ವೀಕ್‌ ಡೇಸ್‌ನಲ್ಲಿ ಫಾರ್ಮಲ್ ಮತ್ತು ವೀಕೆಂಡ್‌ನಲ್ಲಿ ಕ್ಯಾಶ್ಯುಯಲ್. ಇದು ಮಿಸ್ಟರ್‌ ಹ್ಯಾಂಡ್‌ಸಮ್ ನ ಸ್ಟೈಲ್‌ ಸ್ಟೇಟ್‌ಮೆಂಟ್‌ ಆಗಿದೆ. ಆದರೆ ಸಂದರ್ಭ ಮದುವೆ ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮವಾದರೆ, ಆಗ ಫಾರ್ಮಲ್ ಅಥವಾ ಕ್ಯಾಶ್ಯುಯಲ್ ಔಟ್‌ಫಿಟ್‌ಗಳು ಉಪಯೋಗಕ್ಕೆ ಬರುವುದಿಲ್ಲ. ಇಂತಹ ಸಂಭ್ರಮದ ಸಮಯದಲ್ಲಿ ಮಿಸ್ಟರ್‌ ಪರ್ಫೆಕ್ಟ್ ಆಗಿ ಕಾಣಲು ಎಂತಹ ಔಟ್‌ಫಿಟ್ಸ್ ಧರಿಸಬೇಕು ಎಂದು ತಿಳಿಯೋಣ ಬನ್ನಿ :

ಕುರ್ತಾ ಪೈಜಾಮ : ಕುರ್ತಾ ಪೈಜಾಮ ಎಂದೂ ಔಟ್‌ ಆಫ್‌ ಫ್ಯಾಷನ್‌ ಆಗುವುದಿಲ್ಲ. ಆದ್ದರಿಂದ ಮದುವೆಯ ಸಂದರ್ಭದಲ್ಲಿ ಇದನ್ನು ಧರಿಸಬಹುದು. ಟ್ರೆಡಿಶನಲ್ ಲುಕ್‌ಗಾಗಿ ಸಿಲ್ಕ್ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಸೆಟ್‌ ಕೊಳ್ಳಿರಿ. ಡೀಸೆಂಟ್‌ ಲುಕ್‌ ಬಯಸುವಿರಾದರೆ, ಪ್ಲೇನ್‌ ಕುರ್ತಾ ಪೈಜಾಮ ಖರೀದಿಸಿ. ಲೈಟ್‌ ಶೇಡ್‌ ಬದಲು ಆರೆಂಜ್‌, ರೆಡ್‌, ಯೆಲ್ಲೋ, ನೇವಿ ಬ್ಲೂನಂತಹ ಬ್ರೈಟ್‌ ಶೇಡ್ಸ್ ಆರಿಸಿ.

actor-siddharth-malhotra-walks-the-ramp-for-kunal-rawal-at-lfw-sr-2016

ಜೋಧ್‌ಪುರಿ : ಸೂಪರ್‌ ಸ್ಟೈಲಿಶ್‌ ಲುಕ್‌ ಬೇಕೆಂದರೆ ಜೋಧ್‌ಪುರಿ ಸೂಟ್‌ಗಿಂತ ಮಿಗಿಲಾದ ಆಯ್ಕೆ ಇನ್ನೊಂದಿಲ್ಲ. ಇದನ್ನು ಧರಿಸಿ ನೀವು ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಬಲ್ಲಿರಿ. ಜೋಧ್‌ಪುರಿ ಪ್ಯಾಂಟ್‌ನೊಂದಿಗೆ ಶಾರ್ಟ್‌ ಲೆಂತ್‌ ಕುರ್ತಾ ಅಥವಾ ವೇಸ್ಟ್ ಕೋಟ್‌ ಧರಿಸಬಹುದು. ಇದರಿಂದ ನಿಮ್ಮ ಡ್ರೆಸ್‌ನ ಸೊಬಗು ಎದ್ದು ಕಾಣುತ್ತದೆ. ಬೇಕಿದ್ದರೆ ಮಾನೊಕ್ರೋಮ್ ಶರ್ಟ್‌ ಅಥವಾ ತುಂಬು ಕುತ್ತಿಗೆಯ ಕುರ್ತಾ ಸಹ ಧರಿಸಬಹುದು. ಇದರ ಮೇಲೆ ನೆಹರೂ ಜ್ಯಾಕೆಟ್‌ ಸೂಕ್ತವಾಗಿರುತ್ತದೆ.

ವೇಸ್ಟ್ ಕೋಟ್‌ : ಮದುವೆಯ ಕಾರ್ಯಕ್ರಮಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಮೂಡ್‌ನಲ್ಲಿ ನೀವಿಲ್ಲದಿದ್ದರೆ, ಕುರ್ತಾ ಪೈಜಾಮಾ ಸೆಟ್‌ ಕೊಳ್ಳುವ ಬದಲು ವೇಸ್ಟ್ ಕೋಟ್‌ ಕೊಳ್ಳಿ ಮತ್ತು ಅದನ್ನು ನಿಮ್ಮಲ್ಲಿರುವ ಕುರ್ತಾದ ಜೊತೆಗೆ ಧರಿಸಿರಿ. ಫೆಸ್ಟಿವ್‌ ಫೀಲ್‌ಗಾಗಿ ಸಿಲ್ಕ್ ಅಥವಾ ಬ್ರೊಕೇಡ್‌ನ ವೇಸ್ಟ್ ಕೋಟ್‌ ಧರಿಸಿದಾಗ ಮಾಡರ್ನ್‌ ಲುಕ್‌ ದೊರೆಯುತ್ತದೆ. ಇದನ್ನು ಅಫಿಶಿಯಲ್ ಪಾರ್ಟಿಗಳಲ್ಲೂ ಧರಿಸಬಹುದು.

jodhpuri

ಡೆನಿಮ್ : ಮದುವೆಯ ವಿಶೇಷ ಸಂದರ್ಭದಲ್ಲಿ ಡೆನಿಮ್ ಧರಿಸಲು ಇಷ್ಟಪಡುವಿರಾದರೆ ನಿಮ್ಮ ರೆಗ್ಯುಲರ್‌ ಜೀನ್ಸ್ ಜೊತೆಗೆ ಖಾದಿ ಕುರ್ತಾ ಧರಿಸಬಹುದು. ಸೆಮಿಕ್ಯಾಶ್ಯುಯಲ್ ಲುಕ್‌ಗೆ ಇದೊಂದು ಉತ್ತಮ ಆಯ್ಕೆ. ಲೈಟ್‌ ಬ್ಲೂ ಜೀನ್ಸ್ ಜೊತೆಗೆ ಡಾರ್ಕ್‌ ಶೇಡ್‌ನ ನೀಲೆಂತ್‌ ಕುರ್ತಾ ಪರ್ಫೆಕ್ಟ್ ಸೆಟ್‌ ಆಗುತ್ತದೆ. ಜೀನ್ಸ್ ಜೊತೆಗೆ ತುಂಬು ಕುತ್ತಿಗೆಯ ಕುರ್ತಾ ಕೂಡ ಚೆನ್ನಾಗಿರುತ್ತದೆ. ಇದು ನಿಮಗೆ ಸ್ಮಾರ್ಟ್‌ ಲುಕ್‌ ನೀಡುತ್ತದೆ.

ಪಠಾನೀ : ಕೂಲ್‌ ಲುಕ್‌ಗಾಗಿ ಪಠಾನೀ ಔಟ್‌ಫಿಟ್‌ನ್ನು ಟ್ರೈ ಮಾಡಬಹುದು. ಸಿಂಗಲ್ ಶೇಡ್‌ ಪಠಾನೀ ಸುಂದರವಾಗಿ ಕಾಣುತ್ತದೆ. ಪಠಾನೀಗೆ ದಪ್ಪನಾದ ಮತ್ತು ಒಳ್ಳೆ ಫ್ಲೇರ್ ಇರುವ ಫ್ಯಾಬ್ರಿಕ್‌ ಆರಿಸಿದಾಗ ನಿಮ್ಮ ಪರ್ಸನಾಲಿಟಿಯು ಹೈಲೈಟ್‌ ಆಗುತ್ತದೆ. ಕಂಪ್ಲೀಟ್‌ ಲುಕ್‌ಗಾಗಿ ತೋಳುಗಳನ್ನು ಫೋಲ್ಡ್‌ ಮಾಡಲು ಮರೆಯದಿರಿ.

ಚೂಡಿದಾರ್‌ : ಕುರ್ತಾ ಪೈಜಾಮ ಮತ್ತು ಕುರ್ತಾ ಸಲ್ವಾರ್‌ ಪರ್ಫೆಕ್ಟ್ ಡೀಸೆಂಟ್‌ ಲುಕ್‌ ನೀಡುತ್ತವೆ ನಿಜ. ಆದರೆ ಕುರ್ತಾ ಧರಿಸಿ ಸ್ಟೈಲಿಶ್‌ ಆಗಿ ಕಾಣಲು ಬಯಸುವಿರಾದರೆ, ಪೈಜಾಮ ಅಥವಾ ಸಲ್ವಾರ್‌ ಬದಲು ಟೈಟ್‌ ಫಿಟಿಂಗ್‌ ಚೂಡಿದಾರ್‌ ಧರಿಸಿ. ಇದು ನಿಮ್ಮ ಬಾಡಿ ಕಟ್ಸ್ ನ್ನು ಹೈಲೈಟ್‌ ಮಾಡುವುದರಿಂದ ಪರ್ಸನಾಲಿಟಿಯು ಇನ್ನೂ ಆಕರ್ಷಕವಾಗಿ ಕಾಣುತ್ತದೆ. ಕಂಪ್ಲೀಟ್‌ ಲುಕ್‌ಗಾಗಿ ಸ್ಟೋಲ್ ಜೊತೆಗಿರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ