- 1. ವಸಂತ ಋತುವಿನಲ್ಲಿ ಯಾವ ಬಣ್ಣಗಳನ್ನು ವಾರ್ಡ್ ರೋಬ್‌ನಲ್ಲಿ ಉಳಿಸಿಕೊಂಡು, ಯಾವ ಬಣ್ಣಗಳನ್ನು ಕೈಬಿಡಬೇಕು?
ಈ ಸಂದರ್ಭದಲ್ಲಿ ನಿಯಾನ್ ಬಣ್ಣಗಳಿಗೆ ಬದಲಾಗಿ ಪೇಸ್ಟಲ್ ಮತ್ತು ವಿಂಟೇಜ್ ಕಲರ್ಸ್‌ನ್ನು ನಿಮ್ಮ ವಾರ್ಡ್ ರೋಬ್‌ಗೆ ಸೇರಿಸಿ.
- ಈ ಋತುವಿನಲ್ಲಿ ಟ್ರೆಂಡಿ ಲುಕ್ಸ್ ಗಾಗಿ ಒಂದಿಷ್ಟು ಸಲಹೆಗಳು....?
ಟ್ರೆಂಡಿಯಾಗಿ ಕಾಣಿಸಲು ಕಾಂಟ್ರಾಸ್ಟಿಂಗ್ ಸ್ಕರ್ಟ್ಸ್ ಮತ್ತು ಶೀಮರ್ ಪ್ಯಾಂಟ್ಸ್ ಜೊತೆ ನೀವು ಲಾಂಗ್ ಟ್ಯೂನಿಕ್ ಧರಿಸಬಹುದು. ಜೊತೆಗೆ ಪ್ಲೇಟೆಡ್ ನೀ ಲೆಂಥ್ ಸ್ಕರ್ಟ್ಸ್ ಸಹ ಈಗ ಟ್ರೆಂಡಿ ಎನಿಸಿವೆ.
- ಎಂಬ್ರಾಯಿಡರಿ ಎಂಬುದು ಆಲ್ ಟೈಂ ಫೇವರಿಟ್. ಇದನ್ನು ವಸಂತ ಋತುವಿನ ಫ್ಯಾಷನ್ ಆಗಿ ಅಳವಡಿಸಿಕೊಳ್ಳುವುದು ಹೇಗೆ? ಇದರಲ್ಲೇನಾದರೂ ಪ್ರತ್ಯೇಕ ಕಲರ್ ಕೋಡಿಂಗ್ ಇದೆಯೇ?
ಎಂಬ್ರಾಯಿಡರಿ ಲೈನಿಂಗ್ ಮತ್ತು ಪ್ರಿಂಟೆಡ್ ಶೀಮರ್ ಟಾಪ್ಸ್ ಮೂಲಕ ಎಂಬ್ರಾಯಿಡರಿಯನ್ನು ವಸಂತ ಋತುವಿನ ಪ್ರಧಾನ ಫ್ಯಾಷನ್ ಆಗಿ ಮಾಡಿಕೊಳ್ಳಬಹುದು. ಡಾರ್ಕ್ ಆರೆಂಜ್ ಮುಂದಿನ ದಿನಗಳಲ್ಲಿ ಫಾರ್ಮ್ ಕಲರ್ಸ್‌ನಲ್ಲಿ ಹೈಲೈಟ್ ಆಗಲಿದೆ. ಆದ್ದರಿಂದ ಯಾವುದೇ ಪ್ರಧಾನ ಇವೆಂಟ್ಸ್ ಇರಲಿ, ಅಲ್ಲಿ ಬ್ಲ್ಯಾಕ್ ಬದಲಾಗಿ ಆರೆಂಜ್ ಕಲರ್ ಟ್ರೈ ಮಾಡಿ ನೋಡಿ, ಇದು ಎಲ್ಲರಿಗೂ ಒಪ್ಪುತ್ತದೆ.
- ವಸಂತ ಋತುವಿನಲ್ಲಿ ವೆಸ್ಟರ್ನ್ ಲುಕ್ಸ್ ನ್ನು ಫ್ಯಾಷನೆಬಲ್ ಮಾಡಿಕೊಳ್ಳುವುದು ಹೇಗೆ?
ವೆಸ್ಟರ್ನ್ ಲುಕ್ಸ್ ನ್ನು ಈ ಋತುವಿನಲ್ಲಿ ಶಾಮೀಲುಗೊಳಿಸಲು, ಜಾರ್ಜೆಟ್ ಮತ್ತು ಶಿಫಾನಿನಂಥ ಫ್ಯಾಬ್ರಿಕ್ಸ್ ನ್ನು ಮ್ಯಾನ್ ಇನ್‌ಸ್ಪೈರ್ಡ್ ಶರ್ಟ್ ಮತ್ತು ಫ್ಲೇಯರ್ಡ್ ಪ್ಯಾಂಟ್ಸ್ ನಲ್ಲಿ ಬಳಸಿ, ಒಂದು ಆದರ್ಶ ನಮೂನೆಯಾಗಿ ಉಳಿಸಿಕೊಳ್ಳಬಹುದು.
- ವಸಂತ ಋತುವಿನಲ್ಲಿ ಎಂಥ ಆ್ಯಕ್ಸೆಸರೀಸ್‌ನ್ನು ಆರಿಸಿಕೊಳ್ಳಬೇಕು?
ಯೂನಿಕ್ ಮತ್ತು ಡೀಟೇಲ್ಡ್ ಕನ್‌ಸ್ಟ್ರಕ್ಷನ್‌ವುಳ್ಳ ಫುಟ್ ವೇರ್ ಮೇಲೆ ವಿಶೇಷ ಗಮನವಿರಲಿ. ಇದರ ಜೊತೆಯಲ್ಲೇ ಲೇಸ್, ಶೆಲ್ ಅಥವಾ ಪರ್ಲ್ ನಿಂದ ರೂಪುಗೊಂಡ ಡೆಲಿಕೇಟ್ ನೆಕ್ ಲೇಸ್ ತರಹದ ಆ್ಯಕ್ಸೆಸರೀಸ್ ನಿಮಗೆ ಪರ್ಫೆಕ್ಟ್ ಸ್ಪ್ರಿಂಗ್ ಲುಕ್ಸ್ ನೀಡುತ್ತವೆ.
- ವಸಂತ ಋತುವಿನ ಪ್ರಧಾನ ಮೇಕಪ್ ಮಂತ್ರ ಯಾವುದು?
ಮೇಕಪ್‌ಗಾಗಿ ಪೇಲ್ ಮಿನರಲ್ ಕಲರ್ಸ್ ಬಳಸಲು ಮರೆಯದಿರಿ. ಈಗ ಫ್ಯಾಷನ್ ಕುರಿತಾದ ನಿಮ್ಮ ಎಲ್ಲಾ ಸಮಸ್ಯೆ, ಸಂದೇಹಗಳಿಗೂ ಬಲು ಸಹಜವಾಗಿ ಪರಿಹಾರ ಪಡೆಯಬಹುದು. ಬಟ್ಟೆಗಳ ಸಂರಕ್ಷಣೆ, ಬಾಳಿಕೆಯಿಂದ ಹಿಡಿದು ಅವುಗಳ ಫ್ಯಾಬ್ರಿಕ್, ಕಲರ್, ಲೇಟೆಸ್ಟ್ ಸ್ಟೈಲ್ ಮತ್ತು ಫ್ಯಾಷನ್ ಕುರಿತಾದ ಯಾವುದೇ ಪ್ರಶ್ನೆಗಳನ್ನು ನಮಗೆ ಇಮೇಲ್ ಮೂಲಕ ಕಳುಹಿಸಿಕೊಡಿ. ನಿಮ್ಮ ಈ ಪ್ರಶ್ನೆಗಳಿಗೆ ನಮ್ಮ ಫ್ಯಾಷನ್ ಎಕ್ಸ್ ಪರ್ಟ್ಸ್ ಹಾಗೂ ಡಿಸೈನರ್ಸ್ ಪರಿಹಾರ ಒದಗಿಸುತ್ತಾರೆ.