ಟೀನೇಜ್‌ನಲ್ಲಿ ನಾವು ಕೆಲವೊಮ್ಮೆ ಮಾಡುವ ತಪ್ಪೆಂದರೆ ಎಲ್ಲ ಬಗೆಯ ಡ್ರೆಸ್‌ಗಳಿಗೂ ಒಂದೇ ರೀತಿಯ ಬ್ರಾ ಧರಿಸುವುದು ಮತ್ತು ಅದರಿಂದೇನು ಎಂದು ಭಾವಿಸುವುದು. ಆದರೆ ಯಾವ ಡ್ರೆಸ್‌ನೊಂದಿಗೆ ನಿಮ್ಮ ಹಳೆಯ ನಾರ್ಮಲ್ ಬ್ರಾ ಧರಿಸಿದ್ದೀರೆಂದುಕೊಳ್ಳಿ. ಆಗ ನಿಮಗಿರಬೇಕಾದ ಅಟ್ರಾಕ್ಟಿವ್ ‌ಲುಕ್‌ ಮಾಸಿಹೋಗುತ್ತದೆ. ವಾಸ್ತವವಾಗಿ ನೀವು ಆ ಡ್ರೆಸ್‌ನೊಂದಿಗೆ ಒಂದು ಪ್ಯಾಡೆಡ್‌ ಬ್ರಾ ಧರಿಸಬೇಕಿತ್ತು.

ಆದ್ದರಿಂದ ತಮ್ಮ ಟೀನೇಜ್‌ ಗರ್ಲ್ಸ್ ಗಾಗಿ ಶಾಪಿಂಗ್‌ ಹೋದಾಗ ತಾಯಂದಿರು ಅವರಿಗಾಗಿ ವಿಭಿನ್ನ ವೆರೈಟಿ ಮತ್ತು ಡಿಸೈನ್ಸ್ ನ ಲಿಂಗರಿ ಕೊಳ್ಳಿ. ನಿಮ್ಮ ಮಗಳು ಲಿಂಗರಿ ಫ್ಯಾಷನ್‌ನಲ್ಲೂ ಅಪ್‌ ಟು ಡೇಟ್‌ ಆಗಿರಲಿ.

ಟೀಶರ್ಟ್ಬ್ರಾ : ಟೀಶರ್ಟ್‌ ಬ್ರಾನಲ್ಲಿ ಶೇಪ್‌ಗಾಗಿ ತೆಳುವಾದ ಪ್ಯಾಡ್‌ ಹೊಂದಿಸಲಾಗುತ್ತದೆ. ಇದು ಆರಾಮವಾಗಿರುವುದರ ಜೊತೆಗೆ ಕ್ಲೀನ್‌ ಲುಕ್‌ ಸಹ ನೀಡುತ್ತದೆ. ನೀವು ತೆಳುವಾದ ಡ್ರೆಸ್‌ ಧರಿಸಿರುವಾಗ ಇದು ಸೂಟ್‌ ಆಗುತ್ತದೆ.

ಸ್ಟ್ರಾಪ್ಲೆಸ್ಬ್ರಾ : ಹೆಸರಿಗೆ ತಕ್ಕಂತೆ ಇದರಲ್ಲಿ ಸ್ಟ್ರಾಪ್‌ ಇರುವುದಿಲ್ಲ. ನೀವು ಸ್ಟ್ರಾಪ್‌ ಲೆಸ್‌ ಡ್ರೆಸ್‌, ಟ್ಯಾಂಕ್‌ ಟಾಪ್‌, ಹೋಲ್ಡರ್ ನೆಕ್‌ನಂತಹ ಡ್ರೆಸ್‌ ಧರಿಸುವಂತಿದ್ದರೆ, ಈ ಬ್ರಾ ಸರಿಯಾಗಿರುತ್ತದೆ. ಸ್ಟ್ರಾಪ್‌ ಲೆಸ್‌ ಬ್ರಾ ಕೊಳ್ಳುವಾಗ ಬ್ರಾದ ಸೈಡ್‌ ಮತ್ತು ಹಿಂಭಾಗದ ಪಟ್ಟಿಗಳು ಅಗಲವಾಗಿವೆಯೇ ಎಂದು ಗಮನಿಸಿ. ಹಾಗಿದ್ದಾಗ ನಿಮ್ಮ ಬ್ರಾ ಮೈಮೇಲೆ ಬಿಗಿಯಾಗಿ ಹಿಡಿದಿರುತ್ತದೆ ಮತ್ತು ಒಳ್ಳೆಯ ಫಿಟಿಂಗ್‌ ನೀಡುತ್ತದೆ.

ಪುಶ್ಅಪ್ಬ್ರಾ : ನಮಗೆ ಫುಶ್‌ ಅಪ್‌ ಬ್ರಾನ ಅಗತ್ಯವೇನಿದೆ ಎಂದು ಟೀನೇಜ್‌ ಹುಡುಗಿಯರು ಯೋಚಿಸುವುದುಂಟು. ಆದರೆ ನಿಮ್ಮ ಫಿಗರ್‌ ಚೆನ್ನಾಗಿ ಕಾಣಬೇಕೆಂದು ಬಯಸುವಿರಾದರೆ ನಿಮ್ಮಲ್ಲಿ ಖಂಡಿತ ಈ ಬ್ರಾ ಇರಲೇಬೇಕು. ಈ ಬ್ರಾದೊಳಗೆ ಜೆಲ್‌ನಿಂದ ಕೂಡಿದ ಕಪ್‌ನ್ನು ಅಳವಡಿಸಲಾಗಿದ್ದು, ಅದು ಬ್ರೆಸ್ಟ್ ನ್ನು ಉಬ್ಬಿದಂತೆ ತೋರಿಸುತ್ತದೆ. ಇದು ವಿಭಿನ್ನ ಕಲರ್‌ ಡಿಸೈನ್‌, ಪ್ರಿಂಟ್‌ ಮತ್ತು ಲೇಸ್‌ ವರ್ಕ್‌ಗಳಲ್ಲಿ ದೊರೆಯುತ್ತದೆ.

ವೈರ್ಲೆಸ್ಬ್ರಾ : ನಿಮಗೆ ಅಂಡರ್‌ವೇರ್‌ ಬ್ರಾನಲ್ಲಿ ಕಂಫರ್ಟ್‌ ಫೀಲಿಂಗ್‌ ದೊರೆಯದಿದ್ದರೆ, ಇದನ್ನು ಟ್ರೈ ಮಾಡಿ. ಇದು ಆರಾಮದಾಯಕವಾಗಿರುತ್ತದೆ. ಟಾಪ್‌, ಸ್ವೆಟರ್ ಶರ್ಟ್‌ಗಳ ಮೇಲೆ ಇದು ಚೆನ್ನಾಗಿ ಕಾಣುತ್ತದೆ.

ಪ್ಯಾಡೆಡ್ಬ್ರಾ : ಚಿಕ್ಕ ಬ್ರೆಸ್ಟ್ ಇರುವ ಹುಡುಗಿಯರಿಗೆ ಈ ಬ್ರಾ ಪರ್ಫೆಕ್ಟ್ ಆಗಿರುತ್ತದೆ. ದೊಡ್ಡ ಬ್ರೆಸ್ಟ್ ಉಳ್ಳ ಹುಡುಗಿಯರಂತೆ ನೀವು ಸಹ ಈ ಪ್ಯಾಡೆಡ್‌ ಬ್ರಾನಿಂದಾಗಿ ನಿಮ್ಮ ಕ್ಲೀವೇಜ್‌ನ್ನು ಪ್ರದರ್ಶಿಸಬಹುದು.

ಮಿನಿಮೈಸ್ಡ್ ಬ್ರಾ : ಶರೀರ ಕಡಿಮೆ ಕರ್ವಿಯಾಗಿದ್ದು ಬ್ರೆಸ್ಟ್ ದೊಡ್ಡದಾಗಿರುವವರಿಗೆ ಇದು ಹೆಚ್ಚು ಉಪಯೋಗಕರ. ಇದು ಅವರ ಕಪ್‌ ಸೈಜ್‌ನ್ನು ಕೊಂಚ ಕಡಿಮೆ ಮಾಡಿ ಒಳ್ಳೆಯ ಲುಕ್‌ ನೀಡುತ್ತದೆ.

ರಿಮೂವಬಲ್ ಪ್ಯಾಡಿಂಗ್ಬ್ರಾ : ಈ ಬ್ರಾನಲ್ಲಿ ಒಂದು ಪಾಕೆಟ್‌ ಇದ್ದು, ಅಗತ್ಯವಾದಾಗ ಅದರಲ್ಲಿ ಪ್ಯಾಡ್‌ ಇರಿಸಿಕೊಳ್ಳಬಹುದು. ದಿನ ಪ್ಯಾಡೆಡ್‌ ಬ್ರಾ ಹಾಕಲು ಇಷ್ಟಪಡದೆ, ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಬಳಸಲು ಬಯಸುವವರಿಗೆ ಈ ಬ್ರಾ ಪರ್ಫೆಕ್ಟ್ ಆಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ