ಈಗೆಲ್ಲಾ ಝೀರೋ ಸೈಜ್‌ ಮತ್ತು ತೆಳ್ಳಗಿನ ಹುಡುಗಿಯರ ಕಾಲ. ಆದರೆ ಈ ಹುಡುಗಿಯರು ತಮ್ಮ ತೆಳ್ಳಗಿನ ಬ್ರೆಸ್ಟ್ ಹಾಗೂ ಚಪ್ಪಟೆ ಹಿಪ್ಸ್ ಬಗ್ಗೆ ಕೀಳರಿಮೆ ಹೊಂದಿರುತ್ತಾರೆ. ಅವರ ಕಾನ್ಛಿಡೆನ್ಸ್ ಹೆಚ್ಚಿಸಲು ದೇಶೀಯ ಹಾಗೂ ವಿದೇಶೀಯ ಫ್ಯಾಷನ್ ಡಿಸೈನರ್‌ಗಳು ಹಾಗೂ ಅಂಡರ್‌ ಗಾರ್ಮೆಂಟ್ಸ್ ಪ್ರೊಡಕ್ಷನ್‌ ಹೌಸ್‌ ನಿತ್ಯ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಅವು ವಿಭಿನ್ನ ಡಿಸೈನ್‌ಗಳು ಮತ್ತು ಬಣ್ಣಗಳ ಪ್ಯಾಡೆಡ್‌ ಬ್ರಾಗಳಲ್ಲದೆ ಚಪ್ಪಟೆಯಾಗಿರುವ ಪೃಷ್ಟಗಳನ್ನು 36, 38 ಇರುವಂತೆ ಕಾಣಿಸಲು ಪ್ಯಾಡೆಡ್‌ ಪ್ಯಾಂಟಿ ಹಾಗೂ ಪ್ಯಾಂಟಿ ಎನ್‌ಹ್ಯಾನ್ಸರ್ಸ್‌ ಕೂಡ ಲಭ್ಯವಿದೆ.

ಪ್ಯಾಡೆಡ್‌ ಬ್ರಾ ಪಶ್ಚಿಮ ದೆಹಲಿಯ ವೀರಜಿ ಅಂಡ್‌ ಸನ್ಸ್ ಅಂಡರ್‌ ಗಾರ್ಮೆಂಟ್ಸ್ ಹೌಸ್‌ನ ಒಡತಿ ಮನ್‌ಮೀತ್‌ ಕೌರ್‌ ಹೀಗೆ ಹೇಳುತ್ತಾರೆ, ``ಸಣ್ಣ ಬ್ರೆಸ್ಟ್ ನ ಹುಡುಗಿಯರೂ ಸಹ ಸ್ಪೆಷಲ್ ಡಿಸೈನ್‌ ಮಾಡಿದ ಪ್ಯಾಡೆಡ್‌ ಬ್ರಾನಿಂದ ತಮ್ಮ ಲೋ ಕಟ್‌ ಡ್ರೆಸ್ ನಲ್ಲಿ ಭಾರಿ ಬ್ರೆಸ್ಟ್ ನವರಂತೆಯೇ ತೋರಿಸಬಹುದು. ವಿದೇಶಿ ಪ್ಯಾಡೆಡ್‌ ಬ್ರಾ ಹೆಚ್ಚಾಗಿ ಯಾವುದೇ ಹೊಲಿಗೆ ಇಲ್ಲದೆ, ಯಾವುದೇ ಗಂಟಿಲ್ಲದೇ ತಯಾರಾಗಿರುತ್ತದೆ. ಇದರ ಅನುಕೂಲವೆಂದರೆ ಬಿಗಿಯಾದ ಟೀಶರ್ಟ್‌ ಹಾಗೂ ತೆಳುವಾದ ಶರ್ಟ್‌ ಕೆಳಗೆ ಬ್ರಾದ ಹೊಲಿಗೆಯ ಲೈನುಗಳು ಕಂಡುಬರುವುದಿಲ್ಲ. ತುಂಬಾ ಚಿಕ್ಕ ಬ್ರಸ್ಟ್ ನವರು ಡಬಲ್ ಪ್ಯಾಡೆಡ್‌ ಬ್ರಾ ಆರಿಸಿಕೊಳ್ಳಬಹುದು. ಅಂತಹ ಬ್ರಾಗಳಲ್ಲಿ ಡಬಲ್ ಫೋಮ್ ಅಳವಡಿಸಿರುತ್ತಾರೆ.

ಜೆಲ್ ಸ್ಯಾಟಿನ್ಪುಶ್ಅಪ್ಬ್ರಾ

ಈ ಬ್ರಾ ಒಳಗೆ ಜೆಲ್ ಯುಕ್ತ ಫ್ಯಾಬ್ರಿಕ್‌ ಇರುತ್ತದೆ. ಅದು ನ್ಯಾಚುರಲ್ ಹೆವಿ ಬ್ರೆಸ್ಟ್ ನಂತೆ ಉಬ್ಬಿಸುತ್ತದೆ. ಅದು ಸ್ಟ್ರ್ಯಾಪ್‌ ಲೆಸ್‌ ಕೂಡ ಬರುತ್ತದೆ ಮತ್ತು ಬ್ಯಾಕ್‌ಲೆಸ್‌ ಡ್ರೆಸ್‌ಗಳಿಗೆ ಬಹಳ ಸುಂದರ ಶೇಪ್‌ ಕೊಡುತ್ತದೆ.

ರಿಮೂವೆಬಲ್ ಪ್ಯಾಡಿಂಗ್‌ ಸಿಲಿಕಾನ್‌ ಪ್ಯಾಡಿಂಗ್‌ನಂತೆ ಇದೂ ಪ್ಯಾಡಿಂಗ್‌ ಆಗಿದ್ದು ಬಟ್ಟೆಯಿಂದ ತಯಾರಾಗಿದೆ. ಇದಕ್ಕೆ ವಿಭಿನ್ನವಾಗಿ ಬ್ರಾ ತಯಾರಾಗಿರುತ್ತದೆ. ಅದರಲ್ಲಿ ಪಾಕೆಟ್‌ ಇರುತ್ತದೆ. ಅಗತ್ಯ ಬಿದ್ದಾಗ ಈ ಜೇಬುಗಳಲ್ಲಿ ಈ ಪ್ಯಾಡಿಂಗ್‌ ಹಾಕಿ. ಇದು ಒಂದು ಸ್ತನ ತೆಳ್ಳಗಿದ್ದು ಇನ್ನೊಂದು ಸ್ತನ ದಪ್ಪಗಿರುವ ಮಹಿಳೆಯರಿಗೆ ಬಹಳ ಪರಿಣಾಮಕಾರಿಯಾಗಿರುತ್ತದೆ ಅಥವಾ ಒಮ್ಮೊಮ್ಮೆ ಯಾವುದಾದರೂ ವಿಶೇಷ ಸಂದರ್ಭದಲ್ಲಿ ಪ್ಯಾಡಿಂಗ್‌ ಬ್ರಾ ಧರಿಸಲು ಇಚ್ಛಿಸುವ ಮಹಿಳೆಯರಿಗೆ ಅನುಕೂಲವಾಗಿರುತ್ತದೆ.

ಸಿಲಿಕಾನ್ಪ್ಯಾಡಿಂಗ್

ಈಗ ನೀವು ನೇರವಾಗಿ ತ್ವಚೆಯ ಮೇಲೆ ಧರಿಸುವಂತಹ ಸಿಲಿಕಾನ್‌ ಪ್ಯಾಡಿಂಗ್‌ಗಳು ಬಂದಿವೆ. ಇವು ಸ್ಕಿನ್‌ ಕಲರ್‌ನಲ್ಲಿದ್ದು ಸ್ಕಿನ್‌ನಂತೆಯೇ ಮೃದುವಾಗಿರುತ್ತವೆ. ಇದು ಪ್ಯಾಕಿಂಗ್‌ನಲ್ಲಿ ಬರುತ್ತದೆ. ಅದರ ಪ್ಯಾಕಿಂಗ್‌ ಎಸೆಯಬೇಡಿ. ಅದನ್ನು ಉಪಯೋಗಿಸಿದ ನಂತರ ಒಣಗಿಸಿ ಅಥವಾ ಒಣಗಿದ ಟವೆಲ್‌ನಿಂದ ಒರೆಸಿ ಮತ್ತೆ ಪ್ಯಾಕಿಂಗ್‌ನಲ್ಲಿ ಇಟ್ಟುಬಿಡಿ. ಇದನ್ನು 8 ಗಂಟೆಗಳಿಗಿಂತ ಹೆಚ್ಚಾಗಿ ಉಪಯೋಗಿಸಬಾರದು. ಸ್ಕಿನ್‌ ಅಲರ್ಜಿ ಇರುವವರು ಇದನ್ನು ಉಪಯೋಗಿಸಬಾರದು. ಹೆಚ್ಚು ತೇವಾಂಶದ ಸಮಯದಲ್ಲಿ ಇದು ಜಾರಬಹುದು. ಆದ್ದರಿಂದ ವರ್ಷ ಋತುವಿನಲ್ಲಿ ಇದನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಧರಿಸಿ. ಮಳೆಗಾಲಕ್ಕೆ ಬೇಗನೆ ಒಣಗುವ ಸಿಲಿಕಾನ್‌ ಪ್ಯಾಡಿಂಗ್‌ ಕೂಡ ಇದೆ. ಮಕ್ಕಳಿಗೆ ಹಾಲುಣಿಸುವ ಮಹಿಳೆಯರು ಅಥವಾ ನಿಪ್ಪಲ್ ನಿಂದ ಯಾವುದೇ ರೀತಿಯ ಸ್ರಾವವಾಗುತ್ತಿರುವ ಮಹಿಳೆಯರು ಇದನ್ನು ಧರಿಸಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ