ನಿಮಗೆ ಗೊತ್ತೇ? ಕರೀನಾ ಕಪೂರ್‌ ತನ್ನ ಮದುವೆಯಲ್ಲಿ ಅತ್ತೆ ಶರ್ಮಿಳಾ ಟ್ಯಾಗೋರ್‌ಳ ಅದೇ ಶರಾರಾ ಧರಿಸಿ, ವಿವಾಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಟೌಡಿ ಪರಿವಾರದ ಅಚ್ಚುಮೆಚ್ಚಿನ ಸೊಸೆ ಆದಳು. ಬಾಲಿವುಡ್‌ನ ಈ ಹೊಸ ಟ್ರೆಂಡ್ ಅನುಸರಿಸುತ್ತಾ ಇಂದಿನ ಯುವತಿಯರು ತಮ್ಮ ಹಳೆಯ ಸೀರೆಗಳು ಹಾಗೂ ಲಹಂಗಾಗಳನ್ನು ರೀಸೈಕಲ್ ಮಾಡಿ ಅವಕ್ಕೆ ಹೊಸ ರೂಪ ನೀಡಿ, ಅವನ್ನು ಧರಿಸಿ ಪ್ರದರ್ಶಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಿಂದ ಭಾವನಾತ್ಮಕ ನಂಟು ಉಳಿಯುತ್ತದೆ. ಜೊತೆಗೆ ಹಳೆಯ ಫ್ಯಾಷನ್‌ ಸಹ ಅಕ್ಷರಶಃ ವಾಪಸ್‌ ಮರಳಿರುತ್ತದೆ. ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ ತಾಯಿ, ಅಜ್ಜಿ ಅಥವಾ ಅತ್ತೆಯವರ ಲಹಂಗಾ, ರೇಷ್ಮೆ ಸೀರೆಯನ್ನು ಮಾಡಿಫೈ ಮಾಡಿ ಮುಹೂರ್ತದ ದಿನ ಉಡುವ ಕ್ರಮ ಹೆಚ್ಚು ಜನಪ್ರಿಯವಾಗುತ್ತಿದೆ.

ಬಾಲ್ಯದಿಂದಲೂ ನಿಮಗೆ ಅಮ್ಮ, ಅಜ್ಜಿಯರ ಸೀರೆ ಉಡುವ ಅಭ್ಯಾಸವಂತೂ ಇದ್ದೇ ಇರುತ್ತದೆ. ಅದರಲ್ಲೂ ಮೈಸೂರು ಸಿಲ್ಕ್, ಕಾಂಜೀವರಂ, ಬನಾರಸ್‌ ರೇಷ್ಮೆ ಸೀರೆಗಳನ್ನು ಉಟ್ಟು ಮೆರೆಯಲು ಯಾರಿಗೆ ತಾನೇ ಇಷ್ಟಾವಾಗದು? ಹೀಗಿರುವಾಗ  ಮದುವೆಯ ದಿನ ಇಂಥದೇ ಹಳೆಯ ಸೀರೆ, ಲಹಂಗಾಗಳನ್ನು ಮಾಡಿಫೈ ಮಾಡಿ ಏಕೆ ಉಡಬಾರದು? ಹಳೆಯ ಸೀರೆಗೆ ಹೊಸ ಲುಕ್ಸ್ ಬಂದಿರುವುದರಿಂದ, ಜೊತೆಗೆ ಸಂಬಂಧದ ಭಾವನಾತ್ಮಕ ಜೋಡಣೆಯೂ ಹೆಚ್ಚು ಬಲಗೊಳ್ಳುವುದರಿಂದ ಇದು ಸ್ವಾಗತಾರ್ಹ ಕ್ರಮ.

ಸೀರೆ ಲಹಂಗಾ ರೀ ಡಿಸೈನಿಂಗ್

ಇಂದಿನ ಆಧುನಿಕ ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ, ಯುವತಿಯರು ಇಂಥ ಹಳೆಯ ಲಹಂಗಾ, ಸೀರೆಗಳನ್ನೇ ಮತ್ತೆ ಹೊಸದಾಗಿ ರೀಡಿಸೈನ್‌ ಮಾಡಿಸುತ್ತಿದ್ದಾರಂತೆ. ಫ್ಯಾಬ್ರಿಕ್‌ ದೃಷ್ಟಿಯಿಂದ ನೋಡಿದರೆ ಬ್ರೊಕೆಡ್‌ ಟಿಶ್ಯು, ಚಂದೇರಿ, ಶಿಫಾನ್‌, ಜಾರ್ಜೆಟ್‌ನ ಲಹಂಗಾಗಳ ಮೇಲೆ ಅತ್ಯುತ್ತಮ ಡಿಸೈನಿಂಗ್‌, ಬ್ಯೂಟಿಫುಲ್ ಕಸೂತಿ, ಮಿರರ್‌ ವರ್ಕ್‌ ಇತ್ಯಾದಿ ಮಾಡಿಸಬಹುದು. ಇವುಗಳ ಮೇಲೆ ಗೋಟಾ ಲೇಸ್‌, ಚಿನ್ನ, ಬೆಳ್ಳಿ, ಕಲರ್ಡ್‌ ಸ್ಟೋನ್ಸ್ ಇತ್ಯಾದಿಗಳ ಬ್ಯೂಟಿಫುಲ್ ಲುಕ್ಸ್ ಒದಗಿಸಬಹುದು.

ಈ ಕೆಳಗಿನ ಸಲಹೆಗಳನ್ನು ಅನುಸರಿಸಿ, ನೀವು ಸಹ ನಿಮ್ಮ ಅಮ್ಮ, ಅಜ್ಜಿ, ಅತ್ತೆಯರ ಹಳೆಯ ರೇಷ್ಮೆ ಸೀರೆ, ಲಹಂಗಾಗಳಿಗೆ ಹೊಸ ರೂಪ ನೀಡಬಹುದು :

ಲಹಂಗಾದ ಬಾರ್ಡರ್‌ ಚೇಂಜ್‌ ಮಾಡಿ ಅದಕ್ಕೆ ಹೊಸ ಲುಕ್ಸ್ ಕೊಡಬಹುದು. ಅಂದರೆ ಮ್ಯಾಚಿಂಗ್‌ ಚೋಲಿ ಬದಲು ಪೋಂಚು, ಶರ್ಟ್‌ ಯಾ ಕಾಂಟ್ರಾಸ್ಟ್ ಕಲರ್‌ ಟ್ರೈ ಮಾಡಿ. ಇದರಿಂದ ಈಝಿ ಲುಕ್ಸ್ ಸಿಗುತ್ತದೆ.

ಕಾಂಜೀವರಂ ಅಥವಾ ಬನಾರಸ್‌ ಸೀರೆಯಿಂದ ಬ್ಯೂಟಿಫುಲ್ ಅನಾರ್ಕಲಿ ಮಾಡಿಸಬಹುದು. ಇದರಿಂದ ನಿಮ್ಮ ಸೀರೆಗೆ ಹೊಸ ಲುಕ್‌ ದೊರೆಯುವುದಲ್ಲದೆ, ಅದನ್ನು ಧರಿಸುವುದು ಸುಲಭ ಆಗುತ್ತದೆ.

ನೀವು ಇಂಥ ಭಾರಿ ಹಳೆ ಪ್ಲೇನ್‌ ರೇಷ್ಮೆ ಸೀರೆಯಿಂದ ಗೌನ್‌ ಕೂಡ ಮಾಡಿಸಬಹುದು. ಇಂಥವು ಆರತಕ್ಷತೆ, ಈವ್ನಿಂಗ್‌ ಎಂಗೇಜ್‌ಮೆಂಟ್‌ಗಳಿಗೆ ಹೆಚ್ಚು ಒಪ್ಪುತ್ತವೆ.

ಸೀರೆಯ ಬಾರ್ಡರ್‌ ಸವೆದಿದ್ದರೆ, ಹರಿದಿದ್ದರೆ ಅದಕ್ಕೆ ಹೊಸ ಬಾರ್ಡರ್‌ ಹೊಲಿಸಿಬಿಡಿ. ಪ್ರತಿಯೊಂದು ನಗರದ ಪ್ರಮುಖ ಪೇಟೆ ಬೀದಿಗಳು ಈಗ ಇದಕ್ಕಾಗಿಯೇ ಸಿದ್ಧಗೊಂಡಿವೆ. ಇಂಥ ಕಡೆ ಎಲ್ಲಾ ಬಗೆಯ ಸ್ಟೈಲಿಶ್‌ ಬಾರ್ಡರ್‌ಗಳೂ ಸಿಗುತ್ತವೆ. ಬಾರ್ಡರ್ ಚೇಂಜ್‌ ಆದನಂತರ ಸೀರೆಯ ಗೆಟಪ್‌ ಬಿಲ್‌ಕುಲ್‌ ‌ಬದಲಾಗುತ್ತದೆ, ಹೊಚ್ಚ ಹೊಸದರಂತೆ ಕಾಣಿಸುತ್ತದೆ. ಇಂಥ ಸೀರೆ ಈಗಿನ ಹೊಸ ಮಳಿಗೆಗಳಲ್ಲಿ ಖಂಡಿತಾ ಸಿಗಲಾರವು. ಅಕಸ್ಮಾತ್‌ ಸೀರೆಯ ನಡು ಭಾಗ ತುಸು ಹರಿದಿದ್ದರೆ, ಆ ಭಾಗಕ್ಕೆ ನೀವು ಕಾಂಟ್ರಾಸ್ಟ್ ಬಣ್ಣದ ಜಾರ್ಜೆಟ್‌ ಯಾ ಶಿಫಾನ್‌ ಫ್ಯಾಬ್ರಿಕ್‌ ಹಾಕಿಸಬಹುದು. ಇದರಿಂದ ನಿಮ್ಮ ಸೀರೆ ಡಿಸೈನರ್‌ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ