ಆಧುನಿಕ ತರುಣಿಯರು ಲಾಂಗ್ ಸ್ಕರ್ಟ್ ಜೊತೆಗೆ ಫ್ಲೇರ್ಸ್ ಪ್ರಿಂಟ್ಸ್ ಧರಿಸಬೇಕು. ವ್ಯಾಯಾಮಕ್ಕಾಗಿ ಅದರ ಜೊತೆಗೆ ಮ್ಯಾಚಿಂಗ್ ಬೆಲ್ಟ್, ಬ್ಯಾಗ್, ಶೂಸ್ ಇರಬೇಕು.
ಸ್ಪ್ರಿಂಗ್ ಫ್ಯಾಷನ್‌ಗಾಗಿ ಎಂಥ ಕಲರ್ಸ್ ಫ್ಯಾಬ್ರಿಕ್ಸ್ ಉತ್ತಮ ಎನಿಸುತ್ತದೆ?
ನೀವು ಡೆನಿಮ್ ಜೊತೆಗೆ ಯಾವುದೇ ಫ್ಯೂಷನ್ ಕಲರ್ಸ್ ಅಥವಾ ಆರ್ಗ್ಯಾನಿಕ್ ಧರಿಸುವುದು ಲೇಸು. ನಮ್ಮ ಭಾರತದಲ್ಲೇ ತಯಾರಾದಂಥ ಹಾಗೂ ಕಲರಿಂಗ್‌ಗೊಳಿಸಿದ ಉಡುಗೆ ಧರಿಸಿ. ನಿಮ್ಮ ಆಯ್ಕೆಗೆ ತಕ್ಕಂಥ ಬೇಕಾದಷ್ಟು ಬಣ್ಣಗಳಿವೆ, ನಿಮ್ಮ ಮನಸ್ಸಿಗೆ ಒಪ್ಪಿದ್ದನ್ನು ಆರಿಸಿಕೊಳ್ಳಿ.
ಟ್ರೆಂಡ್ ಜೊತೆ ಉಳಿದುಕೊಳ್ಳಲು ನಾವು ಏನು ಮಾಡಬೇಕು?
ನೀವು ನಿಯಮಿತ ವ್ಯಾಯಾಮಗಳನ್ನು ಎಂದೂ ಅಲಕ್ಷಿಸದಿರಿ, ಏಕೆಂದರೆ ಶಾರ್ಟ್ ಟಾಪ್ ಈಗ ಅತ್ಯಧಿಕ ಫ್ಯಾಷನ್ ಎನಿಸಿದೆ. ನಿಯಮಿತ ವ್ಯಾಯಾಮ, ಆಟೋಟಗಳಿಂದ ನಿಮ್ಮ ಹೊಟ್ಟೆ ಉಬ್ಬಿದಂತೆ ಕಾಣಿಸುವುದಿಲ್ಲ. ಹಾಟ್ ಎನಿಸಲು ಶಾರ್ಟ್ ಟಾಪ್ ಜೊತೆ ಲೈಟ್ ಬ್ಲೇಝರ್ ಮತ್ತು ಹಾಟ್ ಪೆನ್ಸಿಲ್ ಸ್ಕರ್ಟ್ ಧರಿಸಿರಿ ಅಥವಾ ಹೈ ವೇಯ್ಟ್ಸ್ನ ಶಾರ್ಟ್ಸ್ ಸಹ ಧರಿಸಬಹುದು.
ಕ್ಯಾಶ್ಯುಯಲ್ ಸ್ಪ್ರಿಂಗ್ ಲುಕ್ಸ್ ಹೇಗಿರಬೇಕು?
ಮುಲೆಟ್ ಸ್ಕರ್ಟ್ ನಿಮಗೆ ಅಲ್ಟ್ರಾ ಫೆಮಿನಾ ಲುಕ್ಸ್ ನೀಡುತ್ತವೆ. ಇದು ಬೇಸಿಗೆಯ ಸೀಸನ್‌ಗೆ ಚೆನ್ನಾಗಿ ಒಪ್ಪುತ್ತದೆ. ಟಾರ್ಟನ್ ಸ್ಕರ್ಟ್ (ಚೆಕ್ಸ್ ಉಳ್ಳದ್ದು) ನಿಮಗೆ ಕ್ಯಾಶ್ಯುಯಲ್ ಲುಕ್ಸ್ ನೀಡುತ್ತವೆ.
ಆರ್ಗ್ಯಾನಿಕ್ ಇಂಡಿಯನ್ ಲುಕ್ಸ್ ಗಾಗಿ ಏನನ್ನು ಧರಿಸೇಕು?
ಎಲಿಗೆಂಟ್ ಕುರ್ತಾ ದುಪಟ್ಟಾ ಜೊತೆ ಸೂಕ್ತ ಆ್ಯಕ್ಸೆಸರೀಸ್ ಧರಿಸಿ. ಇದು ಪ್ರಿಂಟೆಡ್ ಅಥವಾ ಎಂಬ್ರಾಯಿಡರ್ಡ್ ಆಗಬಹುದು. ಇತ್ತೀಚೆಗೆ ಬ್ಲ್ಯಾಕ್& ವೈಟ್‌ನ ಬಹಳ ಪವರ್ ಫುಲ್ ಸ್ಟೈಲ್ ಟ್ರೆಂಡ್‌ನಲ್ಲಿದೆ. ನೀವು ಪೇಸ್ಟ್ ಕಲರ್‌ನ್ನು ಪಿಂಕ್ ಆರೆಂಜ್ ಅಥವಾ ರೆಡ್ ಕಲರ್ ಜೊತೆ ಮಿರ್ಸ್ ಮಾಡಿ ಧರಿಸಬಹುದು, ಇದು ನಿಮಗೆ ಟ್ರೆಂಡಿ ಲುಕ್ಸ್ ನೀಡುತ್ತದೆ.
ಈಗ ಫ್ಯಾಷನ್ ಕುರಿತಾದ ನಿಮ್ಮ ಎಲ್ಲಾ ಸಮಸ್ಯೆ, ಸಂದೇಹಗಳಿಗೂ ಬಲು ಸಹಜವಾಗಿ ಪರಿಹಾರ ಪಡೆಯಬಹುದು. ಬಟ್ಟೆಗಳ ಸಂರಕ್ಷಣೆ, ಬಾಳಿಕೆಯಿಂದ ಹಿಡಿದು ಅವುಗಳ ಫ್ಯಾಬ್ರಿಕ್, ಕಲರ್, ಲೇಟೆಸ್ಟ್ ಸ್ಟೈಲ್ ಮತ್ತು ಫ್ಯಾಷನ್ ಕುರಿತಾದ ಯಾವುದೇ ಪ್ರಶ್ನೆಗಳನ್ನು ನಮಗೆ ಇಮೇಲ್ ಮೂಲಕ ಕಳುಹಿಸಿಕೊಡಿ. ನಿಮ್ಮ ಈ ಪ್ರಶ್ನೆಗಳಿಗೆ ನಮ್ಮ ಫ್ಯಾಷನ್ ಎಕ್ಸ್ ಪರ್ಟ್ಸ್ ಹಾಗೂ ಡಿಸೈನರ್ಸ್ ಪರಿಹಾರ ಒದಗಿಸುತ್ತಾರೆ.