ಮಳೆಗಾಲದಲ್ಲಿ ಎಲ್ಲಿ ನೋಡಿದರೂ ನೀರಿನ ಆರ್ಭಟವೇ ಕಂಡುಬರುತ್ತಿರುತ್ತದೆ. ನಾವು ಆಫೀಸಿಗೆ ಅಥವಾ ಹೊರಗೆಲ್ಲಾದರೂ ಸುತ್ತಾಡಲು ಹೊರಟರೆ ನಮ್ಮ ಬಟ್ಟೆಗಳು ಗಲೀಜಾದರೆ ಏನು ಗತಿ ಎಂಬ ಚಿಂತೆ ನಮ್ಮನ್ನು ಕಾಡುತ್ತಿರುತ್ತದೆ.

ಈ ಕುರಿತಂತೆ ಫ್ಯಾಷನ್‌ ಡಿಸೈನರ್‌ ಅರ್ಚನಾ ಹೀಗೆ ಹೇಳುತ್ತಾರೆ, ``ಆಕಸ್ಮಿಕ ಮಳೆಯಿಂದ ಬಟ್ಟೆ ಒದ್ದೆಯಾಗಿ ಗಂಟೆಗಟ್ಟಲೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದು ಉದ್ಯೋಗಸ್ಥ ಮಹಿಳೆಯರಿಗೆ ಅತ್ಯಂತ ತ್ರಾಸದಾಯಕ ಕೆಲಸವಾಗಿರುತ್ತದೆ.

``ಇಂತಹ ಸ್ಥಿತಿಯಲ್ಲಿ ಸೂಕ್ತ ಫ್ಯಾಬ್ರಿಕ್‌ನ ಆಯ್ಕೆ ನಿಮಗೆ ಮುಕ್ತವಾಗಿ ಜೀವಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ಹಳದಿ ಕಾಟನ್‌, ಕ್ರೇಪ್ಸ್, ಪಾಲಿಯೆಸ್ಟರ್‌, ನೈಲಾನ್‌ ಮುಂತಾದವು ಸುಲಭವಾಗಿ ನೀರನ್ನು ಹೀರಿಕೊಳ್ಳುವುದಿಲ್ಲ. ಲಿನೆನ್‌ ಬಟ್ಟೆಗಳು ಈ ಹವಾಮಾನಕ್ಕೆ ಸೂಕ್ತವಲ್ಲ.''

ಈ ಹವಾಮಾನಕ್ಕೆ ಯಾವ ಬಗೆಯ ಪೋಷಾಕು ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಿ.

ಜಾರ್ಜೆಟ್‌, ಶಿಫಾನ್‌ ಮುಂತಾದ ಪೋಷಾಕುಗಳನ್ನು ಆದಷ್ಟು ಧರಿಸಲು ಹೋಗಬೇಡಿ. ಮಳೆಯಿಂದ ಈ ಪಾರದರ್ಶಕ ಬಟ್ಟೆಗಳು ಒದ್ದೆಯಾಗಿಬಿಟ್ಟರೆ ಕಾರಣವಿಲ್ಲದೆಯೇ ಅಂಗಪ್ರದರ್ಶನ ಮಾಡಿದಂತಾಗುತ್ತದೆ.

ನೀವು ಧರಿಸುವ ಬಟ್ಟೆ ಬಹುಬೇಗ ಒಣಗುವಂತಿರಬೇಕು.

ನೀವು ಪ್ಲಸ್‌ ಸೈಜಿನವರು ಆಗಿದ್ದರೆ, ದೇಹಕ್ಕೆ ಅಂಟಿಕೊಳ್ಳುವ ಪೋಷಾಕು ಧರಿಸಬೇಡಿ.

ನೀವು ಲೆಂಥ್‌ ಪೋಷಾಕು ಧರಿಸಲು ಪ್ರಯತ್ನಿಸಿ.

ಗಾಢ ವರ್ಣದ ಬಟ್ಟೆಗಳನ್ನೇ ಧರಿಸಿ.

ಮಳೆಗಾಲದ ಸಮಯದಲ್ಲಿ ನಿಮ್ಮ ಬ್ಯಾಗಿನಲ್ಲಿ ಒಂದು ಹೆಚ್ಚುವರಿ ಪೋಷಾಕನ್ನು ಜೊತೆಗಿಟ್ಟುಕೊಳ್ಳಿ. ಅಗತ್ಯಬಿದ್ದಾಗ ಡ್ರೆಸ್ ಬದಲಿಸಲು ಅನುಕೂಲವಾಗುತ್ತದೆ. ಗುಲಾಬಿ, ನೀಲಿ, ಹಸಿರು, ಆರೆಂಜ್‌ ಮುಂತಾದ ಬಣ್ಣಗಳ ಫ್ಯಾಬ್ರಿಕ್‌ ಈ ವಾತಾವರಣದಲ್ಲಿ ಚೆನ್ನಾಗಿ ಕಾಣುತ್ತವೆ.

ರಾಂಪರ್ಸ್‌, ಸ್ಕರ್ಟ್ಸ್‌ ಲೂಸ್‌ ಪ್ರಿಂಟೆಡ್‌ ಶರ್ಟ್‌ ಮತ್ತು ಪ್ಯಾಂಟ್‌ ಮುಂತಾದ ಕ್ಯಾಶ್ಯುಯಲ್ ಗೆ ಉತ್ತಮ. ಗ್ಲಾಮರಸ್‌ ಲುಕ್‌ಗೆ ಕಫ್ತಾನ್‌, ಟೂನಿಕ್ಸ್ ಮತ್ತು ಶಾರ್ಟ್‌ ಡ್ರೆಸ್‌ ಬಹಳ ಸುಂದರವಾಗಿ ಕಾಣುತ್ತವೆ.

- ಕೆ. ಕವಿತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ