ರಾಜ್ ಘರಾನಾ ಕಾಂಚೀಪುರಂ ಸಿಲ್ಕ್ ಸೀರೆಗಳ ಶ್ರೇಣಿಯ ಈ ಬೇಜ್ ವಿತ್ ರೆಡ್ ಬಾರ್ಡರ್ ಸೀರೆ, ತನ್ನ ಮೆಟಾಲಿಕ್ ಥ್ರೆಡ್ ಕಸೂತಿ ಹಾಗೂ ಬ್ರೊಕೇಡ್ ಪ್ಯಾಟರ್ನ್ ನ ಒಡಲಿನಿಂದ ಎದ್ದು ಕಾಣುತ್ತಿದೆ. ಅಂಚಿನ ವಿನ್ಯಾಸಕ್ಕೆ ಹೊಂದುವ ಕಡು ಕೆಂಪಿನ ಬ್ಲೌಸ್ ಹೆಚ್ಚು ಒಪ್ಪುವಂತಿದೆ. ಜರಿಯಂಚಿನ ಸಾಂಪ್ರದಾಯಿಕ ಶೈಲಿ, ಇಡೀ ಸೀರೆಯ ವಿನ್ಯಾಸಕ್ಕೆ ಕಳಶಪ್ರಾಯವಾಗಿದೆ!
ಗೋಲ್ಡ್ ರೆಡ್ ವಿತ್ ಕ್ರೀಮ್ ಬ್ಲೆಂಡ್ ನ ಈ ಕಾಂಜೀವರಂ ಸಿಲ್ಕ್ ಸೀರೆ, ತನ್ನ ಅಪ್ಪಟ ಕ್ರೀಮ್ ರೆಡ್ ನೆಸ್ ನಿಂದ ಒಡಲೆಲ್ಲ ಹರಡಿ ಮಿಂಚುತ್ತಿದೆ! ಪ್ಲೇರ್‌ನೇಚರ್ ಇನ್ ಸ್ಪೈರ್ಡ್ ಆದ ಈ ಸೀರೆ, ಸೆರಗಿನಲ್ಲಿ ಮೋಟಿಫ್ಸ್ ನ ಅಬ್ ಸ್ಟ್ರಾಕ್ಟ್ ಪ್ಯಾಟರ್ನ್ಸ್ ನಿಂದ ಕಳೆಗೊಂಡಿದೆ. ಗೋಲ್ಡ್ ಸಿಲ್ವರ್ ನ ಜರಿಯಂಚು, ಡಿಸೈನರ್ ಟೈಪ್ ಬ್ಲೌಸ್ ಸೀರೆಗೆ ರಾಜಕಳೆ ತಂದಿದೆ!

ಗೋಲ್ಡನ್ ಕಲರ್ ಪ್ಯಾಟರ್ನ್ ನಲ್ಲಿ ಪಿಂಕ್ ಶೇಡ್ಸ್ ಹೊಂದಿರುವ ರಾಜ್ ಘರಾನಾ ಬ್ರೈಡಲ್ ಕಲೆಕ್ಷನ್ನಿನ ಈ ಕಾಂಚೀಪುರಂ ಸೀರೆ, ತನ್ನ ಜರಿಯೊಡಲಿನ ಅದ್ಭುತ ವರ್ಕ್ ನಿಂದ, ಗೋಲ್ಡನ್ ಜರಿಯ ಸೆರಗಿನಿಂದ, ಡಿಸೈನರ್ ಪ್ಯಾಟರ್ನ್ ಬ್ಲೌಸ್ ನ್ನು ಒಳಗೊಂಡು, ಅಂಚಿನಲ್ಲಿ ಪ್ಲೇರ್ ಮೋಟಿಪ್ಸ್ ಹೊಂದಿದೆ. ಹಬ್ಬಕ್ಕೆ ಇಷ್ಟು ರಿಚ್ ಗ್ರಾಂಡ್ ಇದ್ದರೆ ಸಾಕಲ್ಲವೇ?
ಗೋಲ್ಡನ್ ಜರಿ ಫ್ಯಾಬ್ರಿಕ್ ನ ರೂಬಿ ಪಿಂಕ್ ಬಣ್ಣದ ಒಡಲುಳ್ಳ ಈ ಅದ್ಭುತ ಸೀರೆ, ಗೋಲ್ಡನ್ ಜರಿ ಬಾರ್ಡರ್ ಸ್ಟ್ರೈಪ್ಸ್ ಹೊಂದಿದೆ. ಬ್ರೊಕೇಡ್ ಟೈಪ್ ನ ಬ್ಲೌಸ್ ಜೊತೆಗೂಡಿ ಮಿರಿಮಿರಿ ಮಿಂಚುತಿದೆ! ಇಂಥ ಬೆಡಗಿನ ಸೀರೆಯುಟ್ಟು ಬೇವುಬೆಲ್ಲ ಹಂಚಲು ಹೊರಟರೆ ಯಾರು ತಾನೇ ಸುಸ್ವಾಗತ ಕೋರುವುದಿಲ್ಲ?

ವೈಬ್ರೆಂಟ್ ರೆಡ್‌ರಿಚ್ ಗೋಲ್ಡ್ ನ ಈ ಮೋಸ್ಟ್ ಬ್ಯೂಟಿಫುಲ್ ಕಾಂಚಿಪುರಂ ಸೀರೆ, ಪ್ಲೇರ್ ಪ್ಯಾಟರ್ನಿನ ಒಡಲನ್ನು ಹೊಂದಿದ್ದು, ಸ್ಟೈಲಿಶ್ ಪ್ಲೇರ್ ಯಾ ಲೀಫೀ ಪ್ಯಾಟರ್ನಿನ ಬ್ಲೌಸ್ ನೊಂದಿಗೆ ಜೊತೆಗೂಡಿ, ಕಣ್ಣು ಕುಕ್ಕುವಂತಿದೆ! ಇಂಥ ಸೀರೆಯುಟ್ಟು ಹಸನ್ಮುಖರಾಗಿ, ಬಂದ ಅತಿಥಿಗಳಿಗೆ ಯುಗಾದಿಯ ಹೋಳಿಗೆ ಬಡಿಸಲು ನೀವು ರೆಡಿಯೇ?
ರಾಜ್ ಘರಾನಾ ಕಾಂಜೀವರಂ ಗೋಲ್ಡನ್ ಸಿಲ್ಕ್ ಫ್ಯಾಬ್ರಿಕ್ ನ, ಟ್ರೆಡಿಶನಲ್ ಮಾಡರ್ನ್ ಆರ್ಟಿಸ್ಟ್ರಿ ಹೊಂದಿದ ಈ ಪ್ಲೇನ್ ಕ್ರೀಮ್ ಬಣ್ಣದ ಸೀರೆ, ತನ್ನ ಡಿಸೈನರ್ ಬ್ರೊಕೇಡ್ ಬ್ಲೌಸ್ ನಿಂದ, ಟ್ರೆಡಿಶನಲ್ ಇಂಡಿಯನ್ ಮೋಟಿಫ್ಸ್ ನ ಬಾರ್ಡರ್ ಜೊತೆಗೂಡಿ, ಇದನ್ನುಟ್ಟವಳು ಕ್ಷೀರಕನ್ನಿಕೆಯಂತೆ ಕಂಗೊಳಿಸಲು, `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....' ಹಾಡು ಮತ್ತೆ ಮತ್ತೆ ಕೇಳಿ ಬರುವಂತಿದೆ!
- ಫೋಟೋ ಕೃಪೆ : ಕಲ್ಯಾಣ್ ಸಿಲ್ಕ್ಸ್





