ಸಿಲ್ವರ್‌ ಗ್ರೇ ಒಡಲಿನ ತುಂಬಾ ಹರಡಿರುವ ದೊಡ್ಡ ಗಾತ್ರದ ಬುಟ್ಟಾ ವಿನ್ಯಾಸ ಈ ಸೀರೆಯ ಪ್ರಧಾನ ವೈಶಿಷ್ಟ್ಯ. ಅಪ್ಪಟ ರೇಷ್ಮೆಯ ಅಂಚು ಮತ್ತು ಸೆರಗು ಕಂದು ಬಣ್ಣದಲ್ಲಿ ಮೂಡಿದ್ದು, ವಿನೂತನ ಡಿಸೈನ್ಸ್ ಹೊಂದಿವೆ. ಮ್ಯಾಚಿಂಗ್‌ ಬ್ಲೌಸ್‌ ಮತ್ತು ಗ್ರ್ಯಾಂಡ್‌ ಸೆರಗು ಈ ಸೀರೆಯ ಸೊಗಸು ಹೆಚ್ಚಿಸಿದೆ.

ganesh-082095a (1)

ರೇಷ್ಮೆ ಸೀರೆ ಅಂದರೆ ಹೀಗಿರಬೇಕು! ಎಂಥ ಒಡಲು…. ಏನು ಸೆರಗಿನ ವಿನ್ಯಾಸ! ಅಬ್ಬಬ್ಬಾ… ಗಾಢ ಕುಂಕುಮ ಒಡಲೆಲ್ಲ ಹರಡಿರಲು, ನೀಲಿ ನಕ್ಷತ್ರ ಬುಟ್ಟಾ ಜರಿಯ ವಿನ್ಯಾಸದ ಗೆಟಪ್‌ ಹಾಗೂ ಮುಖ್ಯವಾಗಿ ಆಕಾಶ ನೀಲಿಯ ಅದ್ಭುತ ಡಿಸೈನಿನ ಸೆರಗು ಅಂಚು ಈ ಸೀರೆಗೆ ಅಪೂರ್ವ ಕಳೆ ತಂದುಕೊಟ್ಟಿವೆ. ಯುಗಾದಿಯ ಶುಭಾಶಯಗಳು!

ganesh-082125

ಮೆರೂನ್‌ ಬಣ್ಣದ ಒಡಲಲ್ಲಿ ಅಲ್ಲಲ್ಲಿ ಹರಡಿದ ಗುಂಡಗಿನ ಜರಿಬುಟ್ಟಾಗಳು, ಗೋಲ್ಡನ್‌ ಸೆರಗು, ಅದರೊಳಗಿನ ಅದ್ಭುತ ವಿನ್ಯಾಸ ಹಾಗೂ ಮ್ಯಾಚಿಂಗ್‌ ಅಂಚಿನ ಡಿಸೈನ್‌ನಿಂದಾಗಿ ಈ ರೇಷ್ಮೆ ಸೀರೆ ಯುಗಾದಿಯ ಮೆರುಗು ಹೆಚ್ಚಿಸುತ್ತದೆ.

ganesh-082164 (1)

ಅಪ್ಪಟ ಮೆಜಂತಾ ವರ್ಣದ ಒಡಲಲ್ಲಿ ಸಮಾನಾಂತರ ರೇಖೆಗಳಾಗಿ ಹರಡಿದ ನಕ್ಷತ್ರ ವಿನ್ಯಾಸದ ಜರಿಬುಟ್ಟಾ, ಜ್ಯಾಮಿತಿಯ ವಿನ್ಯಾಸದ ಅಂಚು ಸೆರಗಿನಿಂದ ಈ ರೇಷ್ಮೆ ಸೀರೆ ಸಿಂಪ್ಲಿ ಸುಪರ್ಬ್‌ ಎನಿಸಿದೆ. ಬಾರ್ಡರ್‌ಗೆ ಮ್ಯಾಚಿಂಗ್‌ ಬ್ಲೌಸ್‌, ಸೂಕ್ತ ಆ್ಯಕ್ಸೆಸರೀಸ್‌ ಇವಳ ಸೌಂದರ್ಯ ಹೆಚ್ಚಿಸಿವೆ.

ganesh-082006

ದಟ್ಟ ಆಕಾಶ ನೀಲಿ ಬಣ್ಣದ ಒಡಲಿನಲ್ಲಿ ಅಲ್ಲಲ್ಲಿ ಹರಡಿದ ಅತ್ಯಾಧುನಿಕ ಜರಿ ವಿನ್ಯಾಸ, ರಿಚ್‌ ಗ್ರ್ಯಾಂಡ್‌ ಮೆರೂನ್‌ ಸೆರಗು ಹಾಗೂ ಬ್ಯೂಟಿಫುಲ್ ಬಾರ್ಡರ್‌ನಿಂದಾಗಿ ಹಬ್ಬದ ಸಡಗರ ಹೆಚ್ಚಿಸುವಲ್ಲಿ ಪೂರಕವಾಗಿದೆ. ಸೆರಗಿಗೆ ಹೊಂದುವ ಬ್ಲೌಸ್‌ ಇವಳ ಗೆಟಪ್‌ ವರ್ಧಿಸಿದೆ. ಯುಗಾದಿಯ ಶುಭಾಶಯ ಕೋರಲು ಇನ್ನಿದಕ್ಕಿಂತ ಬೇಕೇ? ಬೇವು ಬೆಲ್ಲ ಹಂಚಲು ಇದು ಸುಸಂದರ್ಭ ಅಲ್ಲವೇ?

ganesh-082013 (1)

ಗೋಲ್ಡನ್‌ ಬಿಸ್ಕೆಟ್‌ ಬಣ್ಣದ ಒಡಲಿನ ತುಂಬಾ ಹರಡಿರುವ ಮೆರೂನ್‌ ನಕ್ಷತ್ರ ವಿನ್ಯಾಸ, ಅದಕ್ಕೆ ಹೊಂದುವಂತೆ ಪ್ಯಾರಲ್‌ ಲೈನ್ಸ್ ನ ಬಾರ್ಡರ್‌ ಮತ್ತು ಅತ್ಯಾಕರ್ಷಕ ಸೆರಗಿನ ವಿನ್ಯಾಸ ಈ ಸೀರೆಗೆ ವಿನೂತನ ಟಚ್‌ ನೀಡಿವೆ. ಬಲಭಾಗಕ್ಕೆ ಹೊದ್ದ ಸೆರಗು, ಎಡಭಾಗದಿಂದ ಇಳಿಬಿಟ್ಟಿರುವುದು ಹೊಸ ಗೆಟಪ್‌ ಆಗಿದೆ. ಹೋಳಿಗೆ ಹಂಚಲು ನೀವು ಸಿದ್ಧರಾಗಿ, ಹ್ಯಾಪಿ ಯುಗಾದಿ!

ಫೋಟೋ ಕೃಪೆ : ಸಿಲ್ಕ್ ಮಾರ್ಕ್‌, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಬೆಂಗಳೂರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ