ಹೆಂಗಸರು ತಮ್ಮ ಉಡುಗೆ ತೊಡುಗೆ, ಸ್ಯಾಂಡಲ್ಸ್ ಗಾಗಿ ಸಾಕಷ್ಟು ಖರ್ಚು ಮಾಡುತ್ತಿರುತ್ತಾರೆ, ಆದರೆ ಇನ್ನರ್ ವೇರ್ ಯಾ ಲಾಂಜರಿಯತ್ತ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದ ಎಷ್ಟೋ ಸಲ ಅವರು ಹಲಲಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಮರ್ಪಕ ಲಾಂಜರಿ ಅನಿವಾರ್ಯ, ಆಗ ಮಾತ್ರ ನೀವು ಫಿಟ್ ಆಗಿ ಕಾಣಿಸುವಿರಿ.
ಈ ಕುರಿತು ಎಕ್ಸ್ ಪರ್ಟ್ಸ್ ಸಲಹೆ ಎಂದರೆ, ವರ್ಕ್‌ಔಟ್ ಸಮಯದಲ್ಲಿ ಸಮರ್ಪಕ ಲಾಂಜರಿ ಇಲ್ಲದಿದ್ದರೆ ಬ್ಯಾಕ್ ಪೇನ್ ಕಾಡುತ್ತದೆ. ಏಕೆಂದರೆ ಸತತ ವರ್ಕ್‌ಔಟ್‌ನಿಂದ ಬ್ರೆಸ್ಟ್ ಟಿಶ್ಯು ಹಾಳಾಗುವ ಸಾಧ್ಯತೆಗಳಿವೆ. ಆಗ ಅವು ಜೋತು ಬೀಳುತ್ತವೆ. ದೇಹಕ್ಕೆ ಸಪೋರ್ಟ್ ಸಿಸ್ಟಂ ಸರಿಯಾಗಿರಬೇಕಾದುದು ಅತ್ಯಗತ್ಯ.
ಸರಿಯಾದ ಬ್ರಾ ಆರಿಸಿ
ಟೀನೇಜ್ ಹುಡುಗಿಯರಿಂದ ಪ್ರೌಢ ಮಹಿಳೆಯರವರೆಗೂ, ಎಲ್ಲರೂ ತಂತಮ್ಮ ಬ್ರೆಸ್ಟ್ ಸೈಜ್‌ಗೆ ತಕ್ಕಂತೆ ಸರಿಯಾದ ಬ್ರಾ ಧರಿಸಬೇಕು. ಆದರೆ ವರ್ಕ್‌ಔಟ್‌ನ ಎಫೆಕ್ಟ್ ಇಡೀ ದೇಹದ ಮೇಲಾಗುತ್ತದೆ. ವ್ಯಾಯಾಮಗಳಂತೂ ಹಲವು ಬಗೆಯದಾಗಿವೆ. ಇದರಲ್ಲಿ ರನ್ನಿಂಗ್, ಏರೋಬಿಕ್ಸ್, ಜುಂಬಾ ಇತ್ಯಾದಿ ಎಲ್ಲದರ ಎಫೆಕ್ಟ್ ದೇಹದ ಮೇಲಾಗುತ್ತದೆ. ಇತ್ತೀಚೆಗೆ ಎಲ್ಲಾ ಬಗೆಯ ಬ್ರಾ ಮಾರ್ಕೆಟ್‌ನಲ್ಲಿ ಲಭ್ಯ.
ವ್ಯಾಯಾಮ ಮಾಡುವಾಗ ಕಾಟನ್ ಬದಲು ಲೈಕ್ರಾ ಬ್ರಾ ಧರಿಸಿರಿ.
ನೀವು ಮೆಡಿಟೇಶನ್ ಮಾಡುವವರಾಗಿದ್ದರೆ, ಲೈಟ್ ಸಪೋರ್ಟ್ ಬ್ರಾ ಧರಿಸಿರಿ, ಏಕೆಂದರೆ ಇದರಲ್ಲಿ ಹೆಚ್ಚಿನ ಮೂಮೆಂಟ್ಸ್ ಇರುವುದಿಲ್ಲ.
ವಾಕಿಂಗ್ ಹೋಗುವಾಗ ಮೀಡಿಯಂ ಸಪೋರ್ಟ್‌ವುಳ್ಳ ಬ್ರಾ ಧರಿಸಿರಿ.
ತುಂಬಾ ಸ್ಟ್ರಾಂಗ್ ವರ್ಕ್‌ಔಟ್ ಮಾಡುವ ಹಾಗಿದ್ದರೆ ಫುಲ್ ಸಪೋರ್ಟ್ ಬ್ರಾ ಧರಿಸಬೇಕು.
ವ್ಯಾಯಾಮ ಮಾಡುವಾಗ ಸ್ಪೋರ್ಟ್ಸ್ ಬ್ರಾ ಧರಿಸುವುದು ಎಲ್ಲಕ್ಕೂ ಉತ್ತಮ. ಇದು ಬ್ರೆಸ್ಟ್ ಶೇಪ್‌ನ್ನು ಎತ್ತಿಹಿಡಿಯುತ್ತದೆ. ಬಹಳ ಹೆಚ್ಚಿನ ಮೂಮೆಂಟ್ಸ್ ನಿಂದ ಬ್ರೆಸ್ಟ್ ನ ಸುತ್ತಲೂ ಇರು ಲಿಗಮೆಂಟ್ಸ್ ಎಳೆದಂತಾಗುತ್ತದೆ. ಇದರಿಂದ ಬ್ರೆಸ್ಟ್ ಜೋತಾಡಬಹುದು. ಈ ಸ್ಥಿತಿಯನ್ನು ಸರಿಪಡಿಸಲು ಸ್ಪೋರ್ಟ್ಸ್ ಬ್ರಾ ಉತ್ತಮ ಆಯ್ಕೆ ಎನ್ನಬಹುದು.
ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬಗೆಯ ಬ್ರಾಗಳು ಮಾರ್ಕೆಟ್‌ನಲ್ಲಿ ಲಭ್ಯ :
ಯೋಗ ಬ್ರಾ : ಈ ಬ್ರಾ ಪ್ಲಿಟ್ಸ್ ಮೆಡಿಟೇಶನ್‌ಗೆ ಹೆಚ್ಚು ಸೂಕ್ತ. ಇದು ಸಾಫ್ಟ್ ಮೆಟೀರಿಯಲ್ ನಿಂದ ರೂಪುಗೊಂಡಿದೆ. ಟೀ ಶೇಪ್‌ನ ಈ ಬ್ರಾ ಧರಿಸಲು ಬಲು ಆರಾಮದಾಯಕ.
ಹೈಪರ್ ಕ್ಲಾಸಿಕ್ ಪ್ಯಾಡೆಡ್ ಸ್ಪೋರ್ಟ್ಸ್ ಬ್ರಾ : ಇದು ಬಲು ಕಂಫರ್ಟ್ ಬ್ರಾ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದರ ಪ್ಯಾಡ್ ಸಹ ತೆಗೆದುಬಿಡಬಹುದು. ವ್ಯಾಯಾಮ ಮಾಡುವಾಗ ಈ ಬ್ರಾ ಇಡೀ ಬ್ರೆಸ್ಟ್ ನ್ನು ಫಿಟ್ ಆಗಿಡುತ್ತದೆ. ಕಾರ್ಡಿಯೋ ಸಮಯದಲ್ಲಿ ಇದನ್ನು ಧರಿಸುವುದು ಹಿತಕರ.
ರಾಪ್ ಅಪ್ ಬ್ರಾ : ಈ ಬ್ರಾ ಸಹ ವ್ಯಾಯಾಮ ಮತ್ತು ಪ್ಲಿಟ್ಸ್ ಗೆ ಪೂರಕವಾಗಿರುತ್ತದೆ. ಹೈನೆಕ್ ಲೈನ್‌ಡಬಲ್ ಲೇಯರ್ ಬಟ್ಟೆಯಿಂದ ತಯಾರಾದ ಈ ಕ್ರಾಪ್ ಟಾಪ್ ಬ್ರಾ, ಬ್ರೆಸ್ಟ್ ನ್ನು ಇಡಿಯಾಗಿ ಕವರ್ ಮಾಡುತ್ತದೆ. ಹೆವಿ ಬ್ರೆಸ್ಟ್ ವುಳ್ಳ ಸ್ಥೂಲ ಮಹಿಳೆಯರಿಗೆ ಇದು ಆರಾಮದಾಯಕ.
ಹೈಪರ್ ಸ್ಟ್ರಾಪ್ ಡಬ್ ಲೇಯರ್ ಬ್ರಾ : ಇದು ಸೂಪರ್ ಸಾಫ್ಟ್ ಸ್ಲೀವ್ಸ್, ಲೈಟ್ ವೆಯ್ಟ್ ಹಾಗೂ ಬೆವರು ಹೀರಿಕೊಳ್ಳುವ ಬ್ರಾ ಆಗಿದೆ. ಎರಡೂ ಬದಿಯಿಂದ ಕೀ ಹೋಲ್ ನಂತೆ ಆಗಿರುವ ಕಾರಣದಿಂದ, ಇದರಲ್ಲಿ ವ್ಯಾಯಾಮದ ಸಮಯದಲ್ಲಿ ಉಸಿರಾಟ ಈಝಿ ಎನಿಸುತ್ತದೆ. ಈ ಬ್ರಾ ಧರಿಸಿ ನೀವು ಆರಾಮವಾಗಿ ಜಾಗಿಂಗ್ ಹೊರಡಬಹುದು.