ಬಾಲಿವುಡ್‌ ಆ್ಯಕ್ಟ್ರಸ್‌ ದೀಪಿಕಾ ಪಡುಕೋಣೆಯನ್ನು ಜನ ಒಬ್ಬ ಸ್ಟೈಲ್ ಐಕಾನ್‌ ರೂಪದಲ್ಲಿ ನೋಡುತ್ತಾರೆ. ಅವರು ತಮ್ಮ ಪ್ರತಿ ಸಿನಿಮಾದಲ್ಲೂ ಒಂದು ಹೊಸ ರೂಪದಲ್ಲಿ ಕಂಡುಬರುತ್ತಾರೆ. ಕಳೆದ ವರ್ಷದ `ಪೀಕೂ’ ಚಿತ್ರದಲ್ಲಿ ಅವರ ಹೊಸ ರೂಪವನ್ನು ಜನ ಸಾಕಷ್ಟು ಇಷ್ಟಪಟ್ಟಿದ್ದಾರೆ.

ವಿಶೇಷವೆಂದರೆ ಈ ಚಿತ್ರದಲ್ಲಿ ದೀಪಿಕಾ, ವೋಗ್‌ ಐ ವೇರ್‌ನ ಸ್ಟೈಲಿಶ್‌ ಸನ್‌ಗ್ಲಾಸ್‌ನಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ದೀಪಿಕಾ ಒಬ್ಬ ಮಾಡರ್ನ್‌ ಡೇ ವರ್ಕಿಂಗ್‌ ವುಮನ್‌ರ ಪಾತ್ರದಲ್ಲಿದ್ದಾರೆ. ಅವರ ಈ ಮಾಡರ್ನ್‌ ಲುಕ್‌ನ್ನು ವೋಗ್‌ ಸನ್‌ಗ್ಲಾಸ್‌ ಕಾಂಪ್ಲಿಮೆಂಟ್‌ ಮಾಡುತ್ತದೆ. ಆಧುನಿಕ ಕಾಲದಲ್ಲಿ ಸನ್‌ಗ್ಲಾಸ್‌ ಫ್ಯಾಷನ್‌ನ ಒಂದು ಭಾಗವಾಗಿಬಿಟ್ಟಿದೆ. ಅದು ಮಹಿಳೆಯರ ಲುಕ್ಸ್ ಗೆ ಔನ್ನತ್ಯ ಕೊಡುವ ಜೊತೆಜೊತೆಗೆ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಅಂದಹಾಗೆ ಮನೋವಿಜ್ಞಾನಿಗಳು ಆತ್ಮವಿಶ್ವಾಸದಲ್ಲಿ ಲುಕ್ಸ್ ನ ಪಾತ್ರ ಹೆಚ್ಚು ಎಂದು ಹೇಳುತ್ತಾರೆ. ಒಂದು ವೇಳೆ ನೀವು ಕಾನ್ಛಿಡೆಂಟ್‌ ಆಗಿ ಕಾಣುತ್ತಿದ್ದರೆ ನಿಮ್ಮ ಮಾತುಗಳನ್ನು ಚೆನ್ನಾಗಿ ಪ್ರೆಸೆಂಟ್‌ ಮಾಡಬಹುದು. ವಿಶೇಷವಾಗಿ ಈ ವಿಷಯ ಮಹಿಳೆಯರಿಗೆ ಬಹಳ ಒಪ್ಪುತ್ತದೆ. ಏಕೆಂದರೆ ಅವರು ತಮ್ಮ ಸೌಂದರ್ಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಒಂದು ವೇಳೆ ಅವರು ಫ್ಯಾಷನ್‌ ಪ್ರಿಯರಾಗಿದ್ದರೆ ಸೌಂದರ್ಯದ ಮೇಲೆ ಕೊಂಚ ಕಲೆಯಾದರೂ ಅವರು ಸಹಿಸಿಕೊಳ್ಳುವುದಿಲ್ಲ.

ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ ಸದೃಢವಾಗಿಡಲು ಆಧುನಿಕ ಯುವತಿಯರು ಫ್ಯಾಷನ್‌ನೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಈಗ ಸನ್‌ಗ್ಲಾಸ್‌ ಕೂಡ ಫ್ಯಾಷನ್‌ ಪ್ರಿಯ ಹುಡುಗಿಯರನ್ನು ಸ್ಟೈಲಿಶ್‌ ಆಗಿ ಕಾಣಿಸಲು ಸಹಾಯ ಮಾಡುತ್ತದೆ.

ವೋಗ್‌ `ಐ ವೇರ್‌’ ತನ್ನ ಸ್ಪ್ರಿಂಗ್‌ ಸಮ್ಮರ್‌ ಕಲೆಕ್ಷನ್‌ ಲಾಂಚ್‌ ಮಾಡಿದೆ. ಇದನ್ನು ವಿಶೇಷವಾಗಿ ಯಂಗ್‌ ಫ್ಯಾಷನೆಬಲ್ ಹುಡುಗಿಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಡಿಸೈನ್‌ ಮಾಡಲಾಗಿದೆ. ವೋಗ್‌ ಐ ವೇರ್‌ನ್ನು ದೀಪಿಕಾ ಪಡುಕೋಣೆ ಎಂಡಾರ್ಸ್ ಮಾಡುತ್ತಿದ್ದಾರೆ. ಈ ಐ ವೇರ್‌ ಬ್ರ್ಯಾಂಡ್‌ಗೆ ಗೋವಾದಲ್ಲಿ ನಡೆದ ಫೋಟೋಶೂಟ್‌ನಲ್ಲಿ ದೀಪಿಕಾರ ಬೇರೆ ಬೇರೆ ಪರ್ಸನಾಲ್ಟಿಗಳ ಝಲಕ್‌ ಕಂಡುಬಂದಿತು.

ದೀಪಿಕಾ ವೋಗ್‌ ಐ ವೇರ್‌ ಜೊತೆಗಿನ ತಮ್ಮ ಅನುಭವಗಳ ಬಗ್ಗೆ ಹೇಳುತ್ತಾ, ವೋಗ್‌ ಐ ವೇರ್‌ ಜೊತೆ ಸೇರಿ ನಾನು ಬಹಳ ಸಂತೋಷವಾಗಿದ್ದೇನೆ. ಈ ಬ್ರ್ಯಾಂಡ್‌ನೊಂದಿಗೆ ನಾನು 3 ವರ್ಷ ಕಳೆದಿದ್ದೇನೆ. ಈ 3 ವರ್ಷಗಳ ಪ್ರತಿ ಕ್ಷಣವನ್ನೂ ನಾನು ಚೆನ್ನಾಗಿ ಎಂಜಾಯ್‌ ಮಾಡಿದ್ದೇನೆ. ಈ ಬ್ರ್ಯಾಂಡ್‌ನಲ್ಲಿರುವ ಶೇಡ್ಸ್ ಮತ್ತು ಫ್ರೇಮ್ ಗಳಲ್ಲಿ  ನಾರಿತ್ವ ಮತ್ತು ಲೌವ್ಲಿ ಕಲರ್‌ಗಳ ಅತ್ಯುತ್ತಮ ಸಂಗಮವಿದೆ, ಎನ್ನುತ್ತಾರೆ.

ಎಲಿಗೆನ್ಸ್, ಸ್ಟೈಲ್ ‌ಮತ್ತು ಯುಟಿಲಿಟಿಯ ಮಿಶ್ರಣದಿಂದ ವೋಗ್‌ ಐ ವೇರ್‌ ನಿಮ್ಮ ವೈಯಕ್ತಿಕ ಸ್ಟೈಲ್ ಸ್ಟೇಟ್‌ಮೆಂಟ್‌ ಆಗಿದೆ.

ಹಾಗಾದರೆ ಈ ಸಮ್ಮರ್‌ನಲ್ಲಿ ನೀವು ಸಹ ವೋಗ್‌ ಐ ವೇರ್‌ನ್ನು ನಿಮ್ಮದಾಗಿಸಿಕೊಳ್ಳಿ. ಅದು ನಿಮ್ಮ ಕಣ್ಣುಗಳಿಗೆ ಸುರಕ್ಷತೆಯೊಂದಿಗೆ ನಿಮಗೆ ಗ್ಲಾಮರಸ್‌ ಹಾಗೂ ಸ್ಟೈಲಿಶ್‌ ಲುಕ್‌ ಕೊಡುತ್ತದೆ. ಬನ್ನಿ, ಈ ಬ್ರ್ಯಾಂಡ್‌ನ ಕೆಲವು ವಿಶೇಷ ಮಾಡಲ್ಸ್ ಮೇಲೆ ದೃಷ್ಟಿ ಹಾಯಿಸೋಣ ಮತ್ತು ಅವುಗಳ ವಿಶೇಷತೆಯನ್ನು ತಿಳಿಯೋಣ.

VO2795 ಪೆರಿಮೆಂಟ್‌ ಫ್ಯಾಷನ್‌ನಲ್ಲಿ ವಿಶ್ವಾಸವಿಡುವ ಮಹಿಳೆಯರಿಗಾಗಿ ಈ ಐ ವೇರ್‌ ಒಂದು ಪರ್ಫೆಕ್ಟ್ ಚಾಯ್ಸ್ ಆಗಿದೆ. ಫೇಂಟೋಸ್‌ ಫ್ರೇಮ್ ಮತ್ತು ಬಣ್ಣಗಳ ವಿಭಿನ್ನ ರೇಂಜ್‌ ಇರುವ ಈ ಐ ವೇರ್‌ ಹೈಪರ್‌ ಮಾಡರ್ನ್‌ ಲುಕ್‌ ಕೊಡುತ್ತದೆ. ಐ ಕ್ಯಾಚಿಂಗ್‌ ಮ್ಯಾಟ್‌ ಫಿನಿಶ್‌ ಮತ್ತು ಪ್ಲೇಪ್‌ ಎಫೆಕ್ಟ್ ಗಳು ಇದನ್ನು ಫ್ಯಾಷನೆಬಲ್ ಆ್ಯಕ್ಸೆಸರೀಸ್‌ಗಳ ಶ್ರೇಣಿಯಲ್ಲಿ ನಿಲ್ಲಿಸುತ್ತವೆ. ಈ ಮಾಡೆಲ್‌ನಲ್ಲಿ ಕ್ಲಾಸೀ ಹಾನಾ, ಬ್ಲ್ಯಾಕ್‌ ಮತ್ತು ಮ್ಯಾಟ್‌ ಟೋನ್‌ ಕಲರ್ಸ್‌ ಉದಾಹರಣೆಗೆ ಗ್ರೇ, ಆರೆಂಜ್‌, ಗ್ರೀನ್‌ ಮತ್ತು ಬ್ಲೂ ಸೇರಿವೆ.

VO2941 ಈ ಕ್ಯಾಟ್‌ ಐ ಸನ್‌ಗ್ಲಾಸ್‌ ಗ್ಲಾಮರಸ್‌ ಮತ್ತು ಅಥೆಂಟಿಕ್‌ ಲುಕ್‌ ಕೊಡುತ್ತದೆ. ಈ ಐ ವೇರ್‌ ಫ್ರೇಮ್ ನ ಮುಂದೆ ಮಾಡಿರುವ ಟ್ಯಾಲಿಕ್‌ ವರ್ಕ್‌ ನಿಮ್ಮನ್ನು ಫ್ಯಾಷನೆಬಲ್ ಯುವತಿಯರ ಸಾಲಿನಲ್ಲಿ ನಿಲ್ಲಿಸುತ್ತದೆ. ಜೊತೆಗೆ ಇದು ಸಾಕಷ್ಟು ಯುನಿಕ್‌ಹಾಗೂ ಇಂಫ್ಯಾಕ್ಟಿವ್ ಕೂಡ ಆಗಿದೆ. ಈ ಐ ವೇರ್‌ ನಿಮಗೆ ಡೀಪ್‌ ಬ್ಲೂ, ಬ್ರೌನ್‌, ಡಾರ್ಕ್‌ ಹಾನಾ ಮತ್ತು ಬ್ಲ್ಯಾಕ್‌ ಕಲರ್‌ನಲ್ಲಿ ಸಿಗುತ್ತದೆ.

VO2915 ನ ನೈಲಾನ್ ಫೈಬರ್‌ ಸನ್‌ ಸ್ಟೈಲ್‌ನ ಈ ಐ ವೇರ್‌ಗ್ಲಾಮರಸ್‌ ಲುಕ್‌ಗೆ ಒಂದು ಒಳ್ಳೆಯ ಆಯ್ಕೆ. ಇದರ ಸ್ಲಿ ನೈಲಾನ್ ಫೈಬರ್‌ ಟೆಂಪ್‌ ನಿಮಗೆ ಸ್ಟೈಲಿಶ್‌ ಲುಕ್‌ ಕೂಡ ಕೊಡುತ್ತದೆ. ಈ ಐ ವೇರ್‌ನೊಂದಿಗೆ ನೀವು ಕ್ಯಾಶುಯಲ್ ಎಲಿಗೆನ್ಸ್ ನ ಅನುಭವ ಪಡೆಯಬಹುದು. ಈ ಮಾಡೆಲ್‌ನಲ್ಲಿ ನಿಮಗೆ ಬ್ಲ್ಯಾಕ್‌, ಗ್ಲಿಟರ್‌ ಬ್ರೌನ್‌, ಪೆಟ್ರೋಲಿಯಂ ಗ್ರೀನ್‌, ಗ್ಲಿಟರ್‌ ಡಾರ್ಕ್‌ ರೆಡ್‌ನಂತಹ ಬಣ್ಣಗಳು ಸಿಗುತ್ತವೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ