ಸೀಕ್ವೆನ್ಸ್ ವರ್ಕ್‌, ಕಲರ್‌ಫುಲ್ ಸ್ಟೋನ್ಸ್, ಮುತ್ತುಗಳಿಂದ ಸಿಂಗರಿಸಲ್ಪಟ್ಟ ಬ್ಲೂ ಪಿಂಕ್‌ ಕಾಂಬಿನೇಷನ್ನಿನ ಈ ಗ್ಲಾಮರಸ್‌ ಫುಲ್ ಸ್ಲೀವ್ ‌ಕುರ್ತಾ ಹಾಗೂ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಇವಳನ್ನು ನ್ಯೂ ಇಯರ್‌ ಪಾರ್ಟಿಯ ವಿ.ಐ.ಪಿ. ಆಗಿಸಿದೆ.

ಸೂಪರ್ಬ್‌ ಸ್ಟೈಲಿಶ್‌, ಶೋಲ್ಡರ್‌ ಲೆಸ್‌, ಆಫ್‌ ವೈಟ್‌ ಮಿಡಿ, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ನಿಂದ ಇವಳ ಮಾದಕ ಚೆಲುವು ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಈ ಪಿಂಕ್‌ ಬಣ್ಣದ ಸ್ಮಾರ್ಟ್‌ ಲಾಂಗ್‌ ಶರ್ಟ್‌ನ ಆಕರ್ಷಣೆ ಇರುವುದೇ ಅದರ ಸ್ಟೈಲಿಶ್‌ ಬಟನ್‌ಗಳಲ್ಲಿ. ರಿಸ್ಟ್ ವಾಚ್‌ ಮತ್ತು ಕಾಂಟ್ರಾಸ್ಟ್ ಹ್ಯಾಂಡ್‌ ಬ್ಯಾಗ್‌ ಈ ಉಡುಗೆಗೆ ಪೂರಕ ಆ್ಯಕ್ಸೆಸರೀಸ್‌ ಆಗಿವೆ.

Fashion-3 (1)

ಹೊಸ ವರ್ಷದ ಸೀದಾಸಾದಾ ಕ್ಯಾಶ್ಯುಯಲ್ ವೇರ್‌. ಈ ಫ್ಯಾಷನೆಬಲ್ ಸ್ವಿಲರ್‌ ಗ್ರೇ ಸ್ಲೀವ್ ಲೆಸ್ ಡ್ರೆಸ್‌ ತನ್ನ ವಂಡರ್‌ ಫುಲ್ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ನಿಂದಾಗಿ ಸರಳವಾಗಿದ್ದರೂ, ನಾಲ್ವರಲ್ಲಿ ಎದ್ದುಕಾಣುವಂತಿದೆ. ದಿನವಿಡೀ ಕ್ಯಾಶ್ಯುಯಲ್ ಓಡಾಟಕ್ಕೆ ಹೆಚ್ಚು ಹಿತಕಾರಿ.

Fashion-1

ಪ್ಲೇವರ್‌ ಪ್ರಿಂಟೆಡ್‌, ಹಾಲ್ಟರ್‌ ನೆಕ್‌ವುಳ್ಳ ಈ ಬ್ಯೂಟಿಫುಲ್ ಮಲ್ಟಿ ಕಲರ್ಡ್‌ ಹಾಟ್‌ ಡ್ರೆಸ್‌, ಪೂರಕ ರಂಗುರಂಗಿನ ಆ್ಯಕ್ಸೆಸರೀಸ್‌ನಿಂದಾಗಿ ಇವಳ ಚೆಲುವು ಕಣ್ಣು ಕುಕ್ಕುವಂತಿದೆ!

ಡೈಮಂಡ್ಸ್ ಫಾರ್‌ ಎವರ್‌!

ವಜ್ರ ಹುದುಗಿಸಲಾದ ಈ ಪ್ಲಾಟಿನಂ ಒಡವೆಗಳನ್ನು ವರ್ಣಿಸಲು ಸಾಧ್ಯವೇ? ಈ ಲೇಟೆಸ್ಟ್ ಸ್ಟೈಲಿಶ್‌ ಓಲೆ, ಪೆಂಡೆಂಟ್‌, ಬ್ರೇಸ್‌ ಲೆಟ್ಸ್ ಇತ್ಯಾದಿಗಳನ್ನು ಧರಿಸಿದಾಗ ನವ ವಧು ಸ್ವರ್ಣಗೌರಿಯಾಗಿ ಕಂಗೊಳಿಸುತ್ತಾಳೆ. ಇಂಥ ವಜ್ರಾಭರಣಗಳನ್ನು ಧರಿಸಿದವಳ ಬಾಳು ಬಂಗಾರವಾಗಿರಲೆಂಬುದು ಮದುವೆಗೆ ಬಂದವರ ಹಾರೈಕೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ