗುತ್ತಿದೆ. ಈಗಲೂ ಗ್ರಾಹಕರು ಅಸಲಿ ಬನಾರಸಿ ಸೀರೆಗಳನ್ನೇ ಖರೀದಿಸಲು ಇಚ್ಛಿಸುತ್ತಾರೆ.

ಬನಾರಸಿ ಸೀರೆಗಳನ್ನು ತಯಾರಿಸಲು ಬೇರೆ ತೆರನಾದ ನೂಲನ್ನು ಬಳಸಲಾಗುತ್ತದೆ. ಮೊದಲು ಈ ಪ್ರಕಾರದ ನೂಲನ್ನೇ ಚೀನಾದಿಂದ ತರಿಸಿಕೊಳ್ಳಲಾಗುತ್ತಿತ್ತು. ಈಗ ಅದನ್ನು ಬೆಂಗಳೂರಿನಿಂದ ತರಿಸಲಾಗುತ್ತಿದೆ. ಈ ಸೀರೆಗಳನ್ನು ಯಂತ್ರೋಪಕರಣದಿಂದ ಮಾಡದೆ ಕೈಯಿಂದ ಫಿನಿಶಿಂಗ್‌ ಮಾಡಲಾಗುತ್ತದೆ. ಬನಾರಸಿ ಸೀರೆಗಳನ್ನು ವೈವಿಧ್ಯಮಯ ರೀತಿಯಲ್ಲಿ ತಯಾರಿಸಲಾಗುತ್ತದೆ. ಉದಾಹರಣೆಗೆ ಜಂಗ್‌ತನ ಜೋಡ್‌, ಲಾಸಕತ್‌, ಟೀಸೂ, ಬೂಟಿದಾರ್‌ ಮುಂತಾದ. ಇವನ್ನು ತಯಾರಿಸಲು ಹಲವು ಪ್ರಕಾರದ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಶುದ್ಧ ರೇಷ್ಮೆ ಆರ್ಗೆಂಜಾ ಜರಿ. ವಿಶೇಷ ಸಂಗತಿಯೆಂದರೆ, ಇದರಲ್ಲಿ ಬೆಳ್ಳಿ ಹಾಗೂ ಚಿನ್ನದ ಎಳೆಗಳಿಂದ ನೇಯ್ಗೆ ಮಾಡಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 5,800 ಎಳೆಗಳ ತಂತಿಗಳನ್ನು ಅವು 45 ಇಂಚು ಅಗಲ ಮತ್ತು 2428 ಮೀಟರ್‌ ಉದ್ದವಾಗಿರುತ್ತದೆ. ಇದನ್ನು ತಯಾರಿಸಲು 3 ಕುಶಲಕರ್ಮಿಗಳು 15 ದಿನದಷ್ಟು ಸಮಯ ತೆಗೆದುಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ