ಕೇಳಲು ಇದು ಸಣ್ಣ ವಿಷಯ ತಾನೇ ಎನಿಸಬಹುದು, ಆದರೆ ಎರಡೂ ವಿಷಯಗಳೂ ಒಂದೇ ಡ್ರೆಸ್‌ನಿಂದ ಸಿಗುವಂತಾಗುವುದು ಕಷ್ಟಕರವೇ ಸರಿ. ಜೊತೆಗೆ ವಿಮಾನ ಪ್ರಯಾಣವಾದ್ದರಿಂದ ಈ ಕೆಳಗಿನ ವಿಷಯಗಳತ್ತ ಅಗತ್ಯ ಗಮನಹರಿಸಬೇಕು.

ಡಿಪಾರ್ಚರ್‌ಅರೈವಲ್ ಟೈಮಿಂಗ್ಸ್ ಗಮನದಲ್ಲಿರಿಸಿಕೊಂಡು ಏರ್‌ ಕ್ರಾಫ್ಟ್  ಏರ್‌ಪೋರ್ಟ್‌ ಏರಿಯಾದಲ್ಲಿನ ಚಳಿ ಸಹಿಸಿಕೊಳ್ಳುವಂತೆ ಇರಬೇಕು. ಮುಖ್ಯವಾಗಿ ನೀವು ವಿದೇಶೀ ಪ್ರವಾಸ ಕೈಗೊಳ್ಳುವಾಗ, ಏರ್‌ಕ್ರಾಫ್ಟ್ ನಿಂದ ಎಮಿಗ್ರೇಶನ್ ಕೌಂಟರ್‌ವರೆಗೂ ತಲುಪಲು ಕಷ್ಟ ಆಗಬಹುದು. ಆ ಬಗ್ಗೆ ಯೋಚಿಸಿ. ನಿಮ್ಮ ಈ ಲುಕ್ಸ್ ಫ್ಯಾಷನೆಬಲ್, ಸ್ಟೈಲಿಶ್‌ಗ್ಲಾಮರಸ್‌ಆಗಿರಬೇಕು. ಜೊತೆಗೆ ಪ್ರಯಾಣದ ಆರಂಭದಿಂದಲೂ ಕೊನೆಯವರೆಗೂ ನೀವು ಫ್ರೆಶ್‌ ಆಗಿ ಕಂಡು ಬರಬೇಕು. ಇದಕ್ಕಾಗಿ ಕೆಳಗಿನ ಸಲಹೆ ಅನುಸರಿಸಿ :  ್‌ಕಾರ್ಡಿಗನ್‌???

ನೀವು ಚಳಿಗಾಲದ ಪ್ರದೇಶದಿಂದ ಬೇಸಿಗೆ ಪ್ರದೇಶದ ಕಡೆಗೆ ಹೊರಟಿದ್ದರೆ ಅಥವಾ ಬೇಸಿಗೆಯಿಂದ ಶೀತಲ ಪ್ರದೇಶಕ್ಕೆ..... ಆಗ ವೇಯರಿಂಗ್‌ ಡ್ರೆಸ್‌ ನಿಮಗೆ ಅತ್ಯಗತ್ಯ ಇರಬೇಕಾಗುತ್ತದೆ. ಏರ್‌ಪೋರ್ಟ್‌ಗೆ ಹೊರಡುವುದಕ್ಕೆ ಮೊದಲೇ ಎರಡೂ ಕಡೆಯ ಹವಾಮಾನಕ್ಕೆ ತಕ್ಕಂತೆ ಉಡುಪು ಅಣಿಗೊಳಿಸಿ ಇಟ್ಟುಕೊಳ್ಳಿ.

ಶೀತಲ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಹೊರಡುವಾಗ ಆರಾಮದಾಯಕ ಹಾಗೂ ಲೈಟ್‌ ವೆಯ್ಟ್ ಡ್ರೆಸೆಸ್‌ ಇರಲಿ. ಅಲ್ಲಿಗೆ ಹೋದ ಮೇಲೆ ಹೆಚ್ಚುವರಿ ಉಡುಪನ್ನು ಆರಾಮವಾಗಿ ಕಳಚಿಡಬಹುದು. ಮಹಿಳೆಯರಿಗೆ ಯಾವುದಾದರೂ ಕಾಟನ್‌ ಟ್ಯಾಂಕ್‌ ಟಾಪ್‌ ಯಾ ಓಪನ್‌ ಲೆ‌ಕಾರ್ಡಿಗನ್‌ ಜೊತೆ ಶಾರ್ಟ್‌ ಸ್ಲೀವ್ಸ್ ನ ಯಾವುದೇ ಟಾಪ್‌ ಧರಿಸಬೇಕು. ಇದು ಅವರಿಗೆ ಏರ್‌ಪೋರ್ಟ್‌ಪ್ಲೇನ್‌ ಎರಡೂ ಕಡೆ ಬೆಚ್ಚಗೆ ಇರುತ್ತದೆ. ವೀನೆಕ್‌ ಇಲ್ಲಿ ಚೆನ್ನಾಗಿ ಒಪ್ಪುತ್ತದೆ. ಅಗತ್ಯ ಬಿದ್ದಾಗ ನೀವು ಎಕ್ಸ್ ಟ್ರಾ ಪ್ರೊಟೆಕ್ಷನ್‌ಗಾಗಿ ಸ್ಕಾರ್ಫ್‌ ಅಥವಾ ಲೆಗ್ಗಿಂಗ್ಸ್ ಸಹ ಬಳಸಬಹುದು. ಇಲ್ಲದಿದ್ದರೆ ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್ ಸರಿ ಇಲ್ಲ ಎಂದುಕೊಳ್ಳುತ್ತಾರೆ. ನೀವು ಗಮ್ಯ ತಲುಪಿದ ನಂತರ ನಿಮ್ಮ ಲೆ‌ಕಾರ್ಡಿಗನ್‌ ತೆಗೆದಿರಿಸಬಹುದು. ಗಂಡಸರು ಬೆಟರ್‌ ಲುಕ್ಸ್ ಗಾಗಿ ಬಟನ್ಸ್ ವುಳ್ಳ ಓಪನ್‌ ್‌ಕಾರ್ಡಿಗನ್‌ಬಳಸುವುದು ಲೇಸು. ನೀವು ಕ್ಯಾಶ್ಯುಯೆಲ್ ‌ಆಗಿ ತೋರ್ಪಡಿಸಿಕೊಳ್ಳಲು ಬಯಸಿದರೆ ದಪ್ಪ ಹೂಡಿ ಅಥವಾ ಸ್ವೆಟರ್ ಶರ್ಟ್‌ಧರಿಸಿರಿ. ಆರಾಮದಾಯಕ ಹಾಗೂ ಸ್ಮಾರ್ಟ್‌ ಲುಕ್ಸ್ ಗಾಗಿ ಇದನ್ನು ಜೀನ್ಸ್ ಜೊತೆ ಧರಿಸಿರಿ. ಉಷ್ಣ ಪ್ರದೇಶಕ್ಕೆ ತಲುಪಿದ ಮೇಲೆ ಭಾರಿ ಜ್ಯಾಕೆಟ್ಸ್ ಯಾ ಕೋಟ್‌ ಶೋಭಿಸುವುದಿಲ್ಲ. ಇದರ ಭಾರಿ ತೂಕದಿಂದಾಗಿ ನೀವು ಏರ್‌ಪೋರ್ಟ್‌ನಲ್ಲಿ ಇಲ್ಲಿಂದ ಅಲ್ಲಿಗೆ ಓಡಾಡುವಲ್ಲಿ ತೊಂದರೆ ಎನಿಸಬಹುದು ಹಾಗೂ ವಿಮಾನದ ಸೀಟಿನಲ್ಲೂ ಹೆಚ್ಚಿನ ಜಾಗ ಬೇಡುತ್ತದೆ, ಜೊತೆಗೆ ಗಮ್ಯ ತಲುಪಿದ ನಂತರ ಇದನ್ನು ಇರಿಸಿಕೊಳ್ಳಲಿಕ್ಕೂ ಹೆಣಗಬೇಕಾಗುತ್ತದೆ.

ಉಷ್ಣ ಪ್ರದೇಶದಿಂದ ಶೀತ ಪ್ರದೇಶಕ್ಕೆ ಹೊರಡುವಾಗ ಉಡುಗೆಗಳನ್ನು ಉಲ್ಟಾ ಕ್ರಮದಲ್ಲಿ ಧರಿಸಿರಿ. ತುಸು ಹೆಚ್ಚಾಗಿ ಬೆಚ್ಚಗಿನ ಕಾರ್ಡಿಗನ್‌ ಅಥವಾ ಸ್ವೆಟರ್ ಶರ್ಟ್‌ ಧರಿಸಿ. ಹೊರಗೆ ಹೋದ ತಕ್ಷಣ, ಥಂಡಿ ವಾತಾವರಣ ಎದುರಿಸಲು ಸಿದ್ಧರಾಗಿ.

ಪ್ರಯಾಣದಲ್ಲಿ ನೀವು ಹೆಚ್ಚಿಗೆ ಶೂಸ್‌ ತೆಗೆದುಕೊಳ್ಳಬೇಡಿ. ನೀವು ಕೊಂಡೊಯ್ಯುವ ಶೂ ಕಂಫರ್ಟೆಬಲ್ ಸ್ಟೈಲಿಶ್‌ ಆಗಿರಲಿ. ಹೆಂಗಸರಿಗೆ ಫ್ಲಾಟ್ಸ್ ಯಾ ಸ್ಪೋರ್ಚ್ಸ್ ಲೋಫರ್ಸ್‌ ಸರಿ ಹೋಗುತ್ತದೆ. ಅವುಗಳಲ್ಲಿ ಸಾಕ್ಸ್ ಧರಿಸಲೇಬೇಕೆಂಬ ಕಡ್ಡಾಯವಿಲ್ಲ. ಈ ಎರಡೂ ತಾಪಮಾನಗಳ ಪ್ರದೇಶಕ್ಕೆ ಹೊಂದುವಂಥ ಇವು ಫ್ಯಾಷನೆಬಲ್ ಆಗಿಯೂ ಇರುತ್ತವೆ. ಗಂಡಸರು ಲೇಸ್‌ ರಹಿತ ಲೋಫರ್ಸ್‌ ಧರಿಸಬೇಕು, ಆಗ ಸೆಕ್ಯುರಿಟಿ ಬ್ರೇಕಿಂಗ್‌ನಲ್ಲಿ ಹೆಚ್ಚು ಸಮಯ ಹಿಡಿಯದು. ಲೇಸ್‌ ಬಿಚ್ಚಿ ಕಟ್ಟಿಕೊಳ್ಳುವ ಜಂಜಾಟ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ