ಫ್ರಂಟ್ ನಲ್ಲಿ ಅತ್ಯಾಕರ್ಷಕ ಕಸೂತಿ ಕಲೆಯಿಂದ ಅಲಂಕೃತಗೊಂಡ ಈ ಪಿಸ್ತಾ ಗ್ರೀನ್ ವಿತ್ ಯೆಲ್ಲೋ ಡ್ರೆಸ್, ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಗೆ ಶೋಭಾಯಮಾನವಾಗಿದೆ!
ಈ ಪ್ರಿಂಟೆಡ್ ವೈಟ್ ಕುರ್ತಾ ಜೊತೆ, ಗೋಲ್ಡನ್ ಕಲರ್ ನ ಅತ್ಯಾಕರ್ಷಕ ದುಪಟ್ಟಾ, ಫೆಸ್ಟಿವ್ ಫೀಲ್ ನ ಸಡಗರ ಸಂಭ್ರಮ ಹೆಚ್ಚಿಸುತ್ತಿದೆ!
ಈ ಸ್ಲೀವ್ ಲೆಸ್ ಲೈಟ್ ಸ್ಕೈ ಬ್ಲೂ ಪ್ರಿಂಟೆಡ್ ಕುರ್ತಾ ಹಾಗೂ ಪ್ಲಾಜೋಗೆ ಜೊತೆಗೂಡಿರುವ, ಪ್ರಿಂಟೆಡ್ ಶಿಫಾನ್ ಶ್ರಗ್, ಗೌರಿಗಣೇಶ ಹಬ್ಬಕ್ಕೆ ಹೇಳಿ ಮಾಡಿಸಿದಂತಿದೆ!
ಅತ್ಯಾಕರ್ಷಕ ಮಿರರ್ ವರ್ಕ್ ಮತ್ತು ಕಸೂತಿಯಿಂದ ಸಿಂಗರಿಸಲ್ಪಟ್ಟ ಈ ಫ್ಲೇಟೆಡ್ ಲಾಂಗ್ ಕುರ್ತಾ ಹಾಗೂ ಅದರ ಸ್ಲೀವ್ಸ್, ಇವಳಿಗೆ ಅಪರೂಪದ ಲಾವಣ್ಯ ಗಳಿಸಿಕೊಟ್ಟಿದೆ. ಜೊತೆಗಿನ ಮ್ಯಾಚಿಂಗ್ ದುಪಟ್ಟಾ ಅಂತೂ ಸುಪರ್ಬ್!
ಈ ದಟ್ಟ ನೀಲಿಯ, ನಕ್ಷತ್ರ ಹುದುಗಿರುವ ಮೊಝೈಕ್ ಪ್ರಿಂಟೆಡ್ ಕ್ರಾಪ್ ಟಾಪ್ ಗೆ ಜೊತೆಗೂಡಿದೆ, ಅತ್ಯಾಧುನಿಕ ಡಿಸೈನಿನ ಪ್ರಿಂಟೆಡ್ ಸೆಮಿ ಫ್ಲೇಯರ್ಡ್ ಪ್ಯಾಂಟ್ಸ್, ಜೊತೆಗೆ ಪೇಪ್ಲಂ ಸ್ಟೈಲ್ ನ ಶ್ರಗ್, ಇವಳು ಅತಿಥಿಗಳನ್ನು ಆಹ್ವಾನಿಸಲು ಸಜ್ಜಾದಂತಿದೆ!
ವೆರಿ ಬ್ಯೂಟಿಫುಲ್ ಫ್ಲವರ್ ಪ್ರಿಂಟೆಡ್ ಟಾರ್ಕಾಯಿಸ್ ಸ್ಮಾರ್ಟ್ ಬ್ಲೂ ಕುರ್ತಾ ಜೊತೆಗಿನ ಕಾಂಟ್ರಾಸ್ಟ್ ಕಲರ್ ನ ಲೆಗ್ಗಿಂಗ್ಸ್, ಹಬ್ಬದ ಸಂಜೆಗೆ ಹೇಳಿ ಮಾಡಿಸಿದಂತಿದೆ!