ಫ್ಯಾಷನ್‌ ಪ್ರಿಯರು ಯಾವುದೇ ಪರಿಸ್ಥಿತಿಯಲ್ಲೂ ಟ್ರೆಂಡಿಯಾಗಿ ಕಾಣಲು ದಾರಿ ಹುಡುಕುತ್ತಿರುತ್ತಾರೆ. ಕಣ್ಣಿಗೆ ದಪ್ಪ ಲೆನ್ಸ್ ನ ಕನ್ನಡಕ ಹಾಕಿಕೊಂಡಿದ್ದರೂ ಸಹ. ಹಾಗೆ ನೋಡಿದರೆ, ಈಗ ಸನ್‌ಗ್ಲಾಸ್‌ಗಳಂತೆ ಸ್ಪೆಕ್ಸ್ ಕೂಡ ಫ್ಯಾಷನ್‌ ಲೋಕದ ಭಾಗವಾಗಿಬಿಟ್ಟಿದೆ. ಅಗತ್ಯವಿರಲಿ ಇಲ್ಲದಿರಲಿ, ಜನ ಈಗ ಸ್ಪೆಕ್ಸ್ ನ್ನು ಸ್ಟೈಲ್ ‌ಸ್ಟೇಟ್‌ಮೆಂಟ್‌ ಎಂದುಕೊಂಡಿದ್ದಾರೆ. ಆದರೆ ಕೊಂಚ ತಿಳಿವಳಿಕೆಯಿಂದ ಫ್ರೇಮ್ ಆರಿಸಿಕೊಂಡರೆ ನೀವು ಸ್ಟೈಲಿಶ್‌ ಲುಕ್‌ನೊಂದಿಗೆ ಕಂಫರ್ಟ್‌ನ ಆನಂದವನ್ನೂ ಪಡೆಯಬಹುದು.

ಮಾರುಕಟ್ಟೆಯಲ್ಲಿ ಸ್ಟೈಲ್ ‌ಮತ್ತು ಲುಕ್ಸ್ ನೊಂದಿಗೆ ಕಂಫರ್ಟ್‌ ಲೆವೆಲ್ ‌ಬಗ್ಗೆಯೂ ಗಮನಿಸುವ ಇಂತಹ ಹಲವಾರು ಬ್ರ್ಯಾಂಡ್‌ಗಳಿವೆ.

ವೋಗ್ ವೇರ್

ಅವುಗಳಲ್ಲಿ ಒಂದು. ಇದರ ಸ್ಟೈಲಿಶ್‌ ಫ್ರೇಮ್ಸ್ ಮಾರುಕಟ್ಟೆಯಲ್ಲಿ ಅನೇಕ ಬಣ್ಣಗಳು ಹಾಗೂ ಶೇಪ್‌ಗಳಲ್ಲಿ ಲಭ್ಯವಿವೆ.

ಐ ವೇರ್‌ ಆರಿಸುವಾಗ ಕೆಳಗೆ ಕೊಟ್ಟಿರುವ ವಿಷಯಗಳನ್ನು ಅಗತ್ಯವಾಗಿ ಗಮನಿಸಿ.

  1. ಸ್ಪೆಕ್ಟಕಲ್‌ನ ಸೈಜ್‌ ನಿಮ್ಮ ಮುಖಕ್ಕೆ ಹೊಂದುವಂತಿರಬೇಕು. ಅದನ್ನು ಆರಿಸುವಾಗ ಅದು ನಿಮ್ಮ ಹುಬ್ಬುಗಳನ್ನು ಕವರ್‌

ಮಾಡುವಷ್ಟು ದೊಡ್ಡದಾಗಿ ಇರಬಾರದು. ಅಂದರೆ ಬಹಳ ದೊಡ್ಡ ಫ್ರೇಮ್ ನ ಸ್ಪೆಕ್ಟಕಲ್ ಕೊಳ್ಳಬೇಡಿ.

  1. ಹಾಗೆಯೇ ಫ್ರೇಮ್ ನ ಶೇಪ್‌ ಮುಖದ ಶೇಪ್‌ಗೆ ಕಾಂಟ್ರಾಸ್ಟ್ ಆಗಿರಬೇಕು. ಒಂದು ವೇಳೆ ನಿಮ್ಮ ಮುಖ ಗುಂಡಾಗಿದ್ದರೆ, ಗುಂಡು ಫ್ರೇಮಿನ ಕನ್ನಡಕ ಕೊಳ್ಳಬೇಡಿ. ಒಂದು ವೇಳೆ ಮುಖ ಉದ್ದವಾಗಿದ್ದರೆ ಗುಂಡಗಿನ ಫ್ರೇಮ್ ನಿಮಗೆ ಚೆನ್ನಾಗಿ ಒಪ್ಪುತ್ತದೆ.
  2. ನಿಮ್ಮ ಕಣ್ಣುಗಳ ಬಣ್ಣಕ್ಕೆ ಮ್ಯಾಚ್‌ ಆಗುವ ಫ್ರೇಮ್ ಕೊಳ್ಳಬಹುದು. ಕಂದುಬಣ್ಣದ ಕಣ್ಣುಗಳಿಗೆ ಕಂದು ಫ್ರೇಮ್ ಮತ್ತು ನೀಲಿ ಕಣ್ಣುಗಳಿಗೆ ನೀಲಿ ಫ್ರೇಮ್ ಕೊಳ್ಳಬಹುದು.
  3. ಫ್ರೇಮ್ ಕೊಳ್ಳುವಾಗ ನಿಮ್ಮ ಅಗತ್ಯದ ಬಗ್ಗೆಯೂ ಗಮನಿಸಿ. ನೀವು ಕನ್ನಡಕವನ್ನು ಸದಾ ಧರಿಸಬಹುದು ಅಥವಾ ಆಗಾಗ್ಗೆ ಧರಿಸಬಹುದು.
  4. ನೀವು ಸಂದರ್ಭಕ್ಕೆ ತಕ್ಕಂತೆ ಫ್ರೇಮ್ ಆರಿಸಿಕೊಳ್ಳಬಹುದು. ನೀವು ಆಫೀಸಿಗೆ ಸ್ಪೆಕ್ಸ್ ಧರಿಸುವುದಿದ್ದರೆ ಸೆಮಿ ಸ್ಟೈಲಿಶ್‌ ಆರಿಸಿ. ಒಂದು ವೇಳೆ ವೀಕೆಂಡ್‌ನಲ್ಲಿ ಸುತ್ತಾಡುವುದಿದ್ದರೆ ಅದಕ್ಕೆ ಟ್ರೆಂಡಿ ಸ್ಪೆಕ್ಸ್ ಆರಿಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ