ಲಖ್ನೌನ ಈ ಕಲೆ ಮೊಘಲರ ಕಾಲದಿಂದಲೇ ವಿಕಾಸಗೊಂಡಿತು. ಮುಂದೆ ಆಂಗ್ಲರ ಕಾಲದಲ್ಲಿ ಇದು ಇನ್ನಷ್ಟು ಎತ್ತರಕ್ಕೇರಿ ಬಿಳಿಯರ ಮೇಡಂಗೆ ಬಲು ಇಷ್ಟವಾಯಿತು. ಆ ರೀತಿ ಈ ಕಲೆ ಯೂರೋಪ್‌ ಹಾಗೂ ಇತರ ಖಂಡಗಳನ್ನೂ ತಲುಪಿತು.

ಭಾರತದಲ್ಲಿ ಬಾಲಿವುಡ್‌ ಮೂಲಕ ಫ್ಯಾಷನ್‌ ಜನಸಾಮಾನ್ಯರನ್ನೂ ತಲುಪತೊಡಗಿದಾಗ, ಚಿಕನ್‌ಕಾರಿ ಬೆಳ್ಳಿ ಪರದೆಯ ಮೇಲೆ ಇನ್ನಷ್ಟು ರಾರಾಜಿಸತೊಡಗಿತು. ಪಾಕೀಜಾ, ಉಮ್ರಾಲ್ ‌ಜಾನ್‌, ಜುಬೇದಾ, ಮೊಘಲ್ ಆಜಂ, ಹಂ ಸಾಥ್‌ ಸಾಥ್‌ ಹೈ, ಕಭೀ ಖುಷಿ ಕಭೀ ಗಂ ಇತ್ಯಾದಿಗಳಲ್ಲಿ ಈ ಕಸೂತಿಯ ವೈಭವ ಎದ್ದುಕಾಣುತ್ತದೆ. ಇಂದಿನ ಲೇಟೆಸ್ಟ್ ಫ್ಯಾಷನ್‌ ಗಮನಿಸಿದರೆ ಇದು ಉತ್ತುಂಗಕ್ಕೇರಿರುವುದು ತಿಳಿಯುತ್ತದೆ. ದೇಶೀವಿದೇಶೀ ಡಿಸೈನ್‌ಗಳಲ್ಲಿ ಚಿಕನ್‌ಕಾರಿ ಬಳಸಲ್ಪಡುತ್ತಿದೆ.

ಇದರ ಇತಿಹಾಸ ಬಹಳ ಹಳೆಯದು. ಮೊಘಲ್ ಚಕ್ರವರ್ತಿ ಜಹಾಂಗೀರ್‌ನ ರಾಣಿ ನೂರ್‌ ಜಹಾನ್‌ಳಿಗೆ ಚಿಕನ್‌ಕಾರಿ ಕಸೂತಿ ಬಲು ಅಚ್ಚುಮೆಚ್ಚು. ಆಕೆ ಇದನ್ನು ಇರಾನಿನಿಂದ ಕಲಿತು ಬಂದಿದ್ದಳಂತೆ. ಇದಾದ ನಂತರ ಮೊಘಲರ ಕಾಲದ ಆಡಳಿತದಲ್ಲಿ, ಗೋಡೆಗಳ ಮೇಲೆ ಬಿಡಿಸಾಲಾಗಿದ್ದ ಚಿತ್ತಾರಗಳಲ್ಲೂ ಇದು ಮೆರೆಯಿತು. ಅಲ್ಲಿಂದ ಮುಂದೆ ಅದು ಕಸೀದಾಕಾರಿ ಮಾಧ್ಯಮದ ಮೂಲಕ ಜನಸಾಮಾನ್ಯರ ಉಡುಗೆಗಳಲ್ಲಿ ನಲಿಯಿತು. ನೂರ್‌ ಜಹಾನ್‌ಳ ಒಬ್ಬ ಸೇವಕಿ ದೆಹಲಿಯಿಂದ ಲಖ್ನೌಗೆ ಬಂದು ಇದನ್ನು ಅಲ್ಲಿ ಪ್ರಚಾರಪಡಿಸಿದಳಂತೆ. ಜಹಾಂಗೀರ್‌ ನಂತರ ದೆಹಲಿಯಲ್ಲಿ ಚಿಕನ್‌ಕಾರಿ ಕಸೂತಿ ಕ್ರಮೇಣ ನಶಿಸತೊಡಗಿತು. ಮುಂದೆ ಇದು ಲಖ್ನೌನ ನವಾಬರ ಕೃಪಾಕಟಾಕ್ಷ ಪಡೆದು, ಅಲ್ಲಿ ಚಿಗುರತೊಡಗಿತು. ನಂತರ ಅದು ಲಖ್ನೌ ಮೂಲದ್ದು ಎಂಬಂತೆ ವಿಸ್ತೃತವಾಗಿ ಅಲ್ಲಿಂದ ಎಲ್ಲೆಡೆ ಹರಡತೊಡಗಿತು. ಈ ಶಬ್ದದ ಮೂಲ ಫಾರ್ಸಿ ಭಾಷೆಯ `ಚಕಿನ್‌' ಆಗಿದೆ. ಚಕಿನ್‌ ಎಂದರೆ ಕಸೀದಾಕಾರಿ ಅಥವಾ ಹೂಬಳ್ಳಿಗಳ ವಿನ್ಯಾಸದ ಕಸೂತಿ.

ಈ ಕಲೆಯಲ್ಲಿ ಸೂಜಿದಾರದ ನೆರವಿನಿಂದ ಅತಿ ನುಣುಪಾದ ನೂಲಿನ ಎಳೆಗಳ ಉಡುಗೆಯ ಮೇಲೆ ವಿಭಿನ್ನ ಡಿಸೈನ್ಸ್ ಬಿಡಿಸುವುದಾಗಿದೆ. ಇದನ್ನು ಶೇ.95ರಷ್ಟು ಮಹಿಳೆಯರೇ ರೂಪಿಸುತ್ತಾರೆ. ಇದರ ನೆರವಿನಿಂದ ಸೀರೆ, ಸಲ್ವಾರ್‌ ಸೂಟ್‌, ಕುರ್ತಾ, ಅಂಗವಸ್ತ್ರಗಳು, ಟೋಪಿ ಮುಂತಾದ ಅನೇಕ ಉಡುಗೆಗಳು ಸುಂದರವಾಗಿ ಕಸೂತಿಗೊಳ್ಳುತ್ತವೆ. ಬದಲಾಗುತ್ತಿರುವ ಫ್ಯಾಷನ್‌ಗೆ ತಕ್ಕಂತೆ ಕೈಗಳಿಗೆ ಬದಲಾಗಿ ಯಂತ್ರಗಳ ನೆರವಿನಿಂದಲೂ ಕಸೂತಿ ರೂಪುಗೊಳ್ಳುತ್ತದೆ. ಆದರೆ ಕಸೂತಿಯ ನಿಜವಾದ ಸೊಗಡಿರುವುದು ಕೈಗಳಿಂದಲೇ ಅದನ್ನು ವಿನ್ಯಾಸಗೊಳಿಸಿದಾಗ ಮಾತ್ರ ಎಂದು ಬಲ್ಲವರು ಹೇಳುತ್ತಾರೆ. ಈಗಂತೂ ಈ ಕಲೆ ಒಂದು ಬೃಹತ್‌ ಲಘು ಉದ್ಯಮವಾಗಿ ಬೆಳೆದುಬಿಟ್ಟಿದೆ. ಇದು ಲಖ್ನೌ ಮಾತ್ರವಲ್ಲದೆ, ಅದರ ಸುತ್ತಮುತ್ತಲಿನ ನಗರಗಳಲ್ಲೂ ತಯಾರಾಗುತ್ತಿದೆ.

ಚಿಕನ್‌ಕಾರಿಯ ಕುಶಲ ಕರ್ಮಿಗಳ ಸಂಸ್ಥೆ `ಹುನರ್‌'ನ್ನು ನಡೆಸುವ ಯಾಸ್ಮೀನ್‌ ನಬೀ ಹೇಳುತ್ತಾರೆ, `ಈ ಕಲೆಯಲ್ಲಿ 40ಕ್ಕೂ ಮಿಗಿಲಾದ ವಿನ್ಯಾಸಗಳನ್ನು ಬಿಡಿಸಬಹುದು. ಇದು ಟೇಪ್ಚಿ, ಬಖಿಯಾ, ಹೂವು, ಜಂಜೀರಾ, ರಾಹತ್‌, ಬನಾರ್ಸಿ, ಖಟಾ, ಫಂದಾ, ಜಾಲಿ, ಜರ್ದೋಜಿ, ಮುರ್ರೆ ಇತ್ಯಾದಿಗಳ ಹೆಸರಿನಲ್ಲಿ ಜನಪ್ರಿಯಗೊಂಡಿದೆ.'

ಲಖ್ನೌನಲ್ಲಿ ಇದೊಂದು ದೊಡ್ಡ ಉದ್ಯಮವಾಗಿದೆ. ಇದು ಚಾರ್‌ ಬಾಗ್‌ನ ರೈಲ್ವೆ ಸ್ಟೇಷನ್ನಿನ ಬಳಿಯ ಗುರುನಾನಕ್‌ ಮಾರ್ಕೆಟ್‌ನಿಂದ ಶುರುವಾಗಿ ಅಮೀನಾಬಾದ್‌, ಚೌಕ್‌, ನಕ್ಕಾಸ್‌, ನಝೀರಾಬಾದ್‌, ಮಹಾನಗರ್‌, ಭೂತನಾಥ್‌, ಹಝರತ್‌ ಗಂಜ್‌ವರೆಗಿನ ಮಾರ್ಕೆಟ್‌ವರೆಗೂ ವಿಶಾಲವಾಗಿ ಹರಡಿಕೊಂಡಿದೆ. ಹ್ಯಾಂಡಿ ಕ್ರಾಫ್ಟ್ ಡಿಸೈನರ್‌ ಶ್ರದ್ಧಾ ಸಕ್ಸೇನಾ ಹೇಳುತ್ತಾರೆ, `ಚಿಕನ್‌ಕಾರಿ ನಿಜಕ್ಕೂ ಅದ್ಭುತ ಕಲೆ. ಇದರಿಂದ ಡ್ರೆಸ್‌ ಡಿಸೈನ್‌ ಮಾಡಲು ಸರ್ವ ಸೌಲಭ್ಯಗಳೂ ಇವೆ.  ಲಖ್ನೌನಲ್ಲಂತೂ ಭಾರಿ ಬಿಸ್‌ನೆಸ್‌ವುಮೆನ್‌ ಇದ್ದಾರೆ, ಇವರು ಈ ಕಸೂತಿಯ ಉಡುಗೆಗಳನ್ನು ವಿದೇಶಗಳಿಗೆ ರಫ್ತು ಮಾಡಿ, ಭಾರಿ ಮೊತ್ತದ ಲಾಭ ಗಳಿಸುತ್ತಾರೆ. ವಿಶ್ವದ ಅತ್ಯುತ್ತಮ ಚಿಕನ್‌ಕಾರಿ ಕಸೂತಿಗಾಗಿ ನೀವು ಲಖ್ನೌಗೆ ಹೋಗಬೇಕಾಗುತ್ತದೆ. ಜೊತೆಗೆ ಇದು ವಿಶ್ವದ `ದಿ ಬೆಸ್ಟ್' ಎಂಬ್ರಾಯಿಡರಿ ಎನಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ