ನಿಮಗೆ ಎಲ್ಲರಿಗಿಂತ ಡಿಫರೆಂಟ್‌ಸೆಕ್ಸಿ ಅಪೀಲ್ ‌ಗಳಿಸಬೇಕೆಂಬ ಇರಾದೆ ಇದ್ದರೆ, ಎಲ್ಲರ ಗಮನ ನಿಮ್ಮತ್ತಲೇ ಕೇಂದ್ರೀಕೃತವಾಗಿರಬೇಕೆಂದು ಬಯಸಿದರೆ, ನೀವು ಹಾಟ್‌ ಹಾಟ್‌ ಎನಿಸುವಂಥ ಲುಕ್ಸ್ ಗಳಿಸಬೇಕಾಗುತ್ತದೆ. ಯಾವ ತರಹ ಗ್ಲಾಮರಸ್‌ ಗಾರ್ಜಿಯಸ್‌ ಹಾಟ್‌ ಎನಿಸಬಹುದೆಂದು ಈ ಸಲಹೆಗಳಿಂದ ಮಾಹಿತಿ ಪಡೆಯರಿ :

ಇನ್ನರ್‌ ವೇರ್‌

ನಿಮ್ಮ ಅಂಡರ್‌ ಗಾರ್ಮೆಂಟ್ಸ್ ನ್ನು ಕೇವಲ ಅವಶ್ಯಕ ಉಡುಪು ಎಂದು ಮಾತ್ರ ಪರಿಗಣಿಸದೆ, ಅಂಗಾಂಗಗಳನ್ನು ಎತ್ತಿಹಿಡಿಯುವ ಉಡುಗೆಗಳೆಂದು ಭಾವಿಸಿ ಧರಿಸಬೇಕು, ಆಗ ದೇಹದ ಪ್ರತಿ ಅಂಗ ವೆಲ್ ಶೇಪ್ಡ್ ಎನಿಸುತ್ತದೆ.

ಬಾಡಿ ಟೈಪ್

ನಿಮ್ಮ ಸೆಕ್ಸಿ ಅಪೀಲ್‌ನ್ನು ಹೆಚ್ಚಿಸುವಂಥ ಅಂಡರ್‌ ಗಾರ್ಮೆಂಟ್ಸ್ ನ್ನು ಮಾತ್ರ ಖರೀದಿಸಿ. ನಿಮ್ಮ ಬಾಡಿ ಟೈಪ್‌ ಎಂಥದು ಎಂದು ಅರ್ಥೈಸಿಕೊಂಡು, ಪಾರದರ್ಶಕ ಲೇಸ್‌ ವರ್ಕ್‌ ಇರುವ ಅಂಡರ್‌ ಗಾರ್ಮೆಂಟ್ಸ್ ನ್ನೇ ಕೊಳ್ಳಿರಿ.

ಇತ್ತೀಚೆಗೆ ಎಲ್ಲೆಡೆ ಬ್ರೈಟ್‌ ಕಲರ್ಸ್‌ನ ಅಂಡರ್‌ ಗಾರ್ಮೆಂಟ್ಸ್ ಲಭ್ಯವಿವೆ. ನಿಮ್ಮ ಬ್ರೆಸ್ಟ್ ಹೆವಿ ಎನಿಸಿದರೆ, ಅಂಡರ್‌ ವಯರ್‌ ಬ್ರಾ ಆರಿಸಿ, ಸಣ್ಣಗಿದೆ ಎನಿಸಿದರೆ ಪ್ಯಾಡೆಡ್‌ ಬ್ರಾ ಆರಿಸಿ.

ಬೇಬಿ ಡಾಲ್

ನೀವು ನಿಮ್ಮ ಸಂಗಾತಿಯನ್ನು ನಿಮ್ಮ ಸೆಕ್ಸ್ ಅಪೀಲ್‌ನಿಂದ ಇಂಪ್ರೆಸ್‌ ಮಾಡಬಯಸಿದರೆ, ನಿಮ್ಮ ಇನ್ನರ್‌ ವೇರ್‌ನ ಮೇಕ್‌ ಓವರ್ ಮಾಡಬೇಕು. ಬೇಬಿ ಡಾಲ್ ‌ಔಟ್‌ಫಿಟ್ಸ್ ಆರಿಸಿಕೊಳ್ಳಿ. ಇದರಲ್ಲಿ ಹೆಚ್ಚು ಲೇಸ್ ಫ್ರಿಲ್ಸ್ ಇರುತ್ತವೆ. ಆದರೆ ಇಂಥ ಒಳವಸ್ತ್ರಗಳನ್ನು ವಿಶೇಷ ಸಂದರ್ಭಕ್ಕೆಂದೇ ಮೀಸಲಿಡಿ. ಇದು ನಿಮ್ಮ ಫಿಗರ್‌ಗೆ ಸರಿಯಾದ ಆಕಾರ ನೀಡುವಲ್ಲಿ ಸಮರ್ಥವಾದುದು.

ಇನ್ನರ್‌ ವೇರ್‌ನ ಮೇಕ್‌ ಓವರ್‌

277396-01-02

ನೀವು ಸೆಕ್ಸಿ ಲುಕ್ಸ್ ಬಯಸಿದರೆ, ಸ್ಟ್ರಾಪ್‌ ಲೆಸ್‌ ಬ್ರಾ ಟ್ರೈ ಮಾಡಿ ನೋಡಿ. ಇದನ್ನು ತುಸು ಎಚ್ಚರಿಕೆಯಿಂದ ಆರಿಸಬೇಕು. ಲೈಟ್ ಕಲರ್‌ ಒಳಗೆ ಡಾರ್ಕ್‌ ಕಲರ್‌ನ ಒಳವಸ್ತ್ರಗಳು ಈಗ ಫ್ಯಾಷನ್‌ ಎನಿಸಿವೆ. ಹೀಗಾಗಿ ನಿಮಗೆ ಆಫ್‌ ವೈಟ್‌ ಶರ್ಟ್‌ ಧರಿಸಬೇಕು ಎನಿಸಿದರೆ, ಆಗ ನೀವು ಡಾರ್ಕ್‌ ಪಿಂಕ್‌ ಕಲರ್‌ನ ಲಾಂಜರಿ ಧರಿಸಬೇಕು. ಆಗ ಮಾತ್ರವೇ ಒಳಗಿನ ಸೌಂದರ್ಯ ಹೊರಗೂ ಇಣುಕೀತು.

ಬಿಕಿನಿ ಬ್ಲೌಸ್‌ : ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಿಕಿನಿ ದೊಡ್ಡ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದನ್ನು ಎಲ್ಲಾ ವಯಸ್ಸಿನ ಮಹಿಳೆಯರೂ ಫಾಲೋ ಮಾಡುತ್ತಿದ್ದಾರೆ. ಬ್ಲೌಸ್‌ ಎಷ್ಟು ಚಿಕ್ಕದಾಗಿದೆ ಎಂದರೆ, ಸೀರೆ ಸಹ ಸೆಕ್ಸಿ ಡ್ರೆಸ್‌ಗಳಲ್ಲಿ ಒಂದೆಂದು ಆಗಿಬಿಟ್ಟಿದೆ. ನೀವು ಈ ಬ್ಲೌಸ್‌ ಕ್ಯಾರಿ ಮಾಡಬಯಸಿದರೆ ಈ ಕೆಳಗಿನ ಸಲಹೆಗಳನ್ನು ಗಮನಿಸುವುದು.

ಟೈಟ್‌ ಬ್ಲೌಸ್‌ : ಸೀರೆ ಎಷ್ಟು ಸುಂದರವಾಗಿದೆ ಎಂಬುದು ಬ್ಲೌಸ್‌ನ್ನು ಆಧರಿಸಿದೆ. ಬಿಕಿನಿ ಬ್ಸೌಸ್‌ನ್ನು ಸೀರೆಯ ಜೊತೆ ಕ್ಯಾರಿ ಮಾಡುತ್ತಿದ್ದರೆ, ಇದು ಬಹಳ ಎಲಿಗೆಂಟ್‌ ಲುಕ್ಸ್ ನೀಡುತ್ತದೆ. ನಿಮ್ಮ ದೇಹ ಕರ್ವಿ ಶೇಪ್‌ ಹೊಂದಿದ್ದರೆ, ಆಗ ಸೀರೆಯ ಜೊತೆ ಟೈಟ್‌ ಬ್ಲೌಸ್‌ ಚೆನ್ನಾಗಿರುತ್ತದೆ. ಅದಕ್ಕೆಂದು ಸಿನಿಮಾಗಳಲ್ಲಿ ತೋರಿಸುವಂತೆ, ಬ್ರಾ ಸೈಜ್‌ ಬ್ಲೌಸ್‌ ಧರಿಸಬಾರದು. ಅದೆಲ್ಲ ಪರದೆಗಷ್ಟೇ ಚೆಂದ.

ಸೆಲೆಬ್ರಿಟಿ ಲುಕ್ಸ್ : ಬಿಕಿನಿ ಬ್ಲೌಸ್‌ ಎಲ್ಲರಿಗೂ ಹೊಂದುತ್ತದೆ ಎಂದೇನಿಲ್ಲ. ಬಿಕಿನಿ ಬ್ಲೌಸ್‌ ಧರಿಸಲು, ನಿಮ್ಮ ದೇಹ ಸೆಲೆಬ್ರಿಟಿ ತರಹ ಫಿಟ್‌ಫೈನ್‌ ಆಗಿರಬೇಕು, ದಪ್ಪಗಿನ ಮಹಿಳೆಯರು ಇದನ್ನು ಧರಿಸದಿರುವುದೇ ಒಳ್ಳೆಯದು. ಪಾರ್ಟಿಯಲ್ಲಿ ವಿಭಿನ್ನ ಲುಕ್ಸ್ ಪಡೆಯಲು ಇದನ್ನು ಡಿಸೈನರ್‌ ಸೀರೆಯ ಜೊತೆ ಕ್ಯಾರಿ ಮಾಡಿ. ಆಗ ಇದು ಹೆಚ್ಚಿನ ಸೆಕ್ಸಿ ಲುಕ್ಸ್ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ